ಬ್ರೇಕಿಂಗ್ ನ್ಯೂಸ್
19-05-23 10:10 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 19 : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಮುಹೂರ್ತ ನಿಗದಿಯಾಗಿದ್ದು, ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಜೊತೆಗೆ, ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ ಎಂಬುದು ಖಾತ್ರಿಯಾಗಿದೆ. ಹೊಸ ಸರ್ಕಾರದಲ್ಲಿ ಯಾರೆಲ್ಲ ಸಚಿವರಾಗುತ್ತಾರೆ ಎಂಬ ಕುತೂಹಲ ಉಂಟಾಗಿದೆ. ಈಗಾಗಲೇ ಸಚಿವ ಸ್ಥಾನಕ್ಕೆ ಸಂಭ್ಯಾವರ ಪಟ್ಟಿಯನ್ನು ಕಾಂಗ್ರೆಸ್ ಸಿದ್ಧಪಡಿಸಿದೆ. ಮೊದಲ ದಿನವೇ ಪೂರ್ಣ ಪ್ರಮಾಣದ ಸರ್ಕಾರ ತರಲು ಚಿಂತನೆ ನಡೆದಿದೆ. ಇದಕ್ಕಾಗಿ 32 ಮಂದಿಯ ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡಿಗೆ ರವಾನೆ ಮಾಡಲಾಗಿದೆ.
ಸಂಭಾವ್ಯರ ಪಟ್ಟಿಯಲ್ಲಿ ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ/ರೂಪಕಲಾ ಶಶಿಧರ್, ಬಿ.ಕೆ.ಹರಿಪ್ರಸಾದ್, ಎಂ.ಬಿ.ಪಾಟೀಲ, ರಾಮಲಿಂಗಾ ರೆಡ್ಡಿ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ, ಕೃಷ್ಣ ಬೈರೇಗೌಡ, ಯು.ಟಿ.ಖಾದರ್/ ಸಲೀಂ ಅಹ್ಮದ್, ಜಮೀರ್ ಅಹ್ಮದ್ ಖಾನ್/ ಎನ್.ಎ. ಹ್ಯಾರೀಸ್, ಸತೀಶ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಶರಣ ಪ್ರಕಾಶ ಪಾಟೀಲ ಹೆಸರಿದೆ.
ಅಜಯ್ ಧರ್ಮ ಸಿಂಗ್, ದಿನೇಶ್ ಗುಂಡೂರಾವ್, ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳಕರ, ಮಧು ಬಂಗಾರಪ್ಪ, ಬಸವರಾಜ ರಾಯರಡ್ಡಿ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ವಿಜಯಾನಂದ ಕಾಶಪ್ಪನವರ, ವಿನಯ್ ಕುಲಕರ್ಣಿ, ಟಿ.ಡಿ.ರಾಜೇಗೌಡ/ ಕೆ.ಎಂ.ಶಿವಲಿಂಗೇಗೌಡ, ಬಿ.ಕೆ. ಸಂಗಮೇಶ್ವರ, ಆರ್.ಬಿ. ತಿಮ್ಮಾಪುರ, ಕೊತ್ತೂರು ಮಂಜುನಾಥ್, ಶ್ಯಾಮನೂರು ಶಿವಶಂಕರಪ್ಪ/ ಎಸ್.ಎಸ್.ಮಲ್ಲಿಕಾರ್ಜುನ, ಎಂ.ಕೃಷ್ಣಪ್ಪ/ ಪ್ರಿಯಕೃಷ್ಣ ಹೆಸರು ಇದೆ ಎನ್ನುವ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಡಿಕೆ ಶಿವಕುಮಾರ್ ಆಪ್ತರಿಗೆ ಸಚಿವ ಸಂಪುಟದಲ್ಲಿ 20 ಸ್ಥಾನ ಹಾಗೂ ಇದರ ಜೊತೆಗೆ ಜಲಸಂಪನ್ಮೂಲ ಮತ್ತು ಇಂಧನ ಎರಡು ಪ್ರಮುಖ ಖಾತೆಗಳನ್ನು ಪಡೆಯುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 13 ಸಚಿವ ಸ್ಥಾನ ಬಿಟ್ಟು ಕೊಡಲಾಗುತ್ತದೆ ಎಂದು ತಿಳಿದುಬಂದಿದೆ.
ಅಲ್ಪಸಂಖ್ಯಾತರಲ್ಲಿ ಶಿವಕುಮಾರ್ ಈಗಾಗಲೇ ಹಿರಿಯ ನಾಯಕರಾದ ಯು.ಟಿ ಖಾದರ್ ಮತ್ತು ತನ್ವೀರ್ ಸೇಠ್ ಅವರನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಹೊರಗಿಡಬೇಕೆಂದು ಒತ್ತಾಯಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ಜಮೀರ್ ಖಾನ್ ತನ್ನನ್ನು ದೂರ ಇಡುವ ನಿರ್ಧಾರವನ್ನು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
32 along with BK Hariprasad, UT khader, Parameshwar to be inside the cabinet of Siddaramaiah.B. Z. Zameer Ahmed Khan out for now.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm