ಬ್ರೇಕಿಂಗ್ ನ್ಯೂಸ್
21-08-23 05:36 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 21: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ ಸಂದರ್ಭದಲ್ಲಿ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸಿ ಮುಂದುವರಿಯವುದನ್ನು ಒಂದು ಪದ್ಧತಿಯಂತೆ ಅನುಸರಿಸಿಕೊಂಡು ಬಂದಿದೆ.
ಅದೇ ರೀತಿ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಇಂದು ಪೂಜೆ ಸಲ್ಲಿಸಲಾಗಿದೆ. ಚಂದ್ರಯಾನ 3 ಸಲುವಾಗಿ ಶುಭ ಹಾರೈಸಿ ಪೂಜೆ ಮಾಡಲಾಗಿರುವ ಕುರಿತು ಸೇವೆಯ ಚೀಟಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲು ಆರಂಭಿಸಿದೆ. ಮಾತ್ರವಲ್ಲ, ಈ ಕುರಿತು ದೇವಸ್ಥಾನದ ಸೋಷಿಯಲ್ ಮೀಡಿಯಾದಲ್ಲೂ ಸೇವೆಯ ಚೀಟಿ ಸಹಿತ ಶುಭಾಶಯ ಕೋರಲಾಗಿದೆ.
ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆಯ ಚಂದ್ರಯಾನ 3 ನೌಕೆಯು ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ನಿರ್ಮಿಸಲಿ ಮತ್ತು ಇದರೊಂದಿಗೆ ತಾಯಿ ಭಾರತೀಯ ಹೆಸರು ಪ್ರಪಂಚದಲ್ಲೇ ಅಗ್ರಗಣ್ಯವಾಗಲಿ ಎಂದು ಪಂಚಮಿಯ ದಿನವಾದ ಇಂದು ಶ್ರೀ ನಾಗದೇವರಿಗೆ ಹಾಲೆರೆದು ನಾಗ ತಂಬಿಲ (ಕಾರ್ತೀಕ ಪೂಜೆ) ನಡೆಸಿ ಮತ್ತು ಶ್ರೀ ಪುರದೊಡೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯನಲ್ಲಿ ಆಡಳಿತ ಮಂಡಳಿ ಮತ್ತು ಊರ ಹಿರಿಯರೊಂದಿಗೆ ಸೇರಿ ಪ್ರಾರ್ಥಿಸಲಾಯಿತು’ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ.
ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ಹೆಮ್ಮೆಯ ISRO ಸಂಸ್ಥೆಯ ಚಂದ್ರಯಾನ 3 ನೌಕೆಯು ಯಶಸ್ವಿಗಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ನಿರ್ಮಿಸಲಿ ಮತ್ತು ಇದರೊಂದಿಗೆ ತಾಯಿ ಭಾರತೀಯ ಹೆಸರು ಪ್ರಪಂಚದಲ್ಲೆ ಅಗ್ರಗಣ್ಯವಾಗಲಿ ಎಂದು ಪಂಚಮಿಯ ದಿನವಾದ ಇಂದು ಶ್ರೀ ನಾಗದೇವರಿಗೆ ಹಾಲೆರೆದು ನಾಗ ತಂಬಿಲ(ಕಾರ್ತೀಕ ಪೂಜೆ)ನಡೆಸಿ ಮತ್ತು ಶ್ರೀ ಪುರದೊಡೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯನಲ್ಲಿ ಆಡಳಿತ ಮಂಡಳಿ ಮತ್ತು ಊರ ಹಿರಿಯರೊಂದಿಗೆ ಸೇರಿ ಪ್ರಾರ್ಥಿಸಲಾಯಿತು.
ನಾಡೆನೆಲ್ಲೆಡೆಯಿಂದ ಬಂದಿದ್ದ ಸಾವಿರಾರು ಭಕ್ತರಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ಪಂಚಮಿಯ ದಿನವಾದ ಆ. 21ರಂದು ಶ್ರೀ ನಾಗದೇವರಿಗೆ ಹಾಲೆರೆದು ನಾಗ ತಂಬಿಲ ಪೂಜೆ ನೆರವೇರಿಸಲಾಯಿತು. ಶ್ರೀ ಪುರದೊಡೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯನಲ್ಲಿ ಆಡಳಿತ ಮಂಡಳಿ ಮತ್ತು ಊರ ಹಿರಿಯರು ಸೇರಿ ಪ್ರಾರ್ಥನೆ ಸಲ್ಲಿಸಿದರು. ಆ. 21ರಂದು ನಾಡಿನೆಲ್ಲೆಡೆ ನಾಗಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ, ನಾಗದೇವತೆಯ ಪೂಜೆಗೆ ಪ್ರಸಿದ್ಧಿಯನ್ನು ಪಡೆದಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಬ್ಬದ ವಾತಾವರಣವಿತ್ತು. ರಾಜ್ಯದಿಂದ, ಹೊರರಾಜ್ಯಗಳಿಂದ ಬಂದಿರುವ ಸಾವಿರಾರು ಭಕ್ತರು ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ, ಇಸ್ರೋ ವಿಜ್ಞಾನಿಗಳ ಸಾಹಸ ಕಾರ್ಯಕ್ಕೆ ಯಶಸ್ಸು ಸಿಗಲೆಂದು ದೇವಸ್ಥಾನದ ಆಡಳಿತ ಮಂಡಳಿಯು ವಿಶೇಷ ಪೂಜೆಯನ್ನು ಸಲ್ಲಿಸಿತು.
ಭೂಮಿಯ ಮೇಲೆ ಮಾನವನ ಉಗಮವಾದಾಗಿನಿಂದ ಅವರು ಭೂಮಿಯ ಸುತ್ತಲಿನ ಗ್ರಹಗಳ ಬಗ್ಗೆ ಕುತೂಹಲ ಹೊಂದಿದವನೇ ಆಗಿದ್ದಾನೆ. ಭೂಮಿಗೆ ಹತ್ತಿರದಲ್ಲಿರುವ ಚಂದ್ರನು ಆತನ ಕುತೂಹಲದ ಮತ್ತೊಂದು ಗ್ರಹ. ಭೂಮಿಗೆ ಉಪಗ್ರಹವಾಗಿದ್ದುಕೊಂಡು ಭೂಮಿಯನ್ನು ಪರಿಭ್ರಮಿಸುತ್ತಿರುವ ಆ ಚಂದ್ರನನ್ನು ಮನುಷ್ಯ ನೂರಾರು ವರ್ಷಗಳಿಂದ ವೈಜ್ಞಾನಿಕವಾಗಿ ಅಧ್ಯಯನ ಮಾಡಿಕೊಂಡೇ ಬಂದಿದ್ದಾನೆ. ಇಷ್ಟಾದರೂ, ಚಂದ್ರನ ದಕ್ಷಿಣ ಧ್ರವವು ಭೂಮಿಗೆ ಕಂಡಿಲ್ಲ. ಅದನ್ನು ಉಪಗ್ರಹಗಳ ಮೂಲಕ ಅಧ್ಯಯನ ಮಾಡಲಾಗಿದೆ. ಅಲ್ಲಿ ದಟ್ಟ ಮಂಜಿನಂಥ ದೊಡ್ಡ ಗಡ್ಡೆಗಳಂಥ ವಾತಾವರಣವಿದ್ದು, ಅದರಲ್ಲಿ ನೀರು ಅಥವಾ ನೀರಿನ ಅಂಶವಿದೆ ಎಂಬುದು ಜಗತ್ತಿನ ಖಗೋಳ ವಿಜ್ಞಾನಿಗಳ ಅಂದಾಜು. ಹಾಗಾಗಿಯೇ ಅದರ ಅಧ್ಯಯನಕ್ಕೆ ಮುಂದಾಗಲಾಗಿದೆ.
ಈವರೆಗೆ ಚಂದ್ರನ ದಕ್ಷಿಣ ಧ್ರುವವನ್ನು ಯಾವ ದೇಶಗಳೂ ಅಧ್ಯಯನ ಮಾಡಿಲ್ಲ. ಈಗ ಭಾರತವು ಅಲ್ಲಿ ನೀರನ್ನು ಪತ್ತೆ ಮಾಡುವ ಉದ್ದೇಶದಿಂದ ಚಂದ್ರಯಾನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಚಂದ್ರಯಾನ - 2 ಯೋಜನೆಯಡಿ, ಒಂದು ಬಾಹ್ಯಾಕಾಶ ನೌಕೆಯನ್ನು ಚಂದ್ರನತ್ತ ಕಳುಹಿಸಲಾಗಿತ್ತು. ಆದರೆ, ಅದು ಸಾಫ್ಟ್ ಲ್ಯಾಂಡಿಂಗ್ ಮಾಡದೇ ಚಂದ್ರನಲ್ಲಿ ಇಳಿಯುವಾಗ ಅದರ ಮೇಲ್ಮೈಗೆ ಅಪ್ಪಳಿಸಿ ನಾಶವಾಗಿತ್ತು. ಈಗ, ಚಂದ್ರಯಾನ - 3ರಲ್ಲಿ ಹಿಂದಿನ ವೈಫಲ್ಯಗಳನ್ನು ಮೆಟ್ಟಿನಿಂತು ಯಶಸ್ವಿಯಾಗಿ ಲ್ಯಾಂಡಿಂಗ್ ಆಗುವಂತೆ ರೂಪಿಸಲಾಗಿದೆ. ಹಾಗಾಗಿಯೇ, ಈ ಯೋಜನೆಯು ಯಶಸ್ವಿಯಾಗಲೆಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ನೆರವೇರಿಸಲಾಗಿದೆ.
Nagapanchami is being celebrated with great enthusiasm throughout Karnataka today. This festival is dedicated to snakes, which are revered as sacred creatures in Hinduism. In the southern district of Dakshina Kannada, special worship was performed at the Kukke Subramanya temple to commemorate the successful launch of Chandrayaan-3, India's third lunar mission.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm