ಬ್ರೇಕಿಂಗ್ ನ್ಯೂಸ್
13-09-23 10:17 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.13: ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಬಿಟ್ ಕಾಯಿನ್ ಹಗರಣದ ಬಗ್ಗೆ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದ ವಿಶೇಷ ತನಿಖಾ ತಂಡ ತನಿಖೆ ಚುರುಕುಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಪೋಕರ್ ಕ್ಲಬ್ ಮಾಲೀಕ ಸುನೀಶ್ ಹೆಗ್ಡೆ, ಮಂಗಳೂರು ಮೂಲದ ಪ್ರಸೀದ್ ಶೆಟ್ಟಿ ಮನೆಗಳಿಗೆ ಪೊಲೀಸರು ದಾಳಿ ನಡೆಸಿದ್ದು ಲಕ್ಷಾಂತರ ರೂ. ನಗದು ಸೇರಿದಂತೆ ಮಹತ್ವದ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಪ್ರಕರಣದ ಸೂತ್ರಧಾರಿ ಶ್ರೀಕಿಗೆ ಸೇರಿದ ಜಯನಗರ ನಿವಾಸ, ಪೋಕರ್ ಕ್ಲಬ್ ಮಾಲೀಕ ಸುನೀಶ್ ಹೆಗ್ಡೆ ವಾಸವಿರುವ ಸಂಜಯನಗರದ ಒಂದು ಮನೆ, ಫ್ಲ್ಯಾಟ್, ಸುನೀಶ್ ಆಪ್ತನಾಗಿರುವ ಪ್ರಸೀದ್ ಶೆಟ್ಟಿ ನಿವಾಸದಲ್ಲಿ ಎಸ್ಐಟಿ ಪ್ರತ್ಯೇಕ ತಂಡಗಳು ಶೋಧ ಕಾರ್ಯಾಚರಣೆ ನಡೆಸಿವೆ. ಎಸ್ಐಟಿ ಮುಖ್ಯಸ್ಥ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ನಡೆದ ತಪಾಸಣೆಯಲ್ಲಿ ಮೂವರ ನಿವಾಸಗಳಿಂದ ಐದು ಲ್ಯಾಪ್ ಟಾಪ್ ಗಳು, ಮೊಬೈಲ್ ಸೇರಿದಂತೆ ಹಲವು ಡಿಜಿಟಲ್ ಸಾಧನಗಳನ್ನು ಜಪ್ತಿ ಮಾಡಿದೆ. ಸುನೀಶ್ ಹೆಗ್ಡೆ ನಿವಾಸದಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ 14 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಈತನ ಆಪ್ತ ಪ್ರಸೀದ್ ಶೆಟ್ಟಿಯನ್ನು ವಿಚಾರಣೆ ನಡೆಸಿದ ಪೊಲೀಸರು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಆರೋಪಿಗಳ ಈಗಿನ ವ್ಯವಹಾರ, ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಕೋರ್ಟಿನಿಂದ ಸರ್ಚ್ ವಾರೆಂಟ್ ಪಡೆದು ಎಸ್ಐಟಿ ಶೋಧ ಕಾರ್ಯಾಚರಣೆ ನಡೆಸಿದೆ. ಜಪ್ತಿ ಮಾಡಿರುವ ಲ್ಯಾಪ್ ಟಾಪ್, ಮೊಬೈಲ್ ಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ಮತ್ತಷ್ಟು ಸಾಕ್ಷ್ಯ ಸಿಗುವ ಸಾಧ್ಯತೆಯಿದೆ. ದಾಳಿ ವೇಳೆ ಆರೋಪಿಗಳು ಹಾಗೂ ಅವರ ಕುಟುಂಬಸ್ಥರು ಸಹಕಾರ ನೀಡಿದ್ದಾರೆ. ಎಲ್ಲರ ಬ್ಯಾಂಕ್ ಖಾತೆ ವಿವರಗಳನ್ನು ಪಡೆಯಲಾಗಿದ್ದು, ಪರಿಶೀಲನೆ ಬಳಿಕ ಅಗತ್ಯ ಬಿದ್ದರೆ ಇತರೇ ಆರೋಪಿಗಳ ಬಗ್ಗೆ ತನಿಖೆಗೆ ನೋಟೀಸ್ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಆರೋಪಿಗಳೂ ಕರಾವಳಿಯವರು
ಪ್ರಮುಖ ಆರೋಪಿಗಳೆಂದು ಗುರಿತಿಸಲ್ಪಟ್ಟ ಹ್ಯಾಕರ್ ಶ್ರೀಕಿ, ಸುನೀಶ್ ಹೆಗ್ಡೆ, ಪ್ರಸೀದ್ ಶೆಟ್ಟಿ ಈ ಮೂವರೂ ಕರಾವಳಿ ಮೂಲದವರು. ಕರಾವಳಿಯ ಪ್ರಭಾವಿ ರಾಜಕಾರಣಿಯೊಬ್ಬರ ಜೊತೆಗೆ ಹತ್ತಿರದ ನಂಟು ಹೊಂದಿದ್ದಾರೆ. ಬೆಂಗಳೂರಿನಲ್ಲಿ ಪೋಕರ್ ಕ್ಲಬ್ ನಡೆಸುತ್ತಿದ್ದ ಸುನೀಶ್ ಹೆಗ್ಡೆ, ಹ್ಯಾಕರ್ ಶ್ರೀಕಿಯ ಬಗ್ಗೆ ತಿಳಿದುಕೊಂಡು ಆತ್ಮೀಯನಾಗಿದ್ದ. ಅಲ್ಲದೆ, ಶ್ರೀಕಿಯನ್ನು ಸ್ಟಾರ್ ಹೊಟೇಲಿನಲ್ಲಿರಿಸಿ, ತನ್ನ ವ್ಯವಹಾರಗಳಲ್ಲಿ ಬಳಸಿಕೊಂಡಿದ್ದ. ಇದಕ್ಕಾಗಿ ಎರಡು ಕೋಟಿಗೂ ಹೆಚ್ಚು ಹಣವನ್ನು ಹೊಟೇಲ್ ಬಿಲ್ ಆಗಿ ಸುನೀಶ್ ಹೆಗ್ಡೆ ಪಾವತಿ ಮಾಡಿದ್ದ.
ಶ್ರೀಕಿ ಮೂಲಕ ಪೋಕರ್ ಬಾಜಿಗೆ ಬಳಸುವ ವೆಬ್ ಸೈಟನ್ನೇ ಹ್ಯಾಕ್ ಮಾಡಿಸಿ ಅದರಲ್ಲಿ ಸುನೀಶ್ ಹೆಗ್ಡೆ ಲಾಭ ಮಾಡಿಕೊಂಡಿದ್ದ ಎನ್ನಲಾಗಿದೆ. ಅಲ್ಲದೆ, ಪೋಕರ್ ಬಾಜಿಯ ಸಿಇಓ ಬಳಿಯಿಂದ 50 ಲಕ್ಷ ರೂ. ಪೀಕಿಸಿಕೊಂಡ ಪ್ರಕರಣದಲ್ಲಿಯೂ ಸುನೀಶ್ ಹೆಗ್ಡೆ ಮತ್ತು ಪ್ರಸೀದ್ ಶೆಟ್ಟಿ ಇದ್ದಾರೆ. ಇವರ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ 2019ರಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರು ಮೂಲದ ಪ್ರಸೀದ್ ಶೆಟ್ಟಿ, ಸುನೀಶ್ ಹೆಗ್ಡೆ ಮಾಡುತ್ತಿದ್ದ ಪ್ರತಿ ವ್ಯವಹಾರದಲ್ಲಿಯೂ ಪಾಲುದಾರನಾಗಿದ್ದ. ಪ್ರಸೀದ್ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿಯ ಆಪ್ತನೂ ಆಗಿದ್ದು, ಕಳೆದ ಬಾರಿ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಾಗ ಆ ರಾಜಕಾರಣಿಯ ಹೆಸರೂ ಕೇಳಿಬಂದಿತ್ತು. ಆರೋಪಿಗಳ ವಿಚಾರಣೆ ವೇಳೆ ರಾಜಕಾರಣಿಯ ಜೊತೆಗಿನ ನಂಟು ಬಹಿರಂಗವಾದರೆ, ಎಸ್ಐಟಿ ನೋಟೀಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ. ಹಾಗಾದಲ್ಲಿ ಚುನಾವಣೆ ವೇಳೆಗೆ ರಾಷ್ಟ್ರೀಯ ಪಕ್ಷಕ್ಕೆ ದೊಡ್ಡ ಮಟ್ಟಿನ ಹಿನ್ನಡೆಯಾಗಲಿದೆ.
ಕೇಸು ಮುಚ್ಚಿ ಹಾಕಿದ್ದ ಅಧಿಕಾರಿಗಳ ವಿರುದ್ಧವೇ ಕೇಸು
2020ರ ನವೆಂಬರ್ ತಿಂಗಳಲ್ಲಿ ಡ್ರಗ್ ಪ್ರಕರಣ ತನಿಖೆ ನಡೆಸುತ್ತಿದ್ದಾಗ ಶ್ರೀಕಿಯನ್ನು ಬಂಧಿಸಿತ್ತು. ಕ್ರಿಪ್ಟೋಕರೆನ್ಸಿ ಮೂಲಕ ವಿದೇಶದಿಂದ ಡ್ರಗ್ಸ್ ತರಿಸುತ್ತಿದ್ದಾನೆಂಬ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ತನಿಖೆ ನಡೆಸಿದ್ದರು. ಆದರೆ ತನಿಖೆಯ ವೇಳೆ 2019ರಲ್ಲಿ ರಾಜ್ಯ ಸರಕಾರದ ಇ-ಪ್ರೊಕ್ಯೂರ್ ಮೆಂಟ್ ವೆಬ್ ಸೈಟ್ ಹ್ಯಾಕ್ ಮಾಡಿ, 11 ಕೋಟಿ ರೂಪಾಯಿ ಹಣ ಪೀಕಿಸಿದ್ದನ್ನೂ ಹೇಳಿದ್ದ. ಅಲ್ಲದೆ, ಅಮೆರಿಕದ ಬಿಟ್ ಫಿನೆಕ್ಸ್ ಕ್ರಿಪ್ಟೋ ಸಂಸ್ಥೆಯನ್ನು ಹ್ಯಾಕ್ ಮಾಡಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ದೋಚಿದ್ದನ್ನೂ ಹೇಳಿದ್ದ. ಸರಕಾರಿ ವೆಬ್ ಸೈಟ್ ಹ್ಯಾಕ್ ಮಾಡಿದ್ದ 11.5 ಕೋಟಿ ರೂ. ಪೈಕಿ 1.43 ಕೋಟಿ ಹಣವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಆದರೆ ಪ್ರಕರಣದ ತನಿಖೆ ನಡೆಸಿದ್ದ ಆಗಿನ ಸಿಸಿಬಿ ಪೊಲೀಸರು ಸದ್ದಿಲ್ಲದೆ ಮುಚ್ಚಿ ಹಾಕಿದ್ದರು. ಹಗರಣದಲ್ಲಿ ಬಿಜೆಪಿ ಸರಕಾರದ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿರುವ ಆರೋಪವೂ ಕೇಳಿಬಂದಿತ್ತು. ಪ್ರಕರಣವನ್ನು ಮರು ತನಿಖೆಗೆ ಆದೇಶ ಮಾಡಿದ ಬಳಿಕ ಸಿಐಡಿ ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದು, ಹಗರಣ ಮುಚ್ಚಿ ಹಾಕಿದ ಆರೋಪ ಎದುರಿಸುತ್ತಿರುವ ಡಿವೈಎಸ್ಪಿ ಶ್ರೀಧರ್ ಪೂಜಾರ್ ಸೇರಿದಂತೆ ಆಗಿನ ಸಿಸಿಬಿ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಾಗಿದೆ.
The sleuths of the Special Investigation Team (SIT) of the Criminal Investigation Department (CID) probing the multi-crore Bitcoin scam searched the houses of three accused, including hacker Sri Krishna alias Shriki, on Tuesday. Police sources said that five locations belonging to the accused persons - Shriki, Suneesh Hegde and Prasidh Shetty - were searched on Tuesday, after obtaining search warrants from the court.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm