IPS Transfer in Karnataka, Congress: 35 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ; ಹಲವರಿಗೆ ಹುದ್ದೆ ತೋರಿಸದೆ ಎತ್ತಂಗಡಿ, ರಾಜ್ಯ ಸರ್ಕಾರದ ಆದೇಶ 

05-09-23 12:32 pm       Bangalore Correspondent   ಕರ್ನಾಟಕ

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಒಟ್ಟು 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿದ್ದ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ.

ಬೆಂಗಳೂರು, ಸೆ.5: ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಒಟ್ಟು 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿದ್ದ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ. ಅನುಪಮ್ ಅಗರವಾಲ್, ಮಂಗಳೂರು ಕಮಿಷನರ್ ಆಗಿ ನೇಮಕ ಮಾಡಲಾಗಿದೆ. 

ಬೆಂಗಳೂರು ಪೂರ್ವ ಡಿಸಿಪಿ ಆಗಿದ್ದ ಭೀಮಾಶಂಕರ ಗುಳೇದ್ ಬೆಳಗಾವಿ ಎಸ್‌ಪಿ, ಬೆಂಗಳೂರು ಸಿಟಿ ಕ್ರೈಮ್ ಜಂಟಿ ಕಮಿಷನರ್ ಆಗಿದ್ದ ಡಿಐಜಿ ದರ್ಜೆಯ ಅಧಿಕಾರಿ ಡಾ.ಎಸ್. ಡಿ ಶರಣಪ್ಪ ಅವರನ್ನು ಮೈಸೂರಿನ ಪೊಲೀಸ್ ಅಕಾಡೆಮಿ ಡಿಐಜಿಪಿ ಆಗಿ ವರ್ಗ ಮಾಡಲಾಗಿದೆ. ಮಂಗಳೂರು ಕಮಿಷನರ್ ಕುಲದೀಪ್ ಜೈನ್, ಉಡುಪಿ ಎಸ್ಪಿ ಅಕ್ಷಯ್ ಮಚ್ಚೀಂದ್ರ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಳಿಗೆ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆಗೊಳಿಸಲಾಗಿದೆ. ಉಡುಪಿ ಎಸ್ಪಿ ಆಗಿ ಕಲಬುರಗಿಯಲ್ಲಿ ಪೊಲೀಸ್ ಅಕಾಡೆಮಿಯಲ್ಲಿದ್ದ ಅರುಣ್ ಕೆ. ಅವರನ್ನು ನೇಮಕ ಮಾಡಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಸ್ಥಳ ಮತ್ತು ಹುದ್ದೆ ನಿಯೋಜನೆ ಇಂತಿದೆ. 

BIGG NEWS : ರಾತ್ರೋ ರಾತ್ರಿ 35 `IPS' ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ  ಆದೇಶ | Kannada Dunia | Kannada News | Karnataka News | India News

  • ಭೀಮಾಶಂಕರ ಗುಳೇದ್-ಎಸ್​​​​ಪಿ, ಬೆಳಗಾವಿ
  • ಸಾರಾ ಫಾತೀಮಾ-ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ
  • ಡಾ.ಎಸ್.ಡಿ.ಶರಣಪ್ಪ- ಡಿಐಜಿಪಿ & ಡೈರೆಕ್ಟರ್, ಪೊಲೀಸ್ ಅಕಾಡೆಮಿ, ಮೈಸೂರು 
  • ಡಾ.ಕೆ.ಅರುಣ್-ಎಸ್​​​​ಪಿ, ಉಡುಪಿ
  • ಕಾರ್ತಿಕ್​​​​ ರೆಡ್ಡಿ-ಡಿಸಿಪಿ, ಬೆಂಗಳೂರು ಸಂಚಾರ ದಕ್ಷಿಣ ವಿಭಾಗ
  • ಯತೀಶ್ ಚಂದ್ರ-ಎಸ್​​​​ಪಿ, ಆಂತರಿಕ ಭದ್ರತಾ ವಿಭಾಗ
  • ಕೆ.ಪರಶುರಾಮ್-ಎಸ್​​​​ಪಿ, ಇಂಟೆಲಿಜೆನ್ಸ್‌ ವಿಭಾಗ
  • ನಿಕ್ಕಂ ಪ್ರಕಾಶ್ ಅಮೃತ್ -ಎಸ್​​​​ಪಿ, ವೈರ್ ಲೆಸ್
  • ರಾಹುಲ್ ಕುಮಾರ್ ಶಹಾಪುರವಾಡ್- ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ
  • ಡಾ.ಕೋನ ವಂಶಿಕೃಷ್ಣ- ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು
  • ಲಕ್ಷ್ಮಣ್ ನಿಂಬರಗಿ- ಎಸ್​​​​ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ
  • H.D.ಆನಂದ್ ಕುಮಾರ್- ಡೈರೆಕ್ಟೋರೆಟ್ ಸಿವಿಲ್ ರೈಟ್ಸ್, ಎನ್ಪೋರ್ಸ್ಮೆಂಟ್
  • ಕುಶಾಲ್ ಚೌಸ್ಕಿ-ಜಂಟಿ ನಿರ್ದೇಶಕ, ವಿಧಿವಿಜ್ಞಾನ ಪ್ರಯೋಗಾಲಯ, ಬೆಂಗಳೂರು
  • ಸಂಜೀವ್ ಎಂ. ಪಾಟೀಲ್-ಡಿಸಿಪಿ, ವೈಟ್​​ಫೀಲ್ಡ್ ವಿಭಾಗ
  • ಡಾ.ಸುಮನ್ ಡಿ.ಪನ್ನೇಕರ್-ಎಐಜಿಪಿ, ಹೆಡ್ ಕ್ವಾರ್ಟರ್ಸ್-1
  • ವೈ.ಅಮರನಾಥ್ ರೆಡ್ಡಿ-ಎಸ್​ಪಿ, ಬಾಗಲಕೋಟ
  • ಲೋಕೇಶ್ ಭರಮಪ್ಪ-ಎಸ್​​ಪಿ, ರಾಜ್ಯ ಪೊಲೀಸ್ ಅಕಾಡೆಮಿ, ಮೈಸೂರು
  • ಅನುಪಮ್ ಅಗರ್ವಾಲ್-ಮಂಗಳೂರು ಸಿಟಿ ಕಮಿಷನರ್
  • ಕಿಶೋರ್ ಬಾಬು- SP&ಪ್ರಿನ್ಸಿಪಲ್, ಪೊಲೀಸ್ ತರಬೇತಿ ಕೇಂದ್ರ, ಕಲಬುರಗಿ
  • ಎಂ.ಎಸ್.ಮಹಮ್ಮದ್ ಸುಜೀತಾ-ಎಸ್​​​​ಪಿ, ಹಾಸನ
  • ಡಿ.ದೇವರಾಜ್-ಡಿಸಿಪಿ, ಬೆಂಗಳೂರು ಪೂರ್ವ ವಿಭಾಗ
  • ಅದ್ದೂರು ಶ್ರೀನಿವಾಸುಲು-ಎಸ್​ಪಿ, ಕಲಬುರಗಿ
  • ಸೋನವಾನೆ ರಿಷಿಕೇಶ್ ಭಗವಾನ್-ಎಸ್​​ಪಿ, ವಿಜಯಪುರ
  • ಆರ್.ಶ್ರೀನಿವಾಸ್ ಗೌಡ-ಡಿಸಿಪಿ 2, ಸಿಸಿಬಿ ಬೆಂಗಳೂರು
  • ಶೇಖರ್.ಹೆಚ್.ತೆಕ್ಕನ್ನವರ್, ಡಿಸಿಪಿ, ಸಿಸಿಬಿ ಬೆಂಗಳೂರು
  • ವರ್ತಿಕಾ ಕಟಿಯಾರ್-ಎಸ್​​​ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ
  • ಹರಿರಾಮ್ ಶಂಕರ್-ಎಸ್​ಪಿ, ಇಂಟೆಲಿಜೆನ್ಸ್‌ ವಿಭಾಗ
  • ರವೀಂದ್ರ ಕಾಶಿನಾಥ್ ಗಡದಿ-ಎಸ್​ಪಿ, ಇಂಟೆಲಿಜೆನ್ಸ್‌ ವಿಭಾಗ
  • ಅಬ್ದುಲ್ ಅಹದ್-ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ
  • ಪಿ.ಕೃಷ್ಣಕಾಂತ್-ಎಐಜಿಪಿ(ಆಡಳಿತ ವಿಭಾಗ)
  • ಕೆ.ಸಂತೋಷ್ ಬಾಬು-ಡಿಸಿಪಿ ಆಡಳಿತ ವಿಭಾಗ, ಬೆಂಗಳೂರು ನಗರ
  • ಜಯಪ್ರಕಾಶ್-ಎಸ್​​​​ಪಿ, ಇಂಟೆಲಿಜೆನ್ಸ್ ವಿಭಾಗ 
  • ಎಸ್‌.ಗಿರೀಶ್-ಡಿಸಿಪಿ, ಬೆಂಗಳೂರು ಪಶ್ಚಿಮ ವಿಭಾಗ
  • ಕನ್ನಿಕಾ ಸಿಕ್ರಿವಾಲ್-ಡಿಸಿಪಿ, ಕಾನೂನು ಸುವ್ಯವಸ್ಥೆ, ಕಲಬುರಗಿ

 

35 IPS police officers transferred in Karnataka by Congress Government including Mangalore and Udupi. Many have been transferred without any post keeping it hold. Mangalore Commissioner Kuldeep Jain transferred within 5 months of posting.