ಬ್ರೇಕಿಂಗ್ ನ್ಯೂಸ್
14-02-23 02:44 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.14 : ಪ್ರೇಮಿಗಳ ದಿನಕ್ಕೆ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟರ್ ವಿಶೇಷವಾಗಿ ಸ್ಪಂದಿಸಿದೆ. ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಚಿವ ಅಶ್ವತ್ಥ್ ನಾರಾಯಣ, ಸಚಿವ ಸ್ಥಾನ ಕಳಕೊಂಡ ಈಶ್ವರಪ್ಪ, ಸಚಿವ ಸ್ಥಾನಕ್ಕಾಗಿ ಆಸೆಗಣ್ಣಿನಿಂದ ನೋಡುತ್ತಿರುವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರ ಕುರಿತಂತೆ ಟ್ವೀಟರ್ ನಲ್ಲಿ ವ್ಯಂಗ್ಯ ಚಿತ್ರ ಮತ್ತು ಸಾಂದರ್ಭಿಕ ಪ್ರೇಮದ ಬರಹಗಳ ಮೂಲಕ ವಿಡಂಬನೆ ಮಾಡಿದೆ.
ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಒಬ್ಬೊಬ್ಬರ ವ್ಯಂಗ್ಯಚಿತ್ರಕ್ಕೂ ಒಂದೊಂದು ಮಾರ್ಮಿಕ ಬರಹಗಳನ್ನು ಮುಂದಿಟ್ಟಿದೆ. ಮುಖ್ಯಮಂತ್ರಿ ಬೊಮ್ಮಾಯಿ ಕುರಿತ ಫೋಟೊದಲ್ಲಿ, ಬಿಜೆಪಿಗರು ಶುದ್ಧ 40% ಪ್ರೇಮಿಗಳು, 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು. ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ…..!! ಎಂದು ಕಟಕಿಯಾಡಿದೆ.
ಸಚಿವ ಅಶ್ವತ್ಥ ನಾರಾಯಣ ಕುರಿತ ಟೀಕೆಯಲ್ಲಿ, ಈ ಸ್ಪೆಷಲ್ ಡಾಕ್ಟರ್ಗೆ ಹೃದಯ ಬಡಿತವೂ ತಿಳಿಯುತ್ತದೆ. ಲೂಟಿ ಹೊಡೆತವೂ ತಿಳಿದಿದೆ! ಈ ಡಾಕ್ಟರ್ಗೂ ಲವ್ವಾಗಿದೆ - PSI ಹುದ್ದೆಗಳ ಮೇಲೆ ಎಂದು ವ್ಯಂಗ್ಯವಾಡಿದೆ. ಪ್ರೀತಿಯ ಪಯಣದ ಹಾದಿಯಲ್ಲಿ ಕೇವಲ ಕಲ್ಲು ಮುಳ್ಳುಗಳಷ್ಟೇ ಇರುವುದಿಲ್ಲ.. ರಸ್ತೆ ಗುಂಡಿಗಳು, ಕಿತ್ತು ಹೋದ ಡಾಂಬರು ಕೂಡ ಇರುತ್ತವೆ! ಏಕೆಂದರೆ ಅದು - 40 ಪರ್ಸೆಂಟ್ ಲವ್ ಎಂಬುದು ಇನ್ನೊಂದು ಕಮೆಂಟ್.
ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ! 'ಸಚಿವ ಹುದ್ದೆ' ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ! ಎಂದು ರೇಣುಕಾಚಾರ್ಯ ಫೋಟೊ ಬಳಸಿ ಟೀಕಿಸಿದೆ.
ಪ್ರೇಮವಿರುವ ಕಡೆ ದ್ವೇಷಕ್ಕೆ ಜಾಗವಿಲ್ಲ. ಆದರೆ ಪ್ರೇಮವನ್ನೇ ದ್ವೇಷಿಸಿದರೆ.. ದ್ವೇಷವನ್ನೇ ಪ್ರೀತಿಸಿ, ದ್ವೇಷವನ್ನೇ ಧ್ಯಾನಿಸಿ ದ್ವೇಷದೊಂದಿಗೆ ರೊಮ್ಯಾನ್ಸ್ ಮಾಡುವ ವಿಶಿಷ್ಟ ಪ್ರೇಮಿ ಇವರು! ಎಂದು ನಳಿನ್ ಕುಮಾರ್ ಬಗ್ಗೆ ವ್ಯಂಗ್ಯ ಮಾತುಗಳಲ್ಲಿ ಚುಚ್ಚಿದೆ.
'ಪ್ರೀತಿ ಮಧುರ, ತ್ಯಾಗ ಅಮರ' ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ. ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ ಎಂದು ಈಶ್ವರಪ್ಪ ಅವರ ಸ್ಥಿತಿಯನ್ನು ವಿಡಂಬಿಸಿದೆ.
ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ! ಮಂಡ್ಯದಲ್ಲಿ ತಿರಸ್ಕಾರದ ಪ್ರೇಮವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು! ಎಂದು ಸಚಿವ ಅಶೋಕ್, ಮಂಡ್ಯದಲ್ಲಿ ಉಸ್ತುವಾರಿಯಾಗಿ ಹೊರ ದಬ್ಬಲ್ಪಟ್ಟ ಸ್ಥಿತಿಯನ್ನು ವ್ಯಾಖ್ಯಾನಿಸಿದೆ.
ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು, ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು. ಸಿಎಂ ಮನೆಗೆ ಕಲ್ಲು ಹೊಡೆಯುವುದು. ರೈತರಿಗೆ ಅವಮಾನಿಸುವುದು. ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್ಲಿಂಗ್ ಅಗತ್ಯವಿದೆ! ಎಂದು ತೇಜಸ್ವಿ ಸೂರ್ಯ ಬಗ್ಗೆ ಅಣಕ ಮಾಡಲಾಗಿದೆ.
ಕನಸಲ್ಲೂ ನೀನೇ, ಮನಸಲ್ಲೂ ನೀನೇ, ಉಸಿರಲ್ಲೂ ನೀನೇ, ಹೆಸರಲ್ಲೂ ನೀನೇ..
— Karnataka Congress (@INCKarnataka) February 14, 2023
ಹೃದಯದ "ಆಕ್ಸಿಜನ್"!
ಕಮಿಷನ್ ಕೊಡಿಸುವ,
ಖಜಾನೆ ತುಂಬುವ "ಆಕ್ಸಿಜನ್" ಎಂದರೆ ಇವರಿಗೆ ಅದಮ್ಯ ಪ್ರೇಮ!!#40PercentLove pic.twitter.com/ELIlNGldBL
"ಸರಸ ಸಲ್ಲಾಪದ ಸಿಡಿಗಳು"
— Karnataka Congress (@INCKarnataka) February 14, 2023
ಬಿಜೆಪಿಗರ 'ಸಿಡಿ ಸಂಭ್ರಮ'ದ ಎಪಿಸೋಡ್ಗಳು ನೂರಾರಿವೆಯಂತೆ.
ಯತ್ನಾಳರು ಹೇಳುವ ಸಿಡಿ ಸಿಡಿಯುವುದು ಯಾವಾಗ?#40PercentLove pic.twitter.com/uWc3N8fxpz
ಪ್ರೇಮವಿರುವ ಕಡೆ ದ್ವೇಷಕ್ಕೆ ಜಾಗವಿಲ್ಲ..
— Karnataka Congress (@INCKarnataka) February 14, 2023
ಆದರೆ ದ್ವೇಷವನ್ನೇ ಪ್ರೇಮಿಸಿದರೆ....!?
ದ್ವೇಷವನ್ನೇ ಪ್ರೀತಿಸಿ, ದ್ವೇಷವನ್ನೇ ಧ್ಯಾನಿಸಿ, ದ್ವೇಷದೊಂದಿಗೆ ರೊಮ್ಯಾನ್ಸ್ ಮಾಡುವ ವಿಶಿಷ್ಠ ಪ್ರೇಮಿ ಇವರು!!#40PercentLove pic.twitter.com/malmJWsea5
ಪ್ರೇಮದಲ್ಲಿ ಮುಳುಗಿದವರು ಸದಾ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ.
— Karnataka Congress (@INCKarnataka) February 14, 2023
ಮತ್ತು ಆ ಭ್ರಮೆಗಳನ್ನೇ ವಾಸ್ತವ ಎಂದು ತಿಳಿದುಕೊಂಡಿರುತ್ತಾರೆ.
ಇದು ಪ್ರೇಮದ ಮೊದಲ ಹಂತ!#40PercentLove pic.twitter.com/AovyFUSwwa
ಈ ಸ್ಪೆಷಲ್ ಡಾಕ್ಟರ್ಗೆ ಹೃದಯ ಬಡಿತವೂ ತಿಳಿಯುತ್ತದೆ.
— Karnataka Congress (@INCKarnataka) February 14, 2023
ಲೂಟಿ ಹೊಡೆತವೂ ತಿಳಿದಿದೆ!
ಈ ಡಾಕ್ಟರ್ಗೂ ಲವ್ವಾಗಿದೆ - PSI ಹುದ್ದೆಗಳ ಮೇಲೆ!#40PercentLove pic.twitter.com/nEvQTqk7AT
ಪ್ರೀತಿಯ ಪಯಣದ ಹಾದಿಯಲ್ಲಿ ಕೇವಲ ಕಲ್ಲು ಮುಳ್ಳುಗಳಷ್ಟೇ ಇರುವುದಿಲ್ಲ..
— Karnataka Congress (@INCKarnataka) February 14, 2023
ರಸ್ತೆ ಗುಂಡಿಗಳು, ಕಿತ್ತು ಹೋದ ಡಾಂಬರು ಕೂಡ ಇರುತ್ತವೆ!
ಏಕೆಂದರೆ ಅದು - #40PercentLove !! pic.twitter.com/CgWZtBxdJh
ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ!
— Karnataka Congress (@INCKarnataka) February 14, 2023
"ಸಚಿವ ಹುದ್ದೆ" ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ!#40PercentLove pic.twitter.com/DxYk7afEmR
"ಪ್ರೀತಿ ಮಧುರ, ತ್ಯಾಗ ಅಮರ"
— Karnataka Congress (@INCKarnataka) February 14, 2023
ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ..
ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ!!#40PercentLove pic.twitter.com/JMZNsbPMuL
ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ!
— Karnataka Congress (@INCKarnataka) February 14, 2023
ಮಂಡ್ಯದಲ್ಲಿ ತಿರಸ್ಕಾರದ ಪ್ರೇಮವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು!#40PercentLove pic.twitter.com/KFnfYJOqtv
ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು,
— Karnataka Congress (@INCKarnataka) February 14, 2023
◆ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು.
◆ಸಿಎಂ ಮನೆಗೆ ಕಲ್ಲು ಹೊಡೆಯುವುದು.
◆ರೈತರಿಗೆ ಅವಮಾನಿಸುವುದು.
ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್ಲಿಂಗ್ ಅಗತ್ಯವಿದೆ!#40PercentLove pic.twitter.com/xkEzJxeIIB
ಬಿಜೆಪಿಗರದ್ದು ಗೋ ಪ್ರೀತಿಯಲ್ಲ,
— Karnataka Congress (@INCKarnataka) February 14, 2023
Go ಪ್ರೀತಿ!!
ಬಿಜೆಪಿಗರು ಗೋವಿನ ಎದುರು ಫ್ಲರ್ಟ್ ಮಾಡುತ್ತಾರೆ ಹೊರತು ಪ್ರೀತಿಯಲ್ಲ!#40PercentLove pic.twitter.com/SH4rO9n4eo
ಬಿಜೆಪಿಗರು ಶುದ್ಧ 40% ಪ್ರೇಮಿಗಳು,
— Karnataka Congress (@INCKarnataka) February 14, 2023
40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು!!
ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ.....!!#40PercentLove pic.twitter.com/5DkQwfRvv3
Valentines Day memes flood against BJP leaders on Karnataka congress twitter account.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
04-07-25 10:54 pm
Mangalore Correspondent
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
Mangalore Youth death, ullal: ಕುಡಿದ ಮತ್ತಿನಲ್ಲ...
04-07-25 11:46 am
Mangalore Police, Drugs, Sudheer Kumar Reddy:...
03-07-25 10:50 pm
04-07-25 08:56 pm
Bangalore Correspondent
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm