ಬ್ರೇಕಿಂಗ್ ನ್ಯೂಸ್
29-07-23 07:07 pm HK News Desk ಕರ್ನಾಟಕ
ತುಮಕೂರು, ಜುಲೈ 29: ನನ್ನ ಮಕ್ಕಳ ಮುಂದೆಯೇ ನನ್ನನ್ನು ಪೊಲೀಸರು ಕರೆದುಕೊಂಡು ಹೋದರು. ಯಾವುದೇ ಬಂಧನದ ವಾರೆಂಟ್ ಕೂಡ ಕೊಡಲಿಲ್ಲ. ನನ್ನ ಮುಖ ತೊಳೆಯಲು ಅವಕಾಶ ನೀಡಲಿಲ್ಲ ಎಂದು ಬಿಜೆಪಿ ಕಾರ್ಯಕರ್ತೆ ಶಕುಂತಲಾ ಆರೋಪಿಸಿದ್ದಾರೆ.
ಉಡುಪಿ ವಿಡಿಯೋ ಪ್ರಕರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ಬೆಂಗಳೂರು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಹಲವು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ ಬಳಿಕ ಠಾಣಾ ಜಾಮೀನಿನ ಮೇಲೆ ಶಕುಂತಲಾ ಅವರನ್ನು ಬಿಡುಗಡೆ ಮಾಡಿದ್ದರು. ಈ ಬಗ್ಗೆ ಶನಿವಾರ ಮಾತನಾಡಿರುವ ಶಕುಂತಲಾ, ಪೊಲೀಸರು ಯಾವುದೇ ವಾರಂಟ್ ಇಲ್ಲದೆ ತನ್ನನ್ನು ವಶಕ್ಕೆ ಪಡೆದು, ಬಲವಂತವಾಗಿ ಕರೆದುಕೊಂಡು ಹೋದರು ಎಂದು ಹೇಳಿದ್ದಾರೆ.
ಉಡುಪಿ ಕಾಲೇಜಿನ ವಿಡಿಯೋ ಘಟನೆಯನ್ನು ಮಕ್ಕಳ ಆಟ ಎಂದು ಹೇಳಿ ಕಾಂಗ್ರೆಸ್ ಪೋಸ್ಟ್ ಮಾಡಿದ್ದ ಟ್ವೀಟ್ನ ಸ್ಕ್ರೀನ್ಶಾಟ್ ಅನ್ನು ನಾನು ಬಳಸಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಅಥವಾ ಇತರರ ವಿಡಿಯೋ ಮಾಡಿದ್ದರೇ ಮಕ್ಕಳಾಟ ಎಂದು ಹೇಳುತ್ತಿರಾ ಎಂದು ಪ್ರಶ್ನಿಸಿದ್ದೆ. ಆ ಟ್ವೀಟ್ ಮಾಡಿದ್ದಕ್ಕೆ 7 ರಿಂದ 8 ಮಂದಿ ಪೊಲೀಸ್ ಸಿಬ್ಬಂದಿ ಬಂದು ನನ್ನನ್ನು ಬಲವಂತವಾಗಿ ಕರೆದೊಯ್ದರು ಎಂದಿದ್ದಾರೆ.
ಮುಂಜಾನೆ 7 ರಿಂದ 7.30ರ ಸುಮಾರಿಗೆ ಪೊಲೀಸರು ನಮ್ಮ ಮನೆಗೆ ಬಂದಿದ್ದರು. ನಾಲ್ವರು ಮಹಿಳೆಯರು ಮತ್ತು ಮೂವರು ಪೊಲೀಸರು ನಾಗರಿಕ ಉಡುಗೆಯಲ್ಲಿ ಬಂದಿದ್ದರು. ಮಹಿಳಾ ಇನ್ಸ್ಪೆಕ್ಟರ್ ಮಾತ್ರ ಸಮವಸ್ತ್ರ ಧರಿಸಿದ್ದರು. ನನ್ನ ಮಕ್ಕಳು ಶಾಲೆಗೆ ಹೋಗಲು ಸಿದ್ಧರಾಗುತ್ತಿದ್ದಾ ಪೊಲೀಸರು ಬಂದಿದ್ದರು. ನಾನು ನೋಟಿಸ್ ಕೊಡಿ, ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮನವಿ ಮಾಡಿದೆ. ಆದರೆ, ಅವರು ನನ್ನ ಮಾತನ್ನು ಕೇಳಲಿಲ್ಲ. ನನ್ನನ್ನು ಬಂಧಿಸುವ ಮುನ್ನ ಅವರು ಅರೆಸ್ಟ್ ವಾರೆಂಟ್ ಕೂಡ ನೀಡಲಿಲ್ಲ ಎಂದು ಹೇಳಿದ್ದಾರೆ.
ನನ್ನುನ್ನು ಕ್ರಿಮಿನಲ್ ರೀತಿ ನಡೆಸಿಕೊಂಡರು. ನಾನು ಆಗಷ್ಟೇ ಎಚ್ಚರವಾಗಿದ್ದೆ, ಅವರು ನನ್ನ ಮುಖ ತೊಳೆಯಲು ಕೂಡ ಅವಕಾಶ ನೀಡಲಿಲ್ಲ. ಬಟ್ಟೆ ಬದಲಾಯಿಸುತ್ತೇನೆ ಎಂದರು ಬಿಡಲಿಲ್ಲ. ತಮ್ಮ ಮುಂದೆಯೇ ಬಟ್ಟೆ ಬದಲಾಯಿಸುವಂತೆ ಒತ್ತಾಯಿಸಿದರು, ರೂಮ್ನ ಬಾಗಿಲನ್ನು ಮುಚ್ಚಲು ಬಿಡಲಿಲ್ಲ. ನನ್ನ ಮೊಬೈಲ್ ಫೋನ್ ಅನ್ನು ತೆಗೆದುಕೊಂಡರು. ನನ್ನನ್ನು ಕಾರಿನ ಹಿಂದೆ ಕೂರಿಸಿ ನನ್ನ ಎರಡು ಬದಿಯಲ್ಲಿ ಇಬ್ಬರು ಮಹಿಳಾ ಪೊಲೀಸರು ಕುಳಿತರು. ಆ ರೀತಿ ಏನನ್ನೂ ಬರೆಯದಂತೆ ಒತ್ತಡ ಹೇರಿದರು ಎಂದು ಶಕುಂತಲಾ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತನ ದೂರಿನ ಆಧಾರದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದರ ಅನ್ವಯ ಶುಕ್ರವಾರ ಬೆಳಗ್ಗೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ತುಮಕೂರಿನಲ್ಲಿ ವಶಕ್ಕೆ ಪಡೆದು, ಬಳಿಕ ಬಂಧಿಸಿದ್ದರು. ಹಲವು ಗಂಟೆಗಳ ವಿಚಾರಣೆ ನಡೆಸಿ, ಸಂಜೆ ವೇಳೆಗೆ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
Police have treated me as an accused, BJP Shakuntala narrates her story after her arrest for tweet against Cm Siddaramaiah. In an intriguing turn of events, a BJP woman activist, Shakuntala H S, found herself arrested and later released by the Bengaluru police after she dared to question the Karnataka Chief Minister's reaction to a sensitive incident in Udupi. The activist's tweet was in response to a Congress social media post that termed the Udupi toilet recording incident involving three minor girls from a minority community as a mere prank among kids and not a communal issue.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
07-07-25 04:11 pm
HK News Desk
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
07-07-25 05:02 pm
Mangalore Correspondent
Mangalore Car Accident, Thumbe: ಹಳೆ ಸ್ವಿಫ್ಟ್...
05-07-25 05:16 pm
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
07-07-25 07:13 pm
Mangalore Correspondent
Digital Arrest, Cyber Fraud, Mangalore: ಡಿಜಿಟ...
07-07-25 03:30 pm
Moral policing, Puttur, Mangalore Crime: ನೀನು...
07-07-25 12:20 pm
Tamilnadu Lock up death, Kannada News: ತಮಿಳುನ...
06-07-25 10:52 pm
Mangalore Foreign Job Scam, Hireglow Elegant,...
06-07-25 04:14 pm