ಬ್ರೇಕಿಂಗ್ ನ್ಯೂಸ್
14-01-23 07:07 pm HK News Desk ಕರ್ನಾಟಕ
ಮಂಡ್ಯ, ಜ.14: ಸ್ಯಾಂಟ್ರೋ ರವಿ ಬಂಧನದ ಬೆನ್ನಲ್ಲೇ ನಿಮಿಷಾಂಬಾ ದೇವಿ ಹರಕೆ ತೀರಿಸಿದ ಎಡಿಜಿಪಿ ಅಲೋಕ್ ಕುಮಾರ್
ಕಳೆದ ೧೨ ದಿನಗಳಿಂದ ಭಾರಿ ತಲೆನೋವಾಗಿದ್ದ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಗುಜರಾತ್ನಲ್ಲಿ ಬಂಧಿಸಿದ್ದರಿಂದ ತುಂಬಾ ನಿರಾಳರಾದವರು ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿರುವ ಅಲೋಕ್ ಕುಮಾರ್.
ಸ್ಯಾಂಟ್ರೋ ರವಿಯ ವಿಚಾರದಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಪ್ರಶ್ನೆಗಳನ್ನು ಎದುರಿಸಿದ ಅವರು ಬಂಧನವಾಗದೆ ಯಾವ ಉತ್ತರವನ್ನೂ ನೀಡುವ ಹಾಗಿರಲಿಲ್ಲ. ಯಾಕೆಂದರೆ, ಪೊಲೀಸರೇ ಸ್ಯಾಂಟ್ರೋ ರವಿಯನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ, ಅವರೇ ರಕ್ಷಿಸುತ್ತಿದ್ದಾರೆ ಎಂಬ ಆರೋಪ ಎದುರಾಗಿತ್ತು. ಈ ನಡುವೆ, ಇದೀಗ ಎಡಿಜಿಪಿ ನಿರಾಳರಾಗಿದ್ದಾರೆ. ಹಾಗಾಗಿ ಅವರು ಶನಿವಾರ ಗಂಜಾಂನ ನಿಮಿಷಾಂಬ ದೇವಾಲಯಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.
ನಿಜವೆಂದರೆ, ಸ್ಯಾಂಟ್ರೋ ರವಿ ಬಂಧನವಾಗದೆ ಭಾರಿ ಅಪಮಾನ ಸಂಕಟ ಎದುರಿಸಿದ್ದ ಎಡಿಜಿಪಿ ಅವರು ನಾಲ್ಕು ದಿನಗಳ ಹಿಂದೆ ಇದೇ ದೇವಸ್ಥಾನಕ್ಕೆ ಬಂದು ಸ್ಯಾಂಟ್ರೋ ರವಿ ಬಂಧನವಾದರೆ ವಿಶೇಷ ಪೂಜೆ ಸಲ್ಲಿಸುವುದಾಗಿ ಹರಕೆ ಹೇಳಿಕೊಂಡಿದ್ದರು. ಹೀಗಾಗಿ ರವಿ ಬಂಧನ ಖಚಿತಪಡಿಸಿದ ೨೬ ಗಂಟೆಗಳಲ್ಲೇ ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿದರು.
ದೇವಿಯ ಮೇಲೆ ನನಗೆ ಅಪಾರವಾದ ನಂಬಿಕೆ. ೨೦೧೧ರಲ್ಲಿ ಮೈಸೂರಿನಲ್ಲಿ ಒಂದು ಡಬಲ್ ಮರ್ಡರ್ ಆಗಿತ್ತು. ಆಗಲೂ ಇಲ್ಲಿ ಬಂದು ದೇವರಿಗೆ ಹರಕೆ ಹೊತ್ತಿದ್ದೆ. ಹರಕೆ ಹೊತ್ತು ಮೈಸೂರಿಗೆ ಮರಳುವಷ್ಟರಲ್ಲಿ ಅಂದರೆ ಸುಮಾರು ೫ ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಬಾರಿ ಕಳೆದ ೧೦ನೇ ತಾರೀಕಿನಂದು ಇಲ್ಲಿಗೆ ಬಂದು ಸ್ಯಾಂಟ್ರೋ ರವಿ ಬಂಧನವಾಲಿ ಎಂದು ಹರಕೆ ಹೊತ್ತಿದ್ದೆ. ನಾನು ಹರಕೆ ಹೊತ್ತ ಒಂದೆರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ದೇವಿಯ ಮೇಲೆ ನಾನಿಟ್ಟ ನಂಬಿಕೆ ನಿಜವಾಗಿದೆ. ಹಾಗಾಗಿ ತಕ್ಷಣವೇ ಬಂದು ಪೂಜೆ ಸಲ್ಲಿಸಿದ್ದೇನೆ ಎಂದು ದೇವಸ್ಥಾನದಲ್ಲಿ ಮಾತನಾಡಿದ ಅಲೋಕ್ ಕುಮಾರ್ ಹೇಳಿದರು.
ಸ್ಯಾಂಟ್ರೋ ರವಿಯಿಂದಾಗಿ ಸರ್ಕಾರದ ಮೇಲೆ, ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬಂದಿತ್ತು. ಹೀಗಾಗಿ ಆದಷ್ಟು ಬೇಗನೆ ಆತನ ಬಂಧನ ಆಗಲಿ ಎಂದು ಹಾರೈಸಿದ್ದೆ. ಅದು ನಿಜವಾಗಿದೆ. ಇನ್ನು ಮುಂದೆ ಆತನ ವಿಚಾರಣೆಯನ್ನು ಸಮಗ್ರವಾಗಿ ನಡೆಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
Adgp Alok Kumar visits Mandya temple for the successful arrest of Santro Ravi.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 02:22 pm
Bangalore Correspondent
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm
Sirsi Job Fraud: ನೌಕರಿ ಕೊಡಿಸುವುದಾಗಿ 200 ರೂ. ಪ...
01-07-25 12:07 pm
Gold Loan Scam at Paduva Society, ShaktiNagar...
30-06-25 06:12 pm
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm