ಬ್ರೇಕಿಂಗ್ ನ್ಯೂಸ್
24-10-23 05:29 pm Giridhar Shetty, Political Correspondent ಕರ್ನಾಟಕ
ಬೆಂಗಳೂರು, ಅ.24: ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಏರೋದು ಯಾರು, ಅಹಿಂದ ವರ್ಗದ ನಾಯಕನ ಸ್ಥಾನ ತುಂಬುವ ವ್ಯಕ್ತಿ ಯಾರು ಅನ್ನುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಇದಕ್ಕಾಗಿ ಡಿಕೆ ಶಿವಕುಮಾರ್ ವಿರೋಧಿ ಬಣದಲ್ಲಿರುವ ಕಾಂಗ್ರೆಸ್ ನಾಯಕರು ಗಂಭೀರ ಚಿಂತನೆಯಲ್ಲಿ ತೊಡಗಿದ್ದು ಅಹಿಂದ ವರ್ಗದ ಮತ್ತೊಬ್ಬ ವ್ಯಕ್ತಿಯನ್ನು ಉತ್ತರಾಧಿಕಾರಿ ಹುದ್ದೆಗೇರಿಸಲು ಲೆಕ್ಕ ಹಾಕಿದ್ದಾರೆ. ಅದಕ್ಕಾಗಿ ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ ಅವರನ್ನು ಮುಂದಿನ ನಾಯಕನ ಸ್ಥಾನಕ್ಕೆ ಪ್ರಾಜೆಕ್ಟ್ ಮಾಡಲು ಒಂದಷ್ಟು ಶಾಸಕರು ಮುಂದಾಗಿದ್ದಾರೆ. ಇದೇ ನೆಲೆಯಲ್ಲಿ ಕಾಂಗ್ರೆಸಿನಲ್ಲಿ ಮತ್ತೊಂದು ಪವರ್ ಪಾಯಿಂಟ್ ಕೇಂದ್ರೀಕರಣ ಆಗುತ್ತಿರುವ ಸೂಚನೆ ಲಭಿಸಿದೆ.
ಹಾಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ತಮ್ಮ ಕೆಲಸ ಆಗುತ್ತಿಲ್ಲ ಎಂಬ ನೋವಿನಲ್ಲಿರುವ ಉತ್ತರ ಕರ್ನಾಟಕ ಭಾಗದ ಶಾಸಕರು ಮತ್ತು ಸಿದ್ದರಾಮಯ್ಯ ಬಳಗದಲ್ಲಿ ಗುರುತಿಸಿಕೊಂಡಿರುವ ಶಾಸಕರು ತಮ್ಮ ಮುಂದಿನ ನಾಯಕನಾಗಿ ಸತೀಶ್ ಜಾರಕಿಹೊಳಿ ಅವರನ್ನು ಫೋಕಸ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಬೆಳಗಾವಿಯಲ್ಲಿ ಕೇಂದ್ರೀಕರಣ ಆಗುತ್ತಿರುವ ಪವರ್ ಪಾಯಿಂಟ್, ಮುಂದಿನ ನಡೆಯ ಬಗ್ಗೆ ಲೆಕ್ಕ ಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಆಗುತ್ತಿರುವ ಪ್ರಬಲ ನಡೆ ಇದಾಗಿದ್ದು, ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮದೇ ಹೆಸರು ಇರಬೇಕು ಅನ್ನುವ ರೀತಿ ಬಿಂಬಿಸಲು ಹೊರಟಿದ್ದಾರೆ. ಅದಕ್ಕಾಗಿ ತನ್ನ ಜೊತೆಗಿರುವ ಶಾಸಕರು ಎಷ್ಟು ಅನ್ನುವುದನ್ನು ಲೆಕ್ಕ ಹಾಕಿ ಹೈಕಮಾಂಡಿಗೆ ತೋರಿಸಲು ಗುಂಪು ಕಟ್ಟುತ್ತಿದ್ದಾರೆ.
ಇತ್ತೀಚೆಗೆ ಸತೀಶ್ ಜಾರಕಿಹೊಳಿ ತನ್ನೊಂದಿಗೆ ಪ್ರಬಲ ಗುಂಪು ಇದೆಯೆಂಬುದನ್ನು ತೋರಿಸಲು ಮೈಸೂರು ದಸರಾಕ್ಕೆ 20 ಶಾಸಕರ ಜೊತೆಗೆ ಹೊರಡಲು ರೆಡಿ ಮಾಡಿಕೊಂಡಿದ್ದರು. ಆದರೆ ಜಾರಕಿಹೊಳಿ ನಡೆಗೆ ಹೈಕಮಾಂಡ್ ಕೊನೆಕ್ಷಣದಲ್ಲಿ ಬ್ರೇಕ್ ಹಾಕಿತ್ತು. ಈ ರೀತಿಯ ನಡೆ ಮಾಧ್ಯಮಕ್ಕೆ ಆಹಾರವಾಗುತ್ತೆ ಎನ್ನುವ ನೆಲೆಯಲ್ಲಿ ಜಾರಕಿಹೊಳಿ ನಡೆಗೆ ನಕಾರ ಸೂಚಿಸಿದ್ದರು. ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಬಲವಾಗುತ್ತಿದ್ದಾರೆ, ಅದಕ್ಕಾಗಿ ಜಾರಕಿಹೊಳಿ ತೊಡೆ ತಟ್ಟುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡರೂ, ಒಳಗಿನ ಗುಟ್ಟು ಬೇರೆಯೇ ಇದೆ. ರಾಜ್ಯದಲ್ಲಿ ಡಿಕೆಶಿಗೆ ಎದುರಾಗಿ ಮತ್ತೊಂದು ಪವರ್ ಪಾಯಿಂಟ್ ಸೃಷ್ಟಿಸುವುದೇ ಇದರ ಹಿಂದಿನ ಅಜೆಂಡಾ ಇದ್ದಂತಿದೆ.
ಈ ರೀತಿಯ ಬೆಳವಣಿಗೆಯನ್ನು ಸ್ವತಃ ಸತೀಶ್ ಜಾರಕಿಹೊಳಿ ಅವರೂ ನಿರಾಕರಿಸಿಲ್ಲ. ನಮ್ಮದು ಬಂಡಾಯವೂ ಅಲ್ಲ, ಗುಂಪು ಯಾರ ವಿರುದ್ಧವೂ ಅಲ್ಲ, ಯಾರಿಗೆ ಸಂದೇಶ ಕಳಿಸೋದಕ್ಕೂ ಅಲ್ಲ. ಡ್ಯಾಮೇಜ್ ಮಾಡಲೂ ಅಲ್ಲ. ಸಮಾನ ಮನಸ್ಕರ ಗುಂಪು ಅಷ್ಟೇ ಎಂದು ಹೇಳಿದ್ದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಂತೆ ಕಾಣುತ್ತಿದೆ. ಇದಲ್ಲದೆ, ಪಕ್ಷಕ್ಕಾಗಿ ರಾಜಿ ಅನಿವಾರ್ಯ. ಅದು ನನ್ನ ಸೋಲಲ್ಲ, ನಮ್ಮ ಕೋಟೆಯನ್ನು ಯಾರಿಗೂ ಛಿದ್ರ ಮಾಡಲು ಆಗಲ್ಲ. ಸಮಾನ ಮನಸ್ಕ ಶಾಸಕರ ತಂಡ ನನ್ನ ಜೊತೆಗಿರುವುದು ನಿಜ. ಎಷ್ಟು ಶಾಸಕರಿದ್ದಾರೆ ಅನ್ನೋದು ಮುಂದೆ ಗೊತ್ತಾಗಲಿದೆ ಎಂಬ ಅವರ ಮಾತು ತಮ್ಮೊಳಗಿನ ಚಟುವಟಿಕೆ, ಗುಂಪು ಗಟ್ಟಿಗೊಳ್ಳುತ್ತಿರುವುದನ್ನು ಸೂಚಿಸಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕುರುಬರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ, ಯಾರೂ ಶಾಸಕರಿಲ್ಲ. ಹೀಗಾಗಿ ಈ ಸಮುದಾಯದಿಂದಲೇ ಒಬ್ಬರನ್ನು ಲೋಕಸಭೆಗೆ ಕಳಿಸಬೇಕೆಂಬ ಬಯಕೆ ಇದೆ ಎಂಬುದನ್ನೂ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ಆಪ್ತ ಶಾಸಕರೊಂದಿಗೆ ಊಟ- ಉಪಾಹಾರ, ಚರ್ಚೆ, ಲೆಕ್ಕಾಚಾರದಲ್ಲಿ ತೊಡಗುತ್ತಿರುವ ಜಾರಕಿಹೊಳಿ, ಸಿದ್ದರಾಮಯ್ಯ ಬಳಿಕ ಅಹಿಂದ ತಂಡದ ನಾಯಕರಾಗಿ ಹೊರಹೊಮ್ಮಲು ವೇದಿಕೆ ರಚಿಸುತ್ತಿದ್ದಾರೆ. ತಮ್ಮ ಮನೆಗೆ ಆಗಮಿಸಿದ್ದ ಸಚಿವ ರಾಜಣ್ಣ, ನಾಗೇಂದ್ರ ಹಾಗೂ ಹಲವು ಶಾಸಕರೊಂದಿಗೆ ಗೌಪ್ಯ ಸಭೆ ನಡೆಸಿದ್ದು ಸರ್ಕಾರದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಿದ್ದರಾಮಯ್ಯ ಉತ್ತರಾಧಿಕಾರಿ ಯಾರು ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಈ ಅವಧಿಗೆ ಬಹುತೇಕ ಮುಗಿಯುವ ಲಕ್ಷಣ ಕಾಣುತ್ತಿದೆ. ಒಂದೋ ಪೂರ್ಣಾವಧಿ ಅಥವಾ ಅರ್ಧಕ್ಕೆ ಮುಖ್ಯಮಂತ್ರಿ ಸ್ಥಾನ ಬದಲಾದರೂ ಅಚ್ಚರಿ ಇಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಮುಂದೆ ಆ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬರುತ್ತಾರೆ ಅನ್ನುವ ಲೆಕ್ಕಾಚಾರವೂ ಇದೆ. ಆದರೆ ಡಿಕೆಶಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಬಯಸದ ಅನೇಕ ಶಾಸಕರು ಕಾಂಗ್ರೆಸಿನಲ್ಲಿದ್ದಾರೆ. ಹೀಗಾಗಿ ಡಿಕೆಶಿ ಅವರನ್ನು ಒಪ್ಪದ ಶಾಸಕರು ಮುಂದಿನ ತಮ್ಮ ನಾಯಕ ಯಾರೆಂದು ಈಗಲೇ ಪವರ್ ಪಾಯಿಂಟ್ ಸೃಷ್ಟಿಸಲು ರೆಡಿಯಾಗುತ್ತಿದ್ದಾರೆ. ಲಿಂಗಾಯತ, ಒಕ್ಕಲಿಗರ ಮುಂದೆ ಪ್ರಭಾವ ತೋರಿಸಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದು ಅಹಿಂದ ವರ್ಗದಲ್ಲಿ ಸಿದ್ದರಾಮಯ್ಯ ಮಾತ್ರ. ಸ್ಫಟಿಕ ಸಮಾಜವಾದ, ಕಟು ಎಡಪಂಥೀಯ ಧೋರಣೆಯುಳ್ಳ ಸಿದ್ದರಾಮಯ್ಯ ರೀತಿಯ ಮತ್ತೊಂದು ವ್ಯಕ್ತಿತ್ವ ಸತೀಶ್ ಜಾರಕಿಹೊಳಿ ಅವರದ್ದು. ಹೀಗಾಗಿ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗದ ಮತ್ತೊಬ್ಬ ಪ್ರಬಲ ನಾಯಕನಾಗಿ ಸತೀಶ್ ಜಾರಕಿಹೊಳಿ ಅವರನ್ನು ಈಗಲೇ ಫೋಕಸ್ ಮಾಡುವುದಕ್ಕೆ ಬೆಂಬಲಿಗ ಶಾಸಕರು ಚಿಂತನೆ ನಡೆಸಿದ್ದಾರೆ.
ಒಂದ್ವೇಳೆ, ಡಿಕೆಶಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದರೂ, ಸಿದ್ದರಾಮಯ್ಯ ಬಣದ ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ಸಿಗಲೇಬೇಕು ಅನ್ನುವ ಪಟ್ಟು ಹಾಕುವ ಚಿಂತನೆಯೂ ಇದರ ಹಿಂದಿದೆ. ಕಾಂಗ್ರೆಸ್ ಒಳಗೆ ಗುಂಪುಗಾರಿಕೆ ಇದೆ, ಅದು ಬಂಡಾಯ ಅಲ್ಲ ಅನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ಮುಂದಿನ ರಾಜಕೀಯ ಬೆಳವಣಿಗೆಯ ಸೂಚನೆಗಳನ್ನು ಹೇಳುತ್ತಿರುವುದು ನಿಜ.
Ministers have to help win LS seats to retain berths in Siddu cabinet, political report by Headline Karnataka. The outcome of the 2024 LS polls is likely to have a bearing on the Congress government in Karnataka as the party's high command has given a task to not only Chief Minister Siddaramaiah and Deputy Chief Minister DK Shivakumar but also the ministers to ensure the victory of the party’s candidates in their respective Lok Sabha Constituencies, sources said
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm