ಬ್ರೇಕಿಂಗ್ ನ್ಯೂಸ್
17-03-23 08:49 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.17: ಶಿವಮೊಗ್ಗದ ತುಂಗಾ ಮತ್ತು ವಾರಾಹಿ ನದಿ ತೀರದಲ್ಲಿ ಬಾಂಬ್ ಟ್ರಯಲ್ ಮತ್ತು ಐಸಿಸ್ ಪ್ರೇರಿತರಾಗಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇಬ್ಬರು ಆರೋಪಿಗಳಿಗೆ ವಿದೇಶದಿಂದ ಕ್ರಿಪ್ಟೋ ಕರೆನ್ಸಿ ಮೂಲಕ ಫಂಡಿಂಗ್ ಆಗುತ್ತಿದ್ದ ವಿಚಾರವನ್ನೂ ತಿಳಿಸಿದ್ದಾರೆ.
ಕಳೆದ ಆಗಸ್ಟ್ 15ರಂದು ಶಿವಮೊಗ್ಗದಲ್ಲಿ ಗಲಾಟೆ ನಡೆದು ಪ್ರೇಮ್ ಸಿಂಗ್ ಎಂಬ ಯುವಕನಿಗೆ ಇರಿತ ಪ್ರಕರಣದ ಬೆನ್ನತ್ತಿದ ಸ್ಥಳೀಯ ಪೊಲೀಸರು ಜಬೀವುಲ್ಲಾ ಎಂಬಾತನ ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಮಹತ್ವದ ಮಾಹಿತಿಗಳು ಹೊರಬಂದಿದ್ದವು. ಮೊದಲು ಜಬೀವುಲ್ಲಾನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಸೈಯದ್ ಯಾಸಿನ್ ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಮಂಗಳೂರಿನಲ್ಲಿ ಲಷ್ಕರ್ ಪರ ಗೋಡೆ ಬರಹ ಬರೆದ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಝ್ ಮುನೀರ್ ನನ್ನೂ ಬಂಧಿಸಲಾಗಿತ್ತು. ಇವರು ಬಂಟ್ವಾಳದ ನೇತ್ರಾವತಿ ಮತ್ತು ಶಿವಮೊಗ್ಗದಲ್ಲಿ ತುಂಗಾ ನದಿಯ ತೀರದಲ್ಲಿ ಇಐಡಿ ಸ್ಫೋಟಕಗಳನ್ನು ಬಳಸಿ ಬಾಂಬ್ ಸ್ಫೋಟದ ಪ್ರಯೋಗ ನಡೆಸಿರುವುದು ತನಿಖೆಯಲ್ಲಿ ಕಂಡುಬಂದಿತ್ತು.
ಪ್ರಕರಣದಲ್ಲಿ ತನಿಖೆ ಕೈಗೆತ್ತಿಕೊಂಡಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದರು. ಮಾಜ್ ಮತ್ತು ಯಾಸಿನ್ ವಿರುದ್ಧ ದೇಶದ್ರೋಹ ಕಾಯ್ದೆಯಡಿ 18ಬಿ, 20, 38 ಕಲಂ ಅಡಿ ಮತ್ತು 120 ಬಿ, 121ಎ, 122 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು. ಇದಲ್ಲದೆ, ರಾಷ್ಟ್ರ ಧ್ವಜವನ್ನು ಬೆಂಕಿ ಕೊಟ್ಟು ಹೊತ್ತಿಸಿ ಅದನ್ನು ವಿಡಿಯೋ ಮಾಡಿ ಷೇರ್ ಮಾಡಿದ್ದಕ್ಕಾಗಿ ರಾಷ್ಟ್ರೀಯ ಗೌರವಕ್ಕೆ ಧಕ್ಕೆ ಎಸಗಿದ ಬಗ್ಗೆ ಕೇಸು ದಾಖಲಾಗಿತ್ತು. ಇವರಿಬ್ಬರು ಕೂಡ ಬಿಟೆಕ್ ಪದವೀಧರರಾಗಿದ್ದು, ವಿದೇಶಗಳಿಂದ ಆನ್ಲೈನ್ ಮೂಲಕ ಇಸ್ಲಾಮಿಕ್ ಸ್ಟೇಟ್ ನಿರ್ಮಿಸುವುದಕ್ಕಾಗಿ ತರಬೇತುಗೊಂಡಿದ್ದರು.
ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಆಸ್ತಿ, ಗೋದಾಮು, ಲಿಕ್ಕರ್ ಕೇಂದ್ರಗಳು, ಹಾರ್ಡ್ ವೇರ್ ಶಾಪ್, ವಾಹನಗಳನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯ ಎಸಗಲು ವಿದೇಶದಿಂದ ಇವರಿಗೆ ಆದೇಶ ಬಂದಿತ್ತು. ಈ ರೀತಿಯ ಕೃತ್ಯ ಎಸಗುವುದಕ್ಕಾಗಿ ಯಾಸಿನ್ ಮತ್ತು ಮಾಝ್ 25 ವಿವಿಧ ಕಡೆಗಳಲ್ಲಿ ಸಂಚು ಹೂಡಿದ್ದರು. ಇಬ್ಬರು ಕೂಡ ಶಿವಮೊಗ್ಗ ಜಿಲ್ಲೆಯ ಆಗುಂಬೆ ಮತ್ತು ವಾರಾಹಿ ನದಿ ತೀರಗಳಿಗೆ ಟ್ರಕ್ಕಿಂಗ್ ಎಂದು ತೆರಳಿ ಅಲ್ಲಿಯೇ ಇದ್ದುಕೊಂಡು ತರಬೇತು ನಡೆಸುತ್ತಿದ್ದರು. ಐಇಡಿ ಸ್ಫೋಟಕಗಳನ್ನು ಬಳಸಿ ಯಾಸಿನ್ ವಾರಾಹಿ ನದಿ ತೀರದಲ್ಲಿ ಸ್ಫೋಟವನ್ನು ನಡೆಸಿದ್ದ. ಅಲ್ಲಿಂದಲೇ ಭಾರತ ವಿರೋಧಿ ಕೃತ್ಯ ಎಸಗುತ್ತಿದ್ದೇನೆಂದು ತೋರಿಸಲು ರಾಷ್ಟ್ರ ಧ್ವಜವನ್ನು ಬೆಂಕಿ ಕೊಟ್ಟು ಹೊತ್ತಿಸಿದ್ದಲ್ಲದೆ, ಅದನ್ನು ವಿಡಿಯೋ ಮಾಡಿ ಐಸಿಸ್ ಉಗ್ರಗಾಮಿಗಳಿಗೆ ಕಳಿಸಿಕೊಟ್ಟಿದ್ದ. ಯಾಸಿನ್ ಮೊಬೈಲ್ ಪರಿಶೀಲನೆ ವೇಳೆ ಇದರ ವಿಡಿಯೋ ಪತ್ತೆಯಾಗಿತ್ತು.
ಕ್ರಿಪ್ಟೋ ಕರೆನ್ಸಿಯಲ್ಲಿ ವಿದೇಶಿ ಫಂಡಿಂಗ್
ಯಾಸಿನ್ ಮತ್ತು ಮಾಜ್ ಇಬ್ಬರಿಗೂ ವಿದೇಶದಿಂದ ಕ್ರಿಪ್ಟೋ ಕರೆನ್ಸಿ ಮೂಲಕ ಫಂಡಿಂಗ್ ಮಾಡಲಾಗಿತ್ತು. ಮಾಜ್ ಮುನೀರ್ ಒಂದೂವರೆ ಲಕ್ಷ ರೂಪಾಯಿ ಮೊತ್ತದ ಕ್ರಿಪ್ಟೋ ವ್ಯಾಲೆಟ್ ಕರೆನ್ಸಿಯನ್ನು ಪಡೆದಿದ್ದ. ಸೈಯದ್ ಯಾಸಿನ್ ತನ್ನ ಗೆಳೆಯನ ಮೂಲಕ 62 ಸಾವಿರ ರೂ. ಮೊತ್ತವನ್ನು ವಿದೇಶದಿಂದ ಪಡೆದುಕೊಂಡಿದ್ದ. ಇವರೊಂದಿಗೆ ಮಹಮ್ಮದ್ ಶಾರೀಕ್ ಕೂಡ ಈ ಎಲ್ಲ ಕೃತ್ಯದಲ್ಲಿ ಭಾಗಿಯಾಗಿದ್ದ. ಆನಂತರ, ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದಲ್ಲದೆ, ಇದೇ ಐಸಿಸ್ ಪರ ವಿಧ್ವಂಸಕ ಕೃತ್ಯ ಎಸಗುವ ಭಾಗವಾಗಿ ಮಂಗಳೂರಿಗೆ ಕುಕ್ಕರ್ ನಲ್ಲಿ ಬಾಂಬ್ ಜೋಡಿಸಿ ತಂದಿದ್ದ. ನ.19ರಂದು ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ಬಾಂಬ್ ಇಡುವ ಯೋಜನೆ ಆತನದ್ದಾಗಿತ್ತು. ಆದರೆ, ಸಂಜೆ ವೇಳೆಗೆ ಪಡೀಲ್ ಮೂಲಕ ನಾಗುರಿಯಿಂದ ಆಟೋ ರಿಕ್ಷಾದಲ್ಲಿ ಬಾಂಬ್ ಒಯ್ಯುತ್ತಿದ್ದಾಗ ಅಕಸ್ಮಾತ್ ಸ್ಫೋಟ ಸಂಭವಿಸಿತ್ತು. ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದು, ಅದಕ್ಕೂ ಕೊಯಮತ್ತೂರಿನ ಸ್ಫೋಟಕ್ಕೂ ನಂಟು ಇರುವುದರಿಂದ ಅದರ ತನಿಖೆ ಮುಂದುವರಿದಿದೆ.
The National Investigation Agency (NIA) has filed a chargesheet against the two accused in the Shivamogga Islamic State (IS) conspiracy case. The case is regarding the conspiracy hatched to further the activities of the Islamic State by carrying out acts of arson, sabotage and violence in Karnataka. Maaz Muneer Ahmed and Syed Yasin from Shivamogga have been charged under IPC sections 120B, 121A, and 122. They are also booked under sections 18, 18B, 20 & 38 of UA (P) Act and other sections.
03-07-25 05:24 pm
Bangalore Correspondent
Rain kadaba, Sullia, Mangalore: ಕಡಬ, ಸುಳ್ಯದಲ್...
03-07-25 10:54 am
Tumakuru, Fathers Jail, Traffic, Bike: ತುಮಕೂರ...
03-07-25 10:52 am
Dk Shivakumar, CM Siddaramaiah: ನನ್ನ ಹೆಸ್ರು ಹ...
02-07-25 11:02 pm
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
04-07-25 11:46 am
Mangalore Correspondent
Mangalore Police, Drugs, Sudheer Kumar Reddy:...
03-07-25 10:50 pm
ರಹಿಮಾನ್ ಕೊಲೆ ಪ್ರಕರಣ ; ಅನುಮತಿ ನಿರಾಕರಿಸಿದ್ದರೂ ಬ...
03-07-25 10:39 pm
Mangalore Police, New Rules, Festival; ಮೊಸರು...
03-07-25 03:43 pm
Mangalore, Heart Attack Spike: ದಕ್ಷಿಣ ಕನ್ನಡ ಜ...
03-07-25 02:33 pm
04-07-25 12:31 pm
Mangalore Correspondent
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm
ಮಹಾದೇವ್ ಬೆಟ್ಟಿಂಗ್ ಹಗರಣ ; ಮೋಸ್ಟ್ ವಾಂಟೆಡ್ ಆರೋಪಿ...
03-07-25 07:09 pm
Infosys Employee, Video Recording, Crime: ಇನ್...
02-07-25 10:15 pm