ಬ್ರೇಕಿಂಗ್ ನ್ಯೂಸ್
28-09-23 10:07 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.28: ಯಾರಿಗೆ ಆದರೂ ಪ್ರತಿಭಟನೆ ನಡೆಸಲು ಹಕ್ಕಿದೆ. ಹಾಗಂತ, ಬಂದ್ ಮಾಡಲು ಬಲವಂತ ಪಡಿಸಿದರೆ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕನ್ನಡ ಸಂಘಟನೆಗಳ ಬಂದ್ ಕರೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಕನ್ನಡ ಸಂಘಟನೆಗಳು ಸೆ.29ರಂದು ರಾಜ್ಯ ಬಂದ್ ಗೆ ಕರೆ ನೀಡಿದ್ದು, ರಾಜ್ಯದ ಬಹುತೇಕ ಕಡೆ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಈ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಚಿವ ಪರಮೇಶ್ವರ್, ಪ್ರತಿಭಟನೆ, ಧರಣಿ ಯಾರಿಗೆ ಬೇಕಾದರೂ ಮಾಡಬಹುದು. ಹಾಗೆಂದು, ಬಂದ್ ಮಾಡಲು ಬಲವಂತ ಮಾಡುವುದನ್ನು ಸಹಿಸುವುದಿಲ್ಲ. ಬಂದ್ ನಡೆಸುವುದು ಹೈಕೋರ್ಟ್ ಪ್ರಕಾರ ನಿಷಿದ್ಧ. ಹಾಗಾಗಿ ಬಂದ್ ಮಾಡಿಸಲು ಬಲವಂತ ಪಡಿಸಿದರೆ, ರಸ್ತೆ ತಡೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.
ಬಂದ್ ನಡೆಸುವುದರಿಂದ ಎಲ್ಲರಿಗೂ ನಷ್ಟ. ಆರ್ಥಿಕತೆಗೆ ಪೆಟ್ಟು ಬೀಳುತ್ತದೆ. ಮೊನ್ನೆಯ ಒಂದು ದಿನದ ಬೆಂಗಳೂರು ಬಂದ್ ನಿಂದ ಒಂದೂವರೆ ಸಾವಿರ ಕೋಟಿಯಷ್ಟು ನಷ್ಟ ಆಗಿದೆ. ಮತ್ತೊಮ್ಮೆ ಬಂದ್ ಮಾಡಿದರೆ ಮತ್ತಷ್ಟು ನಷ್ಟ ಆಗುತ್ತದೆ. ಇವೆಲ್ಲ ಕನ್ನಡ ಸಂಘಟನೆಗಳವರಿಗೆ ತಿಳಿದಿಲ್ಲ ಎಂದಲ್ಲ. ಪ್ರತಿಭಟನೆ, ಧರಣಿ ನಡೆಸುವುದಕ್ಕೆ ಅವಕಾಶ ಇದೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದಲ್ಲಿ ಪೊಲೀಸರಿಗೆ ಪ್ರತ್ಯೇಕ ಹೇಳಬೇಕಿಲ್ಲ. ಬೇಕಾದ ಕ್ರಮ ಜರುಗಿಸುತ್ತಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
ನೀರಿನ ವಿಚಾರದಲ್ಲಿ ತಮಿಳುನಾಡು ಜೊತೆ ರಾಜಿ ಮಾಡಿಕೊಳ್ಳುವ ವಿಚಾರ ಇಲ್ಲ. ಬಿಜೆಪಿ – ಜೆಡಿಎಸ್ ಒಂದಾಗಿ ಪ್ರತಿಭಟನೆ ನಡೆಸುತ್ತಿದ್ದು ರಾಜ್ಯ ಸರಕಾರವನ್ನು ದೂರಿ ಪ್ರಯೋಜನ ಇಲ್ಲ. ಇದರ ಬದಲು ಸಮಸ್ಯೆ ಬಗೆಹರಿಸಲು ಸರಕಾರದ ಜೊತೆ ಕೈಜೋಡಿಸಬೇಕಾಗಿದೆ ಎಂದರು ಪರಮೇಶ್ವರ್.
Karnataka Bandh, anyone forcing public to close shops will be arrested says Home Minister Parameshwar.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm