ಬ್ರೇಕಿಂಗ್ ನ್ಯೂಸ್
10-09-23 06:33 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.10: ಒಂದೆಡೆ ಬಿ.ಕೆ.ಹರಿಪ್ರಸಾದ್ ನಿರಂತರ ಟೀಕೆ ಮಾಡುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಮೌನವಾಗಿದ್ದಾರೆ. ಅವರೆಲ್ಲಿಯೂ ನನ್ನ ಹೆಸರು ಹೇಳಿ ಟೀಕೆ ಮಾಡಿಲ್ಲ. ಹೀಗಾಗಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಈ ರೀತಿಯ ಹೇಳಿಕೆಯನ್ನೇ ಮುಂದಿಟ್ಟು ರಾಜ್ಯ ಬಿಜೆಪಿ ಟೀಕೆ ಮಾಡಿದೆ.
ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಒಳಜಗಳ ನಿರಂತರವಾಗಿದೆ. "ಅ'ಹಿಂದ" ಹೆಸರಿನಲ್ಲಿ ಕೇವಲ ಒಂದೆರೆಡು ಸಮುದಾಯದವರನ್ನಷ್ಟೇ ಓಲೈಸುತ್ತಾ, ಉಳಿದೆಲ್ಲಾ ಸಮುದಾಯಗಳಿಗೂ ಅನ್ಯಾಯವೆಸಗುವ ಸಿದ್ದರಾಮಯ್ಯ ಅವರ ನೈಜ ರಾಜಕಾರಣವನ್ನು ಅವರದೇ ಪಕ್ಷದ ನಾಯಕರು ಬಹಿರಂಗಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಆಡಳಿತ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಹರಿಪ್ರಸಾದ್‌ರಿಂದ ಹೊರಬಂದ ಸತ್ಯಗಳೇ ಸಾಕ್ಷಿ ಎಂದು ಹೇಳಿದೆ.

"ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ" ಎಂಬ ಗಾದೆ ಮಾತಿದೆ. ಅದು ನಿಮಗೆ ಸರಿಯಾಗಿ ಹೊಂದುತ್ತದೆ ಸಿದ್ದರಾಮಯ್ಯ ಅವರೇ. ಹರಿಪ್ರಸಾದ್ ನನ್ನ ಹೆಸರೇ ಹೇಳಿಲ್ಲ ಎಂದು ಉದ್ಧಟತನದ ಹೇಳಿಕೆ ನೀಡುತ್ತೀರಿ. ಹಾಗಾದರೆ, ಪಂಚೆ ಧರಿಸಿ, ದುಬಾರಿ ಹ್ಯುಬ್ಲೋಟ್ ವಾಚ್ ಕಟ್ಟಿಕೊಂಡವರು ರಾಜ್ಯದಲ್ಲಿ ಬೇರೆ ಯಾರಾದರೂ ಇದ್ದಾರಾ..? ಕೊರಟಗೆರೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಎಂಬ ಉತ್ತರವನ್ನು ಕೊರಟಗೆರೆಯ ಚಿಕ್ಕ ಬಾಲಕನೂ ನೀಡುತ್ತಾನೆ.
ದೇವರಾಜ ಅರಸು ಬಳಸುತ್ತಿದ್ದ ಕಾರಿನಲ್ಲಿ ಜಾಲಿ ರೈಡ್‌ಗೆ ಹೋಗಿದ್ದು ರಾಹುಲ್ ಗಾಂಧಿಯವರಾ..? ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರು ನೀವೇ ತಾನೇ..? ವಂದಿಮಾಗದರು, ಆಸ್ಥಾನ ಕಲಾವಿದರಿಂದ ಸ್ವಯಂಘೋಷಿತ ಸ"ಮಜಾವಾದಿ" ಎಂಬ ಬಿರುದು ಪಡೆದವರು ನೀವೇ ತಾನೇ..? ಬಿ.ಕೆ. ಹರಿಪ್ರಸಾದ್‌ರವರು ಸಿದ್ದರಾಮಯ್ಯರವರನ್ನೇ ಉದ್ದೇಶಿಸಿ ಮಾತನಾಡಿದ್ದು ಎಂಬುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು ಎಂದು ಪ್ರಶ್ನಿಸಿದೆ.
ರಾಜ್ಯದ @INCKarnataka ಸರ್ಕಾರದಲ್ಲಿ ಒಳಜಗಳ ನಿರಂತರವಾಗಿದೆ.
— BJP Karnataka (@BJP4Karnataka) September 10, 2023
"ಅ'ಹಿಂದ" ಹೆಸರಿನಲ್ಲಿ ಕೇವಲ ಒಂದೆರೆಡು ಸಮುದಾಯದವರನ್ನಷ್ಟೇ ಓಲೈಸುತ್ತಾ, ಉಳಿದೆಲ್ಲಾ ಸಮುದಾಯಗಳಿಗೂ ಅನ್ಯಾಯವೆಸಗುವ ಸಿದ್ದರಾಮಯ್ಯರವರ ನೈಜ ರಾಜಕಾರಣವನ್ನು ಅವರದೇ ಪಕ್ಷದ ನಾಯಕರು ತುಂಬಿದ ಸಭೆಯಲ್ಲಿ ಬಹಿರಂಗಪಡಿಸುತ್ತಿದ್ದಾರೆ.
ಸಿದ್ದರಾಮಯ್ಯರವರ ಸರ್ಕಾರದ ಆಡಳಿತ ಎಷ್ಟರ… pic.twitter.com/CUF0eunbZ2
Former All India Congress Committee (AICC) general secretar and MLC BK Hariprasad launched a scathing attack on chief minister Siddaramaiah without taking his name at his show-of-strength meeting of backward classes here on Saturday.
29-11-25 08:11 pm
Bangalore Correspondent
ಚೆಂಡನ್ನು ಮತ್ತೆ ದೆಹಲಿ ಅಂಗಳಕ್ಕೆ ಎಸೆದುಬಿಟ್ಟ ಸಿಎಂ...
29-11-25 03:34 pm
Accident Karnool, Kolar, Five Killed: ಫಾರ್ಚುನ...
29-11-25 02:26 pm
ಸಿಎಂ ಫೈಟ್ ಕ್ಲೈಮ್ಯಾಕ್ಸ್ ; ನೀವಾಗಿಯೇ ನಿರ್ಧಾರ ಮಾಡ...
28-11-25 10:37 pm
ಇಬ್ಬರೂ ಬಿಟ್ಕೊಡ್ತಾ ಇಲ್ಲ, 3ನೇ ಸೂತ್ರ ತಯಾರಾಗ್ತಾ ಇ...
28-11-25 10:33 pm
30-11-25 10:59 pm
HK News Desk
Puttur Honey Gains National Attention, PM Mod...
30-11-25 03:53 pm
WhatsApp, Telegram, Snapchat, ShareChat, Cybe...
30-11-25 03:37 pm
ಸ್ಲೀಪರ್ ಕೋಚ್ ಬಸ್ಸಿಗೆ ಹೆದ್ದಾರಿ ನಡುವಲ್ಲೇ ಬೆಂಕಿ...
29-11-25 08:34 pm
ಐಶ್ವರ್ಯಾ ರೈ ತನ್ನ ಗಂಡನಿಂದ ಬೇರ್ಪಟ್ಟರೆ ಮತಾಂತರ ಮಾ...
28-11-25 10:42 pm
30-11-25 06:03 pm
Udupi Correspondent
DK Trasnsport Mangalore, Joel: ಡಿಕೆ ಟ್ರಾನ್ಸ್...
29-11-25 10:01 pm
Moodushedde, Mangalore, Daughter Assaults Mot...
29-11-25 04:26 pm
ಮೊಬೈಲ್ ಜಾಮರ್ ಜೈಲಿಗಷ್ಟೇ ಇರಲಿ, ಜನರ ಸೇವೆಗಳಿಗೆ ತೊ...
29-11-25 10:53 am
ದೇಶ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ನವ ಸಂಕಲ್ಪ ; ಮಿ...
28-11-25 02:48 pm
29-11-25 10:57 pm
Mangalore Correspondent
Davanagere, Police Steal Gold: ದಾವಣಗೆರೆಯಲ್ಲಿ...
28-11-25 06:23 pm
ಡಿಜಿಪಿ ಓಂ ಪ್ರಕಾಶ್ ಹತ್ಯೆ ಕೇಸ್ ; ಪ್ರಮುಖ ಆರೋಪಿ ಪ...
28-11-25 02:16 pm
9 ಕ್ಯಾರೆಟ್ ಚಿನ್ನ ಮಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇ...
27-11-25 09:14 pm
ಹೊರ ಗುತ್ತಿಗೆ ಸಿಬಂದಿ ಸಂಬಳ ಪಾವತಿಗೆ 30 ಸಾವಿರ ಲಂಚ...
27-11-25 09:07 pm