ಬ್ರೇಕಿಂಗ್ ನ್ಯೂಸ್
08-11-23 03:58 pm Bangalore Correspondent ಕರ್ನಾಟಕ
ಬೆಂಗಳೂರು, ನ.8: ಉಜಿರೆ ಎಸ್ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಸಿಬಿಐ ವಿಶೇಷ ಕೋರ್ಟ್ ನೀಡಿರುವ ತೀರ್ಪನ್ನು ಮರು ಪರಿಶೀಲನೆ ಮಾಡುವಂತೆ ಕೋರಿ ಸಿಬಿಐ ಅಧಿಕಾರಿಗಳು ಕರ್ನಾಟಕ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಸೌಜನ್ಯಾ ಪರ ಹೋರಾಟಗಾರರು ಒಟ್ಟು ಪ್ರಕರಣವನ್ನು ಮರು ತನಿಖೆಗೆ ಆಗ್ರಹಿಸುತ್ತಿರುವ ಮಧ್ಯೆಯೇ ಸಿಬಿಐ ಅಧಿಕಾರಿಗಳೇ ಹೈಕೋರ್ಟಿಗೆ ಮೇಲ್ಮನವಿ ಹೋಗಿರುವುದು ಕುತೂಹಲ ಮೂಡಿಸಿದೆ. ಈ ಹಿಂದೆ ತಾವು ತನಿಖೆ ನಡೆಸಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸಂತೋಷ್ ರಾವ್ ಆರೋಪಿಯಾಗಿದ್ದು, ಆತನೇ ಆರೋಪಿ ಎನ್ನುವುದಕ್ಕೆ ತಮ್ಮಲ್ಲಿ ಸಾಕಷ್ಟು ಸಾಕ್ಷ್ಯಾಧಾರ ಇದೆ, ಅದನ್ನು ಪರಿಗಣಿಸಿ ತೀರ್ಪನ್ನು ಪುನರ್ ಪರಿಶೀಲನೆ ನಡೆಸಬೇಕೆಂದು ಸಿಬಿಐನವರೇ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಸೌಜನ್ಯಾ ಕೊಲೆ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್ ದೋಷಮುಕ್ತಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ತೀರ್ಪು ಪ್ರಕಟವಾದ 60 ದಿನಗಳಲ್ಲಿ ಮೇಲ್ಮನವಿ ಹೋಗುವುದಕ್ಕೆ ಸಂತ್ರಸ್ತ ಕುಟುಂಬಕ್ಕೆ ಅಥವಾ ರಾಜ್ಯ ಸರಕಾರಕ್ಕೆ ಅವಕಾಶ ಇತ್ತು. ಆ ಸಂದರ್ಭದಲ್ಲಿ ಯಾವುದೇ ಮೇಲ್ಮನವಿ ಆ ಕೋರ್ಟಿಗೆ ಸಲ್ಲಿಕೆ ಆಗಿರಲಿಲ್ಲ. ಅದೇ ಕೋರ್ಟಿಗೆ ಅಥವಾ ಹೈಕೋರ್ಟಿಗೆ ಮೇಲ್ಮನವಿ ಹೋದಲ್ಲಿ ಹಳೆ ಆರೋಪಿಯನ್ನೇ ಮತ್ತೆ ವಶಕ್ಕೆ ಪಡೆದು ವಿಚಾರಣೆ ಪ್ರಕ್ರಿಯೆ ಮತ್ತೆ ಮುಂದುವರಿಯುವ ಸಾಧ್ಯತೆ ಇದ್ದುದರಿಂದ ಸೌಜನ್ಯಾ ಕಡೆಯವರು ಮೇಲ್ಮನವಿ ಹೋಗಿರಲಿಲ್ಲ. ಇದೀಗ ಸಿಬಿಐ ಅಧಿಕಾರಿಗಳೇ ಸಂತೋಷ್ ರಾವ್ ಆರೋಪಿಯೆಂದು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಉಜಿರೆ ಎಸ್ಡಿಎಂ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಸೌಜನ್ಯಾ 2012ರ ಅಕ್ಟೋಬರ್ 10ರಂದು ಸಂಜೆ ಹೊತ್ತಿಗೆ ಕಾಲೇಜು ಬಿಟ್ಟು ಮನೆ ಕಡೆಗೆ ತೆರಳುತ್ತಿದ್ದಾಗ ಧರ್ಮಸ್ಥಳ ಬಳಿಯ ಪಾಂಗಾಳ ಎಂಬಲ್ಲಿ ದುಷ್ಕರ್ಮಿಗಳು ಅಪಹರಿಸಿದ್ದರು. ಬಳಿಕ ಮರುದಿನ ಆಕೆಯ ಶವ ಅದೇ ಭಾಗದ ಪೊದೆಗಳ ನಡುವೆ ಪತ್ತೆಯಾಗಿತ್ತು. ವಿಕೃತವಾಗಿ ಅತ್ಯಾಚಾರಗೈದು ಅರೆ ಬೆತ್ತಲೆಯಾಗಿದ್ದ ಸ್ಥಿತಿಯಲ್ಲಿ ಸೌಜನ್ಯಾ ಶವ ಸಿಕ್ಕಿತ್ತು. ತೀವ್ರ ಆಕ್ರೋಶ ಕೇಳಿಬರುತ್ತಲೇ ಪ್ರಕರಣವನ್ನು ಮೊದಲಿಗೆ ಸಿಐಡಿಗೆ ಕೊಡಲಾಗಿತ್ತು. ಆನಂತರ, ರಾಜ್ಯ ಸರಕಾರವೇ ಸಿಬಿಐ ತನಿಖೆಗೆ ಕೊಟ್ಟಿತ್ತು.
ಎರಡೇ ವರ್ಷಗಳಲ್ಲಿ ತನಿಖೆ ಪೂರ್ತಿಗೊಳಿಸಿ ಸಿಬಿಐ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ 11 ವರ್ಷಗಳ ವಿಚಾರಣೆ ಬಳಿಕ ಸಿಬಿಐ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯೆಂದು ತೋರಿಸಿದ್ದ ಸಂತೋಷ್ ರಾವ್ ನನ್ನು ಖುಲಾಸೆಗೊಳಿಸಿತ್ತು. ಈ ರೀತಿಯ ತೀರ್ಪು ಬಂದ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಮತ್ತೆ ಆಕ್ರೋಶದ ಜ್ವಾಲೆ ಎದ್ದಿತ್ತು. ಸಂತೋಷ್ ರಾವ್ ಆರೋಪಿಯಲ್ಲ ಎಂದಾದರೆ, ಸೌಜನ್ಯಾ ಕೊಲೆಗಾರರು ಯಾರು ಅನ್ನುವ ಪ್ರಶ್ನೆ ಬಂದಿತ್ತು. ಹೀಗಾಗಿ ಒಟ್ಟು ಪ್ರಕರಣವನ್ನು ಮರು ತನಿಖೆ ಮಾಡಬೇಕೆಂದು ಸೌಜನ್ಯಾ ಪರ ಹೋರಾಟಗಾರರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ, ಹೈಕೋರ್ಟಿನಲ್ಲಿ ಮರು ತನಿಖೆಗೆ ಆಗ್ರಹಿಸಿ ಅರ್ಜಿಯನ್ನು ಸಲ್ಲಿಸಲು ತಯಾರಿ ನಡೆಸಿದ್ದಾರೆ. ಇದರ ನಡುವಲ್ಲೇ ಸಿಬಿಐ ಅಧಿಕಾರಿಗಳು ರಾಜ್ಯ ಸರಕಾರದ ಕಡೆಯಿಂದ ಮೇಲ್ಮನವಿ ಹೋಗಿದ್ದು, ಕದನ ಕುತೂಹಲಕ್ಕೆ ಕಾರಣವಾಗಿದ್ದಾರೆ.
The CBI has appealed to the High Court to challenge the CBI Special Court's verdict acquitting Santosh Rao in the Dharmasthala Soujanya rape and murder case. The case involves the tragic incident of a student's abduction, rape, and murder near Dharmasthala. After an 11-year trial, the CBI Special Court's decision prompted the CBI's appeal to the High Court for a review, despite protests and demands for a fresh investigation.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 12:07 pm
HK News Desk
Gold Loan Scam at Paduva Society, ShaktiNagar...
30-06-25 06:12 pm
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm