ಬ್ರೇಕಿಂಗ್ ನ್ಯೂಸ್
04-10-23 01:48 pm HK News Desk ಕರ್ನಾಟಕ
ಶಿವಮೊಗ್ಗ, ಅ.4: ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಅನೇಕ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದು ಶಿವಮೊಗ್ಗದಲ್ಲಿ ಕಳೆದ ಹತ್ತು ವರ್ಷದಲ್ಲಿ ಆಗಿರುವ ಇಸ್ಲಾಮಿಕ್ ಬೆಳವಣಿಗೆಯನ್ನು ತೋರಿಸುತ್ತಿದೆ. ಶಿವಮೊಗ್ಗ ಇಸ್ಲಾಮೀಕರಣದ ಪ್ರಯೋಗ ಶಾಲೆಯಾಗಿದೆ. ಇಂಥ ಮಾನಸಿಕತೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಶರಣಾಗತಿಯಾಗಿದ್ದಾರೆ ಎಂದು ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಘಟಕ ಜಗದೀಶ್ ಕಾರಂತ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಗೃಹ ಸಚಿವರ ಹೇಳಿಕೆಗಳನ್ನು ಗಮನಿಸಿದರೆ ಇವರೆಲ್ಲ ಮೂಲಭೂತವಾದಿಗಳಿಗೆ ಶರಣಾಗತಿಯಾಗಿರುವುದು ಸ್ಪಷ್ಟವಾಗುತ್ತದೆ. ಇಸ್ಲಾಮಿಕರಣದ ಕಾಲ ಕೆಳಗೆ ಈ ಮೂವರು ಇದ್ದಾರೆಂದು ನನಗನಿಸುತ್ತಿದೆ. ಆಡಳಿತ ನಡೆಸುತ್ತಿರುವ ಈ ಮೂವರ ಹೇಳಿಕೆಗಳು, ನಡೆದುಕೊಳ್ಳುತ್ತಿರುವ ರೀತಿಯನ್ನು ಅವರ ದೌರ್ಬಲ್ಯ ಎಂದು ನಾನು ಹೇಳುವುದಿಲ್ಲ. ಇದರ ಹಿಂದೆ ಶರಣಾಗತಿ ಇದೆ. ಸಿದ್ಧರಾಮಯ್ಯ ತೀರ್ಮಾನ ಮಾಡಿದ್ದಾರೆ. ಹಿಂದು ಸಮಾಜವನ್ನ ಒಡೆದು ಹಾಕಿ ಮುಗಿಸಬೇಕೆಂದು ತೀರ್ಮಾನಿಸಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗಳು, ಹಿಂದುಗಳ ಬಗೆಗಿರುವ ತಾತ್ಸಾರ ಮತ್ತು ಅವರ ದುರ್ವರ್ತನೆಯನ್ನು ತೋರಿಸುತ್ತಿದೆ. ಮುಸ್ಲಿಮರಿಗೆ ನೋವಾಗಬಾರದೆಂದು ಹೇಳಿಕೆ ನೀಡುತ್ತಿದ್ದಾರೆ. ಇಂತಹ ಸಿದ್ಧರಾಮಯ್ಯಗಳು ಬಹಳಷ್ಟು ಹುಟ್ಟಿದ್ದವೆ, ಬಹಳ ಸತ್ತಿದ್ದೂ ಆಗಿವೆ. ಇದರಿಂದ ಏನೂ ಆಗಲ್ಲ, ಆದರೆ ಆ ಜಾಗದಲ್ಲಿ ಕೂತಾಗ ಪ್ರಾಮಾಣಿಕತೆ ಬೇಕಲ್ಲ. ಮಾನಸಿಕ ವೈಚಾರಿಕತೆ ಬೇರೆ ಇದ್ದರೂ, ಆಡಳಿತ ವಹಿಸ್ಕೊಂಡ ಮೇಲೆ ತೀರ್ಮಾನ ಸರಿ ಇರಬೇಕಲ್ಲ. ಬೇಲಿಯೇ ಎದ್ದು ಹೊಲ ಮೇಯುತ್ತದೆ ಎಂದರೆ ಹಿಂದೂ ಸಮಾಜ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆಲ್ಲ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Jagdish Karnth slams Shivamogga stone pelting incident, says its a clear example of making city into Islamic state.
02-07-25 11:02 pm
Bangalore Correspondent
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
Bengaluru Rural Name: ಬೆಂಗಳೂರು ಗ್ರಾಮಾಂತರ ಜಿಲ್...
02-07-25 10:05 pm
CM Siddaramaiah: ಐದು ವರ್ಷ ನಾನೇ ಸಿಎಂ ಆಗಿರ್ತೀನಿ...
02-07-25 07:55 pm
Belagavi, ASP Narayan Bharamani, Dharwad: ಅಂದ...
02-07-25 02:21 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
02-07-25 08:05 pm
Mangalore Correspondent
Puttur Bjp, Krishna Rao, Pregnant: ಬಿಜೆಪಿ ಮುಖ...
02-07-25 11:39 am
ಹಾಸನದಲ್ಲಿ ಹೃದಯಾಘಾತ ಹೆಚ್ಚಳ ಬಗ್ಗೆ ವರದಿ ಕೇಳಿದ್ದೇ...
30-06-25 10:59 pm
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
02-07-25 10:15 pm
Bangalore Correspondent
Massive Scam, Mangalore City Corporation, Fak...
02-07-25 12:24 pm
Mulki Abdul Latif Murder Case, Accused Arrest...
01-07-25 04:36 pm
Bangalore crime, TALAQ, Politicians: ರಾಜಕಾರಣಿ...
01-07-25 02:22 pm
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm