ಬ್ರೇಕಿಂಗ್ ನ್ಯೂಸ್
16-09-23 06:43 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.16: ಈ ಬಾರಿಯೂ ಗಣೇಶನ ಹಬ್ಬದ ಹೆಸರಲ್ಲಿ ಪ್ರಯಾಣಿಕರನ್ನು ದೋಚಲು ಖಾಸಗಿ ಬಸ್ಗಳ ಜೊತೆಗೆ ಕೆಎಸ್ಸಾರ್ಟಿಸಿಯೂ ಮುಂದಾಗಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಕೂಡ ತನ್ನ ವಿಶೇಷ ಬಸ್ಗಳ ಪ್ರಯಾಣ ದರವನ್ನು ಶೇ.20 ರಷ್ಟು ಹೆಚ್ಚಿಸಿದ್ದು ಅಧಿಕೃತವಾಗಿ ಹೇಳಿಕೊಂಡಿದೆ!
ಗಣೇಶ ಹಬ್ಬದ ಸಂದರ್ಭದಲ್ಲಿ ಒಂದೆಡೆ ಖಾಸಗಿ ಬಸ್ಗಳು ಟಿಕೆಟ್ ದರ ಹೆಚ್ಚಿಸಿ ಸುಲಿಗೆ ಮಾಡುತ್ತಿದ್ದರೆ, ಸಾರಿಗೆ ಇಲಾಖೆ ಕೇವಲ ಎಚ್ಚರಿಕೆ ನೀಡುವುದಕ್ಕೆ ಸೀಮಿತವಾಗಿದೆ. ಇನ್ನೊಂದೆಡೆ ರಾಜ್ಯದ ಜೀವನಾಡಿಗಳು ಎಂದು ಕರೆಯುವ ಕೆಎಸ್ಆರ್ಟಿಸಿ ಕೂಡ ತನ್ನ ವಿಶೇಷ ಬಸ್ಗಳ ಟಿಕೆಟ್ ದರವನ್ನು ಶೇ. 20 ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಪ್ರಯಾಣಿಕರು ಖಾಸಗಿ ಆಗಲಿ ಕೆಎಸ್ಆರ್ಟಿಸಿ ಆಗಲಿ ಹೆಚ್ಚಿನ ದರ ಪಾವತಿಸಿಯೇ ತಮ್ಮ ಊರುಗಳಿಗೆ ತೆರಳಬೇಕಾಗಿದೆ.
ಕೆಎಸ್ಆರ್ಟಿಸಿ ವಿಭಾಗದ ಅಧಿಕೃತ ವೆಬ್ಸೈಟ್ನಲ್ಲೇ ವಿಶೇಷ ಬಸ್ಗಳ ಟಿಕೆಟ್ ದರವನ್ನು ಶೇ. 18 ರಿಂದ 20 ರಷ್ಟು ಹೆಚ್ಚಿಸಲಾಗಿದೆ. ಬೆಂಗಳೂರಿನಿಂದ ದಾವಣಗೆರೆಗೆ ರಾಜಹಂಸ ಸಾಮಾನ್ಯ ಬಸ್ ದರ 505 ರೂಪಾಯಿ ಇದ್ದರೆ, ರಾಜಹಂಸ ವಿಶೇಷ ಬಸ್ ಟಿಕೆಟ್ ದರ 591 ರೂಪಾಯಿ ಇದೆ. ಬೆಂಗಳೂರು ಹುಬ್ಬಳ್ಳಿ ಎಸಿ ಸ್ಲೀಪರ್ ದರವು 1159 ರೂಪಾಯಿ ಇದೆ. ಇದೇ ಮಾರ್ಗದ ಹಬ್ಬದ ವಿಶೇಷ ಬಸ್ ದರವು 1365 ರೂ. ಇದೆ. ನಾನ್ ಎಸಿ ಸ್ಲೀಪರ್ 975 ರೂಪಾಯಿ ಇದ್ದರೆ, ಹಬ್ಬದ ವಿಶೇಷ ಬಸ್ ದರ 1148 ರೂ. ಇದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್ಆರ್ಟಿಸಿ ಅಧಿಕಾರಿಗಳು, ಹಬ್ಬದ ಸಂದರ್ಭದಲ್ಲಿ ವಿಶೇಷ ಬಸ್ಗಳ ದರವನ್ನು ಹೆಚ್ಚಳ ಮಾಡುತ್ತೇವೆ. ಈ ಹಿಂದೆಯು ಹಬ್ಬದ ವೇಳೆ ದರ ಹೆಚ್ಚಿಸಿದ್ದೆವು. ಸಾಮಾನ್ಯ ಬಸ್ಗಳ ದರ ಎಂದಿನಂತೆಯೇ ಇದೆ ಎಂದು ಹೇಳುತ್ತಾರೆ. ಇದಲ್ಲದೆ, ಗಣೇಶ ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ 1200 ಬಸ್ಗಳನ್ನು ಕೆಎಸ್ಆರ್ಟಿಸಿ ಬೆಂಗಳೂರಿನಿಂದ ವಿವಿಧ ನಗರಗಳಿಗೆ ಓಡಿಸುತ್ತಿದೆ. ಸೆ. 15ರಿಂದ ಸೆ.17ರ ವರೆಗೆ 1200 ಹೆಚ್ಚುವರಿ ಬಸ್ಗಳು ರಾಜ್ಯ ಮತ್ತು ಹೊರರಾಜ್ಯಗಳಿಗೆ ಓಡಾಡಲಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ. 5ರಷ್ಟು ರಿಯಾಯಿತಿ ಸಿಗಲಿದೆ. ಹೋಗಿ ಬರುವ ಪ್ರಯಾಣದ ಟಿಕೆಟ್ ಕಾಯ್ದಿರಿಸಿದರೆ, ಹಿಂದಿರುಗುವ ಪ್ರಯಾಣ ದರದಲ್ಲಿ ಶೇ. 10 ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಇತ್ತೀಚೆಗೆ, ಸುದ್ದಿಗೋಷ್ಟಿ ನಡೆಸಿದ್ದ ಶಿವಮೊಗ್ಗ ವಿಭಾಗದ ಕೆಎಸ್ಸಾರ್ಟಿಸಿ ಅಧಿಕಾರಿ, ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಗಳ ದರ ಹೆಚ್ಚಿಸಿದರೆ ದೂರು ಕೊಡುವಂತೆ ಹೇಳಿದ್ದರು. ದರ ಹೆಚ್ಚಿಸುವ ಬಸ್ ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಈಗ ಖಾಸಗಿಯ ಜೊತೆಗೆ ಕೆಎಸ್ಸಾರ್ಟಿಸಿಯೂ ದರ ಹೆಚ್ಚಿಸಿದೆ.
Ahead of the Ganesh Chaturthi celebrations on Monday, thousands of people from across Bengaluru are heading to their respective hometowns this weekend. And as it happens every year, private bus services have significantly hiked the ticket fares to make quick gains on the limited time rush. The fares have been hiked despite a warning from the Transport Commissioner that any spike in ticket prices will invite strict action.
06-03-26 12:08 pm
HK News Staffer
ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ; ಮುಂದುವರೆ...
06-03-26 10:21 am
Bhatkal Petrol News: ಬೆಲೆ ಏರಿಕೆ ಭೀತಿ ; ಭಟ್ಕಳ...
05-03-26 11:42 pm
ಸಂಘರ್ಷದಿಂದ ಸಮಸ್ಯೆ ಪರಿಹರಿಸಲಾಗದು, ಪಶ್ಚಿಮ ಏಷ್ಯಾ,...
05-03-26 09:40 pm
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
06-03-26 11:40 am
HK News Staffer
ಮಾರ್ಕ್-48 ಜಗತ್ತಿನ ಅತಿ ಶಕ್ತಿಶಾಲಿ ಜಲಾಂತರ್ಗಾಮಿ ಸ...
06-03-26 09:50 am
ಇರಾನಲ್ಲಿ 1230 ಜನರ ಸಾವು ; ಜೆರುಸಲೇಮ್ ಮೇಲೆ ಬಾಂಬ್...
05-03-26 08:51 pm
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
06-03-26 12:17 pm
supritha Jain
ದುಬೈನಿಂದ ಬೆಂಗಳೂರಿಗೆ ಹೈಡ್ರೋವೀಡ್ ಗಾಂಜಾ ಪೂರೈಕೆ ;...
05-03-26 07:38 pm
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm