ಬ್ರೇಕಿಂಗ್ ನ್ಯೂಸ್
19-09-23 12:12 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.19: ಬಿಜೆಪಿ ಟಿಕೆಟ್ ಹಗರಣದಲ್ಲಿ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆಯ ಹಿರೇಹಡಗಲಿ ತಾಲೂಕಿನ ಅಭಿನವ ಹಾಲಶ್ರೀ ಸ್ವಾಮೀಜಿಯವರನ್ನು ಬೆಂಗಳೂರು ಪೊಲೀಸ್ ನ ಅಪರಾಧ ನಿಗ್ರಹ ದಳದ ಪೊಲೀಸರು ಒಡಿಶಾದಲ್ಲಿ ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಬೆಳಕಿಗೆ ಬಂದಾಗಿನಿಂದ ಸ್ವಾಮೀಜಿ ನಾಪತ್ತೆಯಾಗಿದ್ದರು. ಅವರು ಆಶ್ರಮದಲ್ಲಿರುವ ಕಾರಿನ್ನು ಖುದ್ದಾಗಿ ಡ್ರೈವ್ ಮಾಡಿಕೊಂಡು ಬೇರೆಲ್ಲಿಗೋ ಹೋಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದವು. ಹಾಗಾಗಿ, ಅತ್ತ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಮೂರು ದಿನಗಳ ಹಿಂದೆ, ಸ್ವಾಮೀಜಿಯವರ ಖಾಸಗಿ ಡ್ರೈವರ್ ಲಿಂಗರಾಜುನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಆತನ ವಿಚಾರಣೆ ನಡೆಸಿದಾಗ, ಸ್ವಾಮೀಜಿಯವರು ತಾವೇ ಖುದ್ದಾಗಿ ಕಾರು ಚಲಾಯಿಸಿಕೊಂಡು ಮೈಸೂರಿಗೆ ಹೋಗಿದ್ರು, ಅಲ್ಲಿ ಕಾರಿನ ನಂಬರ್ ಪ್ಲೇಟ್ ಗಳನ್ನು ಕಳಚಿಟ್ಟು ಅಲ್ಲಿಂದ ಹೈದರಾಬಾದ್ ಗೆ ತೆರಳಿದ್ದಾಗಿಯೂ ತಿಳಿದುಬಂದಿತ್ತು. ಹಾಗಾಗಿ, ಸಿಸಿಬಿ ಪೊಲೀಸರ ತಂಡವೊಂದು ಹೈದರಾಬಾದ್ ತೆರಳಿತ್ತು.
ಆದರೆ, ಸೆ. 19ರ ಬೆಳಗ್ಗೆ ಬಂದ ವರ್ತಮಾನದ ಪ್ರಕಾರ, ಸ್ವಾಮೀಜಿಯವರನ್ನು ಒಡಿಶಾದಲ್ಲಿ ಬಂಧಿಸಲಾಗಿದೆ. ಒಡಿಶಾದ ಕಟಕ್ ನಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ನೆಲೆಸಿದ್ದ ಸ್ವಾಮೀಜಿಯನ್ನು ಪತ್ತೆ ಹಚ್ಚಿದ್ದ ಪೊಲೀಸರು ಅವರು ಹೋಟೆಲ್ ಗೆ ಹೋಗಿದ್ದರು. ಆದರೆ, ಅಷ್ಟರಲ್ಲಾಗಲೇ ಅವರು ಅಲ್ಲಿಂದ ಕಾಲ್ಕಿತ್ತಿದ್ದರು ಎಂದು ಹೇಳಲಾಗಿದೆ.
ಪ್ರತಿ ಗಂಟೆಗೆ ಸ್ಥಳ ಬದಲಾಯಿಸುತ್ತಿದ್ದ ಸ್ವಾಮೀಜಿ, ಹಾಲಶ್ರೀ ಅವರು ರೈಲಿನಲ್ಲಿ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಕಾವಿಯನ್ನು ತ್ಯಜಿಸಿ, ಟೀ ಶರ್ಟ್, ಪ್ಯಾಂಟ್ ಹಾಕಿಕೊಂಡು ವೇಷ ಮರೆಸಿಕೊಂಡಿದ್ದರು. ಕಟಕ್ ನಿಂದ ಬೌದ್ಧ್ ಗಯಾಕ್ಕೆ ತೆರಳುವ ರೈಲಿನಲ್ಲಿದ್ದರು ಅವರು. ಆದರೂ, ಅವರನ್ನು ಸೂಕ್ತವಾಗಿ ಗುರುತು ಹಿಡಿಯುವಲ್ಲಿ ಸಿಸಿಬಿ ನೆರವಾಗಿದೆ. ಅವರನ್ನು ಕಟಕ್ ನಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.
Chaitra Kundapura fraud case, Main accused Abinava Halashri swamiji arrested at Odisha by CCB police. He was been absconding from the day the case was registered, finally the Bangalore CCB police have nabbed him in Odisha at a private lodge.
22-07-26 06:00 pm
HK News Staffer
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 04:21 pm
HK News Staffer
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm