ಬ್ರೇಕಿಂಗ್ ನ್ಯೂಸ್
22-09-23 07:03 pm HK News Desk ಕರ್ನಾಟಕ
ಶಿವಮೊಗ್ಗ, ಸೆ.22: ಕಾವೇರಿ ಸಮಸ್ಯೆ ಉಲ್ಬಣಕ್ಕೆ ಡಿಕೆ ಶಿವಕುಮಾರ್ ಕಾರಣ, ಕಾವೇರಿ ವಿಚಾರದಲ್ಲಿ ಡಿಕೆಶಿ ಮುತ್ತಾಳತನ ಮಾಡಿದರು. ಈ ಸಮಸ್ಯೆಗೆ ಮೂಲ ಪುರುಷನೇ ಡಿಕೆ ಶಿವಕುಮಾರ್. ಆ ಮೂಲ ಪುರುಷನ ಪಕ್ಕಕ್ಕೆ ಸರಿಸಿದ್ರೇ, ಇಡೀ ರಾಜ್ಯವೇ ಒಟ್ಟಾಗಿ ಸಮಸ್ಯೆ ಬಗೆಹರಿಸಬಹುದು ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮಸ್ಯೆ ಉಲ್ಬಣ ಆಗೋಕೆ ಡಿಸಿಎಂ ಡಿಕೆ. ಶಿವಕುಮಾರ್ ಕಾರಣ, ಐಎನ್ಡಿಐಎ ಗ್ರೂಪ್ಗೆ ತೃಪ್ತಿ ಪಡಿಸೋಕೆ ಹೀಗೆ ಮಾಡಿದ್ದಾರೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಹಾಗೂ ಸೋನಿಯಾ ಗಾಂಧಿ ನಾಯಕಿ ತೃಪ್ತಿಪಡಿಸೊಕೆ ಈ ರೀತಿ ಮಾಡಿದ್ದಾರೆ. ಯಾರಿಗೂ ಕೇಳದೇ ಕದ್ದುಮುಚ್ಚಿ ನೀರು ಬಿಟ್ಟರು. ನೀರು ಬಿಡುವ ಮುಂಚೆಯೇ ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು. ನೀರಾವರಿ ತಜ್ಞರ ಅಭಿಪ್ರಾಯ ಕೇಳಬೇಕಿತ್ತು. ಅದನ್ನೆಲ್ಲಾ ಬಿಟ್ಟು ಶಿವಕುಮಾರ್ ಮುತ್ತಾಳತನ ಮಾಡಿದರು. ಸ್ಟಾಲಿನ್ ಹಾಗೂ ಸೋನಿಯಾ ಬಳಿ ನಾನೊಬ್ನೆ ಒಳ್ಳೆಯವನು ಆಗಬೇಕು ಅಂತಾ ಹೀಗೆ ಮಾಡಿದರು ಎಂದು ಕಿಡಿಕಾರಿದರು.
ಕುಡಿಯಲು, ಬೆಳೆಗೆ ಎಷ್ಟು ನೀರು ಬೇಕು, ರೈತರ ಸ್ಥಿತಿ ಬಗ್ಗೆ ಯೋಚನೆ ಮಾಡಲಿಲ್ಲ. ಬಳಿಕ ಸಿಎಂ ಕರೆದುಕೊಂಡು ದಿಲ್ಲಿಗೆ ಹೋದರು. ನೀರು ಬಿಟ್ಟಾದ್ಮೇಲೆ ನಮ್ಮನ್ನೆಲ್ಲ ಕರೆದರು ಅಂತಾ ಛೀಮಾರಿ ಹಾಕಿದ್ರು. ಈಗ ಮಂಡ್ಯ, ಮೈಸೂರು ರೈತರು ಕಂಗೆಟ್ಟು ಹೋಗಿದ್ದಾರೆ. ಅವರ ಆಕ್ರೋಶದ ಕಟ್ಟೆ ಯಾವಾಗ ಒಡೆಯುತ್ತೋ ಗೊತ್ತಿಲ್ಲ. ಸದ್ಯಕ್ಕೆ ಶಾಂತಿಯಿಂದ ಪ್ರತಿಭಟನೆ ಮಾಡ್ತಿದ್ದಾರೆ. ಈ ಹಿಂದೆ ಬಂಗಾರಪ್ಪ ಸಿಎಂ ಆಗಿದ್ದಾಗ ಇಂತಹದೇ ಸ್ಥಿತಿ ಬಂದಿತ್ತು. ಸರ್ವಪಕ್ಷ ಸಭೆ ಕರೆದು, ನೀರು ಬಿಡಲ್ಲ ಎಂದು ಬಂಗಾರಪ್ಪ ಹೇಳಿದರು. ಅವತ್ತು ಪಕ್ಷಬೇಧ ಮರೆತು ಇಡೀ ರಾಜ್ಯವೇ ಒಂದಾಗಿತ್ತು. ಆದರೆ, ಇವರು ಈಗ ಕದ್ದು ಮುಚ್ಚಿ ನೀರು ಬಿಟ್ಟು ಒಳ್ಳೆಯವರಾಗಲು ಹೋಗಿದ್ದಕ್ಕೆ ರಾಜ್ಯದಲ್ಲಿಯೇ ಕುಡಿಯಲು, ಕೃಷಿಗೆ ನೀರಿಲ್ಲದ ಸ್ಥಿತಿ ಬಂದಿದೆ ಎಂದರು.
ಡಿಸಿಎಂ ಹಾಗೂ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ರಾಜೀನಾಮೆ ನೀಡಬೇಕು. ಕಾವೇರಿ ನದಿ ಕಾಂಗ್ರೆಸ್ ಪಕ್ಷ ಹಾಗೂ ಡಿಕೆ ಶಿವಕುಮಾರ್ ಸ್ವತ್ತಲ್ಲ. ಇಡೀ ರಾಜ್ಯದ ಸ್ವತ್ತು. ಸಿಎಂ ಕೂಡಲೇ ಮುಂದೆ ಬಂದು ನೀರಾವರಿ ತಜ್ಞರು, ರೈತರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಇವತ್ತಿಗೂ ಬಂಗಾರಪ್ಪರನ್ನ ಕಾವೇರಿ ವಿಚಾರದಲ್ಲಿ ನೆನಪು ಮಾಡಿಕೊಳ್ತಾರೆ. ಸಿಎಂ ಹೋಗಿ ಎಲ್ಲಾ ಜಲಾಶಯಗಳ ವೀಕ್ಷಣೆ ಮಾಡಿ, ವಸ್ತುಸ್ಥಿತಿ ತಿಳಿಯಲಿ. ಈಗ ಶಾಂತಿಯಿಂದ ಇರೋ ಕರ್ನಾಟಕ ಮುಂದೆ ಶಾಂತಿಯಿಂದ ಉಳಿಯುತ್ತೇ ಅನ್ಸಲ್ಲ ಎಂದು ಹೇಳಿದರು.
ಕಾವೇರಿ ವಿಚಾರದಲ್ಲೇ ಬಿಜೆಪಿ ಮಂಡ್ಯದಲ್ಲಿ ಹೋರಾಟ ಮಾಡಿತ್ತು. ಇಲ್ಲಿ ಪ್ರತ್ಯೇಕ ಹೋರಾಟ ಮಾಡಿ, ರಾಜಕೀಯ ಲಾಭವನ್ನು ನಾವು ನೋಡಲ್ಲ. ರಾಜ್ಯದ ರೈತರು, ಬಿಜೆಪಿ ಎಲ್ಲರೂ ಒಟ್ಟಾಗಿಯೇ ಹೋರಾಟ ಮಾಡ್ತೇವೆ. ಸುಪ್ರೀಂ ಕೋರ್ಟ್ಗೆ ಅಫೀಲ್ ಹಾಕೋ ಕೆಲಸವನ್ನು ಮಾಡಲಿಲ್ಲ. ಈ ಸಮಸ್ಯೆಗೆ ಮೂಲ ಪುರುಷನೇ ಡಿಕೆ ಶಿವಕುಮಾರ್. ಆ ಮೂಲ ಪುರುಷನ ಪಕ್ಕಕ್ಕೆ ಸರಿಸಿದ್ರೇ, ಇಡೀ ರಾಜ್ಯವೇ ಒಟ್ಟಾಗಿ ಸಮಸ್ಯೆ ಬಗೆಹರಿಸಬಹುದು. ಲೋಕಸಭೆಯಲ್ಲಿ ಹೆಚ್ಚಿನ ಸೀಟ್ ತಗೋಳಕೆ ಮಾಡಿದ ಕುತಂತ್ರ ರಾಜಕಾರಣ ಇದು. ಇದರಿಂದಾಗಿಯೇ ಇಡೀ ರಾಜ್ಯ ಇವತ್ತು ಸಂಕಷ್ಟಕ್ಕೆ ಸಿಲುಕಿದೆ ಎಂದು ಕಿಡಿಕಾರಿದರು.
ಸಿಎಂ ಒಟ್ಟಾಗಿ ಎಲ್ಲರನ್ನು ಸಭೆಗೆ ಕರೆಯಲಿ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ನ್ಯಾಯಾಂಗ ನಿಂದನೆಯಾದರೆ ಸಿದ್ದರಾಮಯ್ಯ ಅವರನ್ನು ಅನಾಥ ಮಾಡಲ್ಲ. ನಾವೆಲ್ಲರೂ ಅವರ ಜೊತೆ ಜೈಲಿಗೆ ಹೋಗ್ತೇವೆ. ನೋಡೊಣ ಎಷ್ಟು ಜನರನ್ನು ಜೈಲಿಗೆ ಕಳಿಸ್ತಾರೆ ಅಂತ. ಕದ್ದುಮುಚ್ಚಿ ನೀರು ಬಿಟ್ಟಿದರ ಪರಿಣಾಮ ಈ ಸ್ಥಿತಿ ಅಷ್ಟೇ ಎಂದ ಅವರು, ಕದ್ದು ನೀರು ಬಿಟ್ಟೋನು ಕಳ್ಳನೋ? ನಾನು ಕಳ್ಳನೋ. ನಾನ್ಯಾಕೇ ಕ್ಷಮೆ ಕೇಳಬೇಕು. ಕದ್ದು ನೀರು ಬಿಟ್ಟೋರಿಗೆ ಏನು ಹೇಳೋಕೆ ಸಾಧ್ಯ? ಸತ್ಯ ಹರಿಶ್ಚಂದ್ರ ಅನ್ಲಾ? ಏನಂತ ಹೇಳಬೇಕು ನನಗೆ ಗೊತ್ತಿಲ್ಲ. ನನ್ನ ಲೆಕ್ಕದಲ್ಲಿ ಕದ್ದು ನೀರು ಬಿಟ್ಟೋನು ಕಳ್ಳನೇ ಎಂದು ಕ್ಷಮೆ ಯಾಚಿಸಲು ನಿರಾಕರಿಸಿದರು.
ನನ್ನ ಸೆಟ್ಲಮೆಂಟ್ ಮಾಡೋಕೆ ಅವನ ವಂಶದ ಯಾರಿಂದಲೂ ಸಾಧ್ಯವಿಲ್ಲ !
ಈಶ್ವರಪ್ಪರಗೆ ಸೆಟ್ಲಮೆಂಟ್ ಆಗಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಶಿವಕುಮಾರ್ ಅಲ್ಲ. ಅವನ ವಂಶದ ಯಾರಿಂದಲೂ ಸಾಧ್ಯವಿಲ್ಲ. ನನ್ನ ಸೆಟ್ಲಮೆಂಟ್ ಮಾಡೋಕೆ ಯಾರ ಕೈಯಲ್ಲೂ ಅಗಲ್ಲ. ರಾಜಕಾರಣ ಸೈಕಲ್ ಚಕ್ರದ ರೀತಿ ತಿರುಗುತ್ತಾ ಇರುತ್ತೇ. ಅವರು ಜೈಲಿನಲ್ಲಿದ್ದಾಗ ನಾನು ಡಿಸಿಎಂ ಆಗಿದ್ದೆ. ಇದಕ್ಕೇನು ಹೇಳ್ತಾರೆ ಅವರು? ಈಗ ಬೇಲ್ನಲ್ಲಿದ್ದಾರೆ. ನಾಳೆ ಎಲ್ಲಿಗೆ ಹೋಗ್ತಾರೋ ಗೊತ್ತಿಲ್ಲ. ನಾನು ಮತ್ತೇ ಜೈಲಿಗೆ ಹೋಗಲಿ ಎಂದು ಅಪೇಕ್ಷೆ ಪಡಲ್ಲ. ಸೆಟ್ಲಮೆಂಟ್ ರೀತಿಯ ಪದ ಬಳಸೋದು ಗೂಂಡಾಗಳು ಎಂದರು.
Dk Shivakumar reason for Cauvery issue slams Eshwarappa in Shivamogga.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm