ಬ್ರೇಕಿಂಗ್ ನ್ಯೂಸ್
27-12-22 09:57 pm HK News Desk ಕರ್ನಾಟಕ
ಹಾಸನ, ಡಿ.27: ಕೊರಿಯರ್ ಶಾಪ್ ನಲ್ಲಿ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನ ಪ್ರೀತಿ ನಿರಾಕರಿಸಿದ ಪಾಗಲ್ ಪ್ರೇಮಿಯೊಬ್ಬ ಮಿಕ್ಸಿಯಲ್ಲಿ ಸ್ಫೋಟಕ ಇಟ್ಟು ಪಾರ್ಸೆಲ್ ಕಳಿಸಿಕೊಟ್ಟು ಯುವತಿಯನ್ನು ಕೊಲ್ಲಲು ಪ್ಲಾನ್ ಹಾಕಿದ್ದ ಕೃತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನಗರದ ಕೆಆರ್ ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಶಾಪ್ ನಲ್ಲಿ ದಿಢೀರ್ ಆಗಿ ಮಿಕ್ಸರ್ ಗ್ರೈಂಡರ್ ಬ್ಲಾಸ್ಟ್ ಆಗಿದ್ದು ಮಂಗಳೂರಿನ ಕುಕ್ಕರ್ ಬಾಂಬನ್ನು ನೆನಪಿಸಿತ್ತು. ಸೋಮವಾರ ಸಂಜೆ ಮಿಕ್ಸಿಯನ್ನು ವಿದ್ಯುತ್ ಸಂಪರ್ಕ ಕೊಟ್ಟು ರನ್ ಮಾಡಿದ ಕೂಡಲೇ ಬ್ಲಾಸ್ಟ್ ಆಗಿತ್ತು. ಇದರಿಂದ ಕೊರಿಯರ್ ಶಾಪ್ ಮಾಲಕ ಶಶಿ ಎಂಬವರು ಗಂಭೀರ ಗಾಯಗೊಂಡಿದ್ದರು. ಘಟನೆ ಭಾರೀ ಕುತೂಹಲ ಸೃಷ್ಟಿಸಿದ್ದಲ್ಲದೆ, ಉಗ್ರರ ಕೈವಾಡದ ಬಗ್ಗೆಯೂ ಶಂಕೆ ಕೇಳಿಬಂದಿತ್ತು. ಮೈಸೂರಿನಿಂದ ಎಫ್ಎಸ್ಎಲ್ ತಂಡ, ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳವೂ ಬಂದು ತನಿಖೆ ನಡೆಸಿತ್ತು. ಉಗ್ರರು ಬಳಸುವ ಬಾಂಬ್ ಮಾದರಿ ಇರಲಿಲ್ಲ. ಬದಲಿಗೆ, ಸಣ್ಣ ಮಟ್ಟದ ಬ್ಲಾಸ್ಟ್ ಆಗುವ ರೀತಿ ಏನೋ ಜೋಡಣೆ ಆಗಿದ್ದನ್ನು ತಜ್ಞರು ಪತ್ತೆ ಮಾಡಿದ್ದರು.
ಇದೇ ಸಂದರ್ಭದಲ್ಲಿ ಕೊರಿಯರ್ ಕಳುಹಿಸಿದ್ದ ವಿಳಾಸದ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದರು. ಪೊಲೀಸ್ ತನಿಖೆಯಲ್ಲಿ ವಿಚಿತ್ರ ರೀತಿಯ ಮಾಹಿತಿಗಳು ಹೊರಬಂದಿದ್ದು, ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಲ್ಲುವುದಕ್ಕಾಗಿ ಪ್ಲಾನ್ ಮಾಡಿದ್ದ ಕೃತ್ಯ ಬೆಳಕಿಗೆ ಬಂದಿದೆ. ಅದೇ ಯುವತಿಗೆ ಈ ಹಿಂದೆಯೂ ತನ್ನ ವಿಳಾಸ ತಿಳಿಸದೆ ಎರಡು ಬಾರಿ ಪಾರ್ಸೆಲ್ ಕಳಿಸಿದ್ದ. ಆದರೆ ವಿಳಾಸ ಬರೆಯದೆ ಕಳುಹಿಸಿಕೊಟ್ಟಿದ್ದ ಪಾರ್ಸೆಲನ್ನು ಯುವತಿ ಕಸದ ಬುಟ್ಟಿಗೆ ಎಸೆದಿದ್ದಳು.
ಮೂರನೇ ಬಾರಿ ಆಕೆಯನ್ನೇ ಮುಗಿಸೋಕೆ ಪ್ಲಾನ್ ಮಾಡಿ ಮಿಕ್ಸಿಯೊಳಗೆ ಸ್ಫೋಟಕ ಇಟ್ಟು ಕೊರಿಯರ್ ಮಾಡಿದ್ದ. ಆದರೆ ಯಾರು ಕಳಿಸಿದ್ದಾರೆ ಎನ್ನುವ ವಿಳಾಸ ಇಲ್ಲದ ಕೊರಿಯರ್ ತನಗೆ ಬೇಡ ಎಂದು ಯುವತಿ ಕೊರಿಯರ್ ಶಾಪ್ ಗೆ ಬಾಕ್ಸನ್ನು ಹಿಂದಿರುಗಿಸಿದ್ದಳು. ಈ ವೇಳೆ ಬಾಕ್ಸ್ ವಾಪಸ್ ಕಳಿಸಲು 350 ರೂ. ಶುಲ್ಕ ನೀಡಬೇಕೆಂದು ಕೊರಿಯರ್ ಮಾಲೀಕ ಕೇಳಿದ್ದು, ಅದಕ್ಕೆ ಮಹಿಳೆ ನಿರಾಕರಿಸಿದ್ದಳು. ಅದೇ ಸಂದರ್ಭದಲ್ಲಿ ಮಿಕ್ಸಿ ಸರಿ ಇದೆಯಾ ಎಂದು ಬಾಕ್ಸ್ ಓಪನ್ ಮಾಡಿ ಪರಿಶೀಲನೆ ನಡೆಸಲು ಮುಂದಾಗಿದ್ದಾಗಲೇ ಮಿಕ್ಸಿ ಬ್ಲಾಸ್ಟ್ ಆಗಿತ್ತು.
ಮಿಕ್ಸಿಯೊಳಗೆ ಸಣ್ಣ ಪ್ರಮಾಣದ ಸ್ಪೋಟಕ ಇಟ್ಟು ಅದನ್ನ ಆನ್ ಮಾಡಿದರೆ ಬ್ಲಾಸ್ಟ್ ಆಗುವಂತೆ ಪ್ಲಾನ್ ಮಾಡಿದ್ದ ಪಾಗಲ್ ಪ್ರೇಮಿಯ ಕತರ್ನಾಕ್ ಯೋಜನೆ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಕೊರಿಯರ್ ಬಂದರೂ ಬಾಕ್ಸ್ ಓಪನ್ ಮಾಡದೇ ಹಿಂದಿರುಗಿಸಿದ್ದ ಮಹಿಳೆ ಸೇಫ್ ಆಗಿದ್ದಾಳೆ. ಮಹಿಳೆ ವಾಪಸ್ ಮಾಡಿದ್ದ ಬಾಕ್ಸನ್ನು ಓಪನ್ ಮಾಡಲು ಹೋದ ಕೊರಿಯರ್ ಮಾಲೀಕ ಎಡವಟ್ಟು ಮಾಡಿಕೊಂಡು ಗಾಯಗೊಂಡಿದ್ದಾರೆ. ಕೊರಿಯರ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಗ್ರ ಕೃತ್ಯ ಅಲ್ಲ ; ಎಸ್ಪಿ ಹರಿರಾಮ್ ಶಂಕರ್
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಈ ಘಟನೆಗೂ ಯಾವುದೇ ಉಗ್ರಗಾಮಿ ಸಂಘಟನೆಗಳ ಸಂಬಂಧವಿಲ್ಲ. ವೈಯುಕ್ತಿಕವಾಗಿ ಟಾರ್ಗೆಟ್ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸಣ್ಣ ಮಟ್ಟದ ಸ್ಪೋಟಕ ವಸ್ತು ಬಳಸಿದ್ದಾರೆ. ಇದು ವೈಯುಕ್ತಿಕ ಕಾರಣದಿಂದ ನಡೆದಿರುವ ಘಟನೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಪ್ರಕರಣ ಸಂಬಂಧ ಕೊರಿಯರ್ ಪಡೆದು ವಾಪಸ್ ನೀಡಿದವರು ಹಾಗೂ ಕೊರಿಯರ್ ಮಾಡಿದವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಕೊರಿಯರ್ ಕಚೇರಿಯಲ್ಲಿ ಪಾರ್ಸೆಲ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ; ವ್ಯಕ್ತಿ ಗಂಭೀರ, ಕೈ ಛಿದ್ರ! ಆತಂಕ ಮೂಡಿಸಿದ ಸ್ಫೋಟ
After an explosion from a cooker in Mangaluru, a mixer grinder that had arrived by courier in Hassan mysteriously exploded at the DTDC office, K R Puram here, on December 26. A new mixer grinder that had arrived by courier exploded while being tested. Courier owner Shashi sustained serious injuries and was admitted to a private hospital in Hassan. People were shocked by the explosion.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm