ಬ್ರೇಕಿಂಗ್ ನ್ಯೂಸ್
03-11-23 06:54 pm HK News Desk ಕರ್ನಾಟಕ
ತುಮಕೂರು, ನ.3: ಸಚಿವ ಪರಮೇಶ್ವರ್ ಅವರಿಗೆ ಸಿಎಂ ಆಗುವ ಅವಕಾಶವಿದೆ. ಸಿದ್ದರಾಮಯ್ಯ ಬಳಿಕ ಪರಮೇಶ್ವರ್ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದ್ದಾರೆ.
ಪರಮೇಶ್ವರ್ ಈಗ ಹೋಮ್ ಮಿನಿಸ್ಟರ್ ಆಗಿದ್ದಾರೆ. ಮುಂದೆ ಏನು ಬೇಕಾದ್ರೂ ಆಗಬಹುದು. ಡಾಕ್ಟರೇ, ನಿಮಗೆ ಅದೃಷ್ಟಯಿದೆ. ಆಡಳಿತ ನಡೆಸುತ್ತೀರಿ ಅಂತ ಹಿಂದೊಮ್ಮೆ ಹೇಳಿದ್ದೆ. ಯಾಕಂದ್ರೆ ಅವರಿಗೆ ಅದೃಷ್ಟ ಇದೆ ಅಂತಾ ನಾನು ಭಾವಿಸಿದ್ದೇನೆ. ನಮ್ಮ ಜಿಲ್ಲೆಯಿಂದ ಒಬ್ಬ ಮುಖ್ಯಮಂತ್ರಿ ಆಗ್ತಾರೆ ಅಂದ್ರೆ ನಾವೆಲ್ಲಾ ಸಂತೋಷ ಪಡುತ್ತೇವೆ. ನಾವೆಲ್ಲಾ ಮುಖ್ಯಮಂತ್ರಿ ಆದಂತೆ ಭಾವಿಸುತ್ತೇವೆ. ಸಿದ್ದರಾಮಯ್ಯ ಇರೊವರೆಗೆ ನಾವೆಲ್ಲಾ ಸಿದ್ದರಾಮಯ್ಯ ಪರ. ನಾವು, ಪರಮೇಶ್ವರ್ ಇಬ್ಬರು ಅವರ ಪರ ಇರುತ್ತೇವೆ.
ಸಿದ್ದರಾಮಯ್ಯ ಹೊರತು ಪಡಿಸಿದ್ರೆ, ಪರಮೇಶ್ವರ್ ಸಿಎಂ ಆಗಬೇಕು ಅಂತ ಬಯಸುತ್ತೇವೆ. ಎಐಸಿಸಿಯವರು ನಮಗೆ ಏನು ಮಾತನಾಡದಂತೆ ಹೇಳಿದ್ದಾರೆ. ಆದರೆ ಇಷ್ಟು ಮಾತ್ರ ಹೇಳುತ್ತೇನೆ. ಮುಂದೆ ಏನೂ ಹೇಳಲ್ಲ ಎಂದು ಹೇಳಿದರು. ನಾನು, ಪರಮೇಶ್ವರ್ ಒಟ್ಟಿಗೆ ಸಭೆಯಲ್ಲಿ ಕಾಣಿಸಿಕೊಂಡು ತುಂಬಾ ದಿನವಾಗಿತ್ತು. ಹಾಗಾಗಿ ನನ್ನ ಮನಸಿನ ಭಾವನೆ ಹೇಳಿದ್ದೇನೆ. ನಾನು ಯಾರಿಗೂ ಹೆದರಲ್ಲ, ಈಗ ಮಾತನಾಡಿದ್ದು ಆಗೋಯ್ತು, ಮುಂದೆ ಮಾತನಾಡಲ್ಲ ಅಂತ ಹೇಳ್ತೀವಿ. ನಾನಂತೂ ಮುಂದೆ ಚುನಾವಣೆಗೆ ನಿಲ್ಲೋದಿಲ್ಲ ಎಂದು ತುಮಕೂರಿನಲ್ಲಿ ನಡೆದ ನೂತನ ಪೊಲೀಸ್ ಸಮುಚ್ಚಯ ಉದ್ಘಾಟನೆ ಸಮಾರಂಭದಲ್ಲಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ರಾಜಣ್ಣ ಅವರ ಈ ಹೇಳಿಕೆ ವಿವಾದಕ್ಕೆ ಒಳಗಾಗುತ್ತಿದ್ದಂತೆ ಮತ್ತೆ ಸ್ಪಷ್ಟನೆ ನೀಡಿದ ರಾಜಣ್ಣ, ನಾನು ಹೇಳಿದ್ದರಲ್ಲಿ ತಪ್ಪಿಲ್ಲ. ಇರೋದನ್ನು ಹೇಳಿದ್ದೇನೆ. ಮುಂದೆ ಪರಮೇಶ್ವರ್ ಅವರೇ ಸಿಎಂ ಆಗುತ್ತಾರೆ ಎಂದು ಪುನರುಚ್ಚರಿಸಿದ್ದಾರೆ.
Minister Parameshwara has the opportunity to become the CM. Co-operation Minister K N Rajanna has said that Parameshwara will be the chief minister after Siddaramaiah.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm