ಬ್ರೇಕಿಂಗ್ ನ್ಯೂಸ್
15-03-23 12:53 pm HK News Desk ಕರ್ನಾಟಕ
ಮಡಿಕೇರಿ, ಮಾ.15 : ಕರೆ ಮಾಡು, ವಾಟ್ಸಪ್ ಚಾಟ್ ಮಾಡು ಎಂದು ಸಹೋದ್ಯೋಗಿ ಮಹಿಳೆಗೆ ಮೇಲಧಿಕಾರಿ ಕಿರುಕುಳ ನೀಡಿದ್ದು ಇದರಿಂದ ಬೇಸತ್ತ ಚೆಸ್ಕಾಂ ಕಂಪ್ಯೂಟರ್ ಆಪರೇಟರ್ ಆಗಿದ್ದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದ ಸೌಮ್ಯ ಮೃತ ಮಹಿಳೆ. ಈ ಬಗ್ಗೆ ಚೆಸ್ಕಾಂ ಮಡಿಕೇರಿ ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ವಿನಯ್ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರೇರಣೆಯೆಂದು ಪ್ರಕರಣ ದಾಖಲಿಸಿದ್ದಾರೆ. 2022ರ ಮೇ ತಿಂಗಳಲ್ಲಿ ಮಡಿಕೇರಿ ಚೆಸ್ಕಾಂ ಕಚೇರಿಗೆ ಕಂಪ್ಯೂಟರ್ ಆಪರೇಟರ್ ಆಗಿ ಸೌಮ್ಯಾ ಕೆಲಸಕ್ಕೆ ಸೇರಿದ್ದರು. ಸೌಮ್ಯಾಗೆ ಕೆಲಸ ಮಾಡುತ್ತಿದ್ದ ವೇಳೆ ಮೇಲಧಿಕಾರಿ ವಿನಯ್ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು ಫೋನ್ ಮಾಡು, ವಾಟ್ಸಪ್ ಚಾಟ್ ಮಾಡುವಂತೆ ಒತ್ತಾಯ ಮಾಡಿದ್ದ.
ಈ ಬಗ್ಗೆ ಮಡಿಕೇರಿ ಮಹಿಳಾ ಠಾಣೆಗೆ ಸೌಮ್ಯಾ ಪತಿ ದೂರು ನೀಡಿದ್ದರು. ಸೌಮ್ಯ ಪತಿ ನಿವೃತ್ತ ಸೈನಿಕನಾಗಿದ್ದು ಪೊಲೀಸರಿಗೆ ಕ್ರಮ ಕೈಗೊಳ್ಳಲು ಒತ್ತಡ ಹೇರಿದ್ದರು. ಇದರಿಂದ ಎದ್ದಿರುವ ಗೊಂದಲದಿಂದ ಮನನೊಂದು ಸೌಮ್ಯಾ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೌಮ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಚೆಸ್ಕಾಂ ಎಇಇ ವಿನಯ್ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Madikeri Chescom AEE alleged of harassment, woman commits suicide.
20-01-26 02:15 pm
Bangalore Correspondent
ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್ ತಲ...
20-01-26 12:20 pm
ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸುಗಮ ಬಸ್...
20-01-26 12:18 pm
ಇವಿಎಂಗೆ ಗುಡ್ ಬೈ, ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ;...
20-01-26 12:03 pm
ನನ್ನ ವಿರುದ್ಧ ಯಾರೋ ಅಪರಿಚಿತರು ಷಡ್ಯಂತ್ರ ಮಾಡಿದ್ದಾ...
19-01-26 08:42 pm
19-01-26 11:03 pm
HK News Desk
A.R. Rahmans Communal Bias: ‘ಕಮ್ಯುನಲ್ ಕಾರಣಕ್ಕ...
18-01-26 08:20 pm
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
President Donald Trump: ಅಮೆರಿಕದ ಸುಂಕ ಬರೆಗೆ ಭಾ...
18-01-26 11:47 am
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
19-01-26 10:55 pm
Mangalore Correspondent
Kukke Subramanya, Drowning: ಕುಕ್ಕೆ ಸುಬ್ರಹ್ಮಣ್...
18-01-26 09:58 pm
ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿ...
17-01-26 05:12 pm
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
19-01-26 10:20 pm
HK News Desk
ಹುಣಸೂರು ಸ್ಕೈ ಗೋಲ್ಡ್ ಜುವೆಲ್ಲರಿ ದರೋಡೆ ; ಬಿಹಾರ ಮ...
19-01-26 04:16 pm
ದೆಹಲಿ ಮೆಟ್ರೋ ರೈಲಿನಲ್ಲಿ ಅಮೆರಿಕ ಮೂಲದ ಮಹಿಳೆಗೆ ಲೈ...
19-01-26 03:38 pm
Mangalore Crime, Konaje Police: ಕಾಂಗ್ರೆಸ್ ಕಾರ...
18-01-26 12:58 pm
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm