ಬ್ರೇಕಿಂಗ್ ನ್ಯೂಸ್
01-05-23 08:32 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 1 : ರಾಜ್ಯದ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿರುವಾಗ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರನ್ನು ಕೆಣಕಲು ಹೊರಟ ಕಾಂಗ್ರೆಸ್, ಹೊಸ ಅಭಿಯಾನ ಆರಂಭಿಸಿದೆ. 'CryPM payCM' ಎಂಬ ಹೆಸರಿನಲ್ಲಿ ರಾಜ್ಯದ ಸಿಎಂ ಬೊಮ್ಮಾಯಿ ಮತ್ತು ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದೆ.
ಚುನಾವಣೆ ಘೋಷಣೆಯ ಎರಡು ತಿಂಗಳು ಹಿಂದೆಯೇ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಸಿಎಂ ಬೊಮ್ಮಾಯಿ ಅವರನ್ನು ಅಣಕಿಸಿ ಪೇ ಸಿಎಂ ಅಭಿಯಾನ ನಡೆಸಿತ್ತು. ಅದಕ್ಕೆ ಭಾರೀ ಪ್ರತಿಕ್ರಿಯೆ ಸಿಕ್ಕಿದ್ದಲ್ಲದೆ, ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರನ್ನು ಮುಜುಗರಕ್ಕೀಡು ಮಾಡಿತ್ತು. ಇದೀಗ ಮತದಾನಕ್ಕೆ ಕೆಲವೇ ದಿನಗಳಿರುವಂತೆ ಕಾಂಗ್ರೆಸ್ ಹೊಸ ಅಭಿಯಾನ ಆರಂಭಿಸಿದೆ. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಕರ್ನಾಟಕ ರಾಜ್ಯದಲ್ಲಿ "ಮೋದಿ ಸುನಾಮಿ" ಎದ್ದಿದೆ. ಈ ಸುನಾಮಿಗೆ ಕಾಂಗ್ರೆಸ್ ಹೆದರಿದೆ ಎಂದು ಟೀಕಿಸಿದೆ.
ಮೊದಲು ಕಾಂಗ್ರೆಸ್ ನಮ್ಮನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆದರು. ನಮ್ಮ ವಿರುದ್ಧ ಈ ಪೇಸಿಎಂ ಅಭಿಯಾನವನ್ನೂ ನಡೆಸಿದ್ರು. ಈ ಅಭಿಯಾನಗಳು ಜನಸಾಮಾನ್ಯರನ್ನು ತಲುಪಲು ವಿಫಲವಾಗಿವೆ. ರಾಜ್ಯದಲ್ಲಿ ಬಿಜೆಪಿಯ ಜನಪ್ರಿಯತೆಯಿಂದ ವಿಚಲಿತರಾಗಿರುವ ಕಾಂಗ್ರೆಸ್, ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದೆ ಎಂದು ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಕಳೆದ ಗುರುವಾರ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ವಿಷಪೂರಿತ ಹಾವಿನಂತೆ, ಅದು ವಿಷವೋ ಅಲ್ಲವೋ ಎಂದು ನೀವು ಪರಿಶೀಲಿಸಬಹುದು. ಆದರೆ ನೀವು ಒಂದು ಹನಿ ನೆಕ್ಕಿದರೆ ನೀವು ಸತ್ತು ಹೋಗುತ್ತೀರಿ" ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಜೊತೆಗೆ ಪ್ರಧಾನಿ ಇದನ್ನೇ ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನಿ ಮೋದಿಯನ್ನು ನಿಂದಿಸುವುದು ಮತ್ತು ಅವಮಾನಿಸುವುದು ಕಾಂಗ್ರೆಸ್ ನಾಯಕರ ಏಕೈಕ ಉದ್ದೇಶ. ಪ್ರಧಾನಿ ಮೋದಿ ನಾಯಕತ್ವದಿಂದ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ. ಅವರು ಕೇವಲ ದೇಶದ ನಾಯಕರಲ್ಲ, ವಿಶ್ವ ನಾಯಕರಾಗಿದ್ದಾರೆ. ಕಾಂಗ್ರೆಸ್ನ ಏಕೈಕ ಗುರಿ ಪ್ರಧಾನಿ ಮೋದಿಯನ್ನು ನಿಂದಿಸುವುದು ಎಂದು ಕಿಡಿಕಾರಿದ್ದಾರೆ.
Minutes after Congress leader Priyanka Gandhi Vadra referred to Prime Minister Narendra Modi's remarks about verbal abuse during a poll rally in Karnataka's Bagalkote on Sunday, #CryPMPayCM started trending on Twitter. Priyanka said one has to take such attacks in their stride in public life and asked PM Modi to learn from her brother and disqualified MP Rahul Gandhi, who "is ready to take a bullet for the sake of the country".
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 02:32 pm
Mangalore Correspondent
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
05-07-25 01:20 pm
Mangalore Correspondent
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm