ಬ್ರೇಕಿಂಗ್ ನ್ಯೂಸ್
10-12-22 07:33 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.10: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶದ ಬಳಿಕ ಬಿಜೆಪಿ ಹೈಕಮಾಂಡ್ ನಾಯಕರು ಕರ್ನಾಟಕದತ್ತ ಮುಖ ಮಾಡಿದ್ದಾರೆ. ಇನ್ನೇನು ಚುನಾವಣೆಗೆ ಮೂರ್ನಾಲ್ಕು ತಿಂಗಳು ಇರುವುದರಿಂದ ರಾಜ್ಯದಲ್ಲಿ ಗುಜರಾತ್ ಪ್ರಯೋಗ ಅನುಸರಿಸುವುದು ಖಾತ್ರಿಯಾಗಿದೆ. ಯಾಕಂದ್ರೆ, ಅಧಿಕಾರದಲ್ಲಿದ್ದ ಹಿಮಾಚಲವನ್ನು ಬಿಜೆಪಿ ಕಳಕೊಂಡಿರುವುದು ಮತ್ತು ಅದೇ ವೇಳೆಗೆ ಗುಜರಾತಿನಲ್ಲಿ 100ಕ್ಕೂ ಹೆಚ್ಚು ಮಂದಿ ಹೊಸಬರಿಗೆ ಮಣೆ ಹಾಕಿ ಗೆದ್ದಿರುವುದು ಕರ್ನಾಟಕದಲ್ಲಿ ಅಧಿಕಾರ ಉಳಿಸಲು ಹಿರಿಯರಿಗೆ ಕೊಕ್ ಕೊಟ್ಟು ಕಸರತ್ತು ನಡೆಸುವುದು ಪಕ್ಕಾ ಆಗಿದೆ.
ಹಾಗೊಂದ್ವೇಳೆ, ಗುಜರಾತ್ ಪ್ರಯೋಗ ಅನುಸರಿಸಿದರೆ ಹಾಲಿ ಬಿಜೆಪಿಯಲ್ಲಿರುವ ಬಹುತೇಕ ಹಿರಿಯ ಶಾಸಕರು ಸ್ಥಾನ ಕಳಕೊಳ್ಳುವುದು ಖಚಿತ. ಮಾಹಿತಿ ಪ್ರಕಾರ, 35ರಿಂದ 40 ಮಂದಿ ಹಿರಿಯರು, ಹಾಲಿ ಶಾಸಕರು ಬಿಜೆಪಿ ಟಿಕೆಟ್ ವಂಚಿತರಾಗಲಿದ್ದಾರೆ. ಗುಜರಾತಿನಲ್ಲಿ 182 ಸದಸ್ಯರ ವಿಧಾನಸಭೆಯಲ್ಲಿ ಗೆದ್ದಿರುವ 156 ಮಂದಿ ಬಿಜೆಪಿಗರ ಪೈಕಿ 105 ಹೊಸಬರು. ಹೊಸ ಮುಖಗಳಿಗೆ ಮತದಾರ ಮಣೆ ಹಾಕಿರುವುದನ್ನು ನೋಡಿದರೆ, ಕರ್ನಾಟಕದಲ್ಲಿ ಹಳೇ ಮುಖಗಳಿಗೆ ಗೇಟ್ ಪಾಸ್ ಗ್ಯಾರಂಟಿ ಎನ್ನಲಾಗುತ್ತಿದೆ. 70 ವರ್ಷ ಮೀರಿದವರು ಮತ್ತು ನಾಲ್ಕಕ್ಕಿಂತ ಹೆಚ್ಚು ಬಾರಿ ಚುನಾವಣೆ ಸ್ಪರ್ಧಿಸಿದವರಿಗೆ ಕೊಕ್ ನೀಡಲು ಕೇಂದ್ರ ನಾಯಕರು ತೀರ್ಮಾನಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈಗಾಗಲೇ ಮುಂದಿನ ಬಾರಿ ಚುನಾವಣೆ ನಿಲ್ಲುವುದಿಲ್ಲ, ಶಿಕಾರಿಪುರ ಕ್ಷೇತ್ರವನ್ನು ಮಗ ವಿಜಯೇಂದ್ರನಿಗೆ ನೀಡುತ್ತೇನೆ ಎಂದು ಹೇಳಿದ್ದರು. ವಯಸ್ಸು ಮತ್ತು ಐದಾರು ಬಾರಿ ಗೆದ್ದಿರುವುದನ್ನು ಮಾನದಂಡ ಇಟ್ಟುಕೊಂಡರೆ, ಕೆಎಸ್ ಈಶ್ವರಪ್ಪ, ಆರಗ ಜ್ಞಾನೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ ಶೆಟ್ಟರ್, ಸುರೇಶ್ ಕುಮಾರ್, ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್, ಮಾಡಾಳು ವಿರೂಪಾಕ್ಷಪ್ಪ, ಚಿತ್ರದುರ್ಗ ತಿಪ್ಪಾರೆಡ್ಡಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ ಹೀಗೆ ಕನಿಷ್ಠ 25 ಮಂದಿ ಸ್ಥಾನ ಕಳಕೊಳ್ಳುವುದು ಖಚಿತ. ವಯಸ್ಸಿನ ಕಾರಣಕ್ಕೆ ಸ್ಥಾನ ಕಳಕೊಳ್ಳುವ ಮಂದಿ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಲಾಬಿ ಆರಂಭಿಸಿದ್ದಾರೆ. ಈಶ್ವರಪ್ಪ ತಮಗೆ ಸ್ಥಾನ ಸಿಗದಿದ್ದರೆ, ಮಗ ಕಾಂತೇಶ್ ಗೆ ಟಿಕೆಟ್ ಕೊಡಿಸುವ ಸಾಧ್ಯತೆಯಿದೆ. ಗೋವಿಂದ ಕಾರಜೋಳ ಕೂಡ ಮಗನಿಗೆ ಸ್ಥಾನ ಬಿಟ್ಟು ಕೊಡಲು ಮುಂದಾಗಿದ್ದಾರೆ.
ಇದಲ್ಲದೆ, ಪಕ್ಷದಲ್ಲಿ ಶಾಸಕರಾಗಿದ್ದೂ ಸಮೀಕ್ಷೆಯಲ್ಲಿ ಮತ್ತೆ ಜಯಿಸುವುದು ಕಷ್ಟ ಎನ್ನುವ ವರದಿ ಬಂದಿರುವ ಶಾಸಕರೂ ಸ್ಥಾನ ಕಳಕೊಳ್ಳಲಿದ್ದಾರೆ. ಹಾಗೆ ನೋಡಿದರೆ, ಕರಾವಳಿಯ ಉಡುಪಿ, ದಕ್ಷಿಣ ಕನ್ನಡದಲ್ಲಿಯೂ ಹಲವರು ಟಿಕೆಟ್ ಕಳಕೊಳ್ಳುವ ಸಾಧ್ಯತೆಯಿದೆ. ಸುಳ್ಯದ ಅಂಗಾರ, ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರಿನ ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್ ಸ್ಥಾನ ಕಳಕೊಳ್ಳುವ ಪಟ್ಟಿಯಲಿದ್ದಾರೆ. ಈಗಾಗಲೇ ರಾಜ್ಯ ಬಿಜೆಪಿ ಮತ್ತು ಕೇಂದ್ರ ನಾಯಕರು ಖಾಸಗಿ ತಂಡಗಳಿಂದ ಪ್ರತ್ಯೇಕ ಸಮೀಕ್ಷೆಯನ್ನು ನಡೆಸಿದ್ದು, ಅದರ ವರದಿ ಹೈಕಮಾಂಡ್ ಕೈಸೇರಿದೆ. ಗುಜರಾತಿನಲ್ಲಿ ಕೇವಲ 182 ಸದಸ್ಯ ಸ್ಥಾನದ ವಿಧಾನಸಭೆಯಲ್ಲಿ 100ಕ್ಕೂ ಹೆಚ್ಚು ಮಂದಿ ಹೊಸ ಮುಖಗಳಿಗೆ ಮಣೆ ಹಾಕಿದವರು, ಕರ್ನಾಟಕದಲ್ಲಿ 224 ಕ್ಷೇತ್ರಗಳಲ್ಲಿ ಎಷ್ಟು ಮಂದಿಯನ್ನು ಬದಲಿಸಬಹುದು ಎನ್ನೋದ್ರ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಶುರುವಾಗಿದೆ. ಬೆಳಗಾವಿ, ಬೀದರ್, ಗುಲ್ಬರ್ಗದಲ್ಲೂ ಹಳೆ ಮುಖಗಳಿಗೆ ಕೊಕ್ ಸಿಗು ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್ ನಲ್ಲೂ ಹಳಬರಿಗೆ ಕೊಕ್ ಸಾಧ್ಯತೆ
ಇತ್ತ ಕಾಂಗ್ರೆಸ್ ನಲ್ಲಿಯೂ ಇದೇ ರೀತಿಯ ಚರ್ಚೆ ನಡೆಯುತ್ತಿದ್ದು, ಐದಾರು ಬಾರಿ ಚುನಾವಣೆ ಸ್ಪರ್ಧಿಸಿದ ಹಳೆ ಮುಖಗಳು, ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಸ್ಥಾನ ಕೊಡಿಸಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ. ಕಾಂಗ್ರೆಸ್ನಲ್ಲಿ ಹಳೆ ಮುಖಗಳಿಗೆ ಸರ್ಜರಿಯಾದಲ್ಲಿ ಶಾಮನೂರು ಶಿವಶಂಕರಪ್ಪ, ಕಾಗೋಡು ತಿಮ್ಮಪ್ಪ, ಕೆಬಿ ಕೋಳಿವಾಡ, ಆರ್.ವಿ.ದೇಶಪಾಂಡೆ, ಎಚ್.ಕೆ ಪಾಟೀಲ, ಎಸ್.ಆರ್ ಪಾಟೀಲ, ರಮಾನಾಥ ರೈ, ಕೆಎಚ್ ಮುನಿಯಪ್ಪ ಹೀಗೆ ಹಲವರು ಸ್ಥಾನ ಕಳಕೊಳ್ಳಲಿದ್ದಾರೆ. ಜನರ ಜೊತೆಗೆ ಬೆರೆಯದ, ಕಾರ್ಯಕರ್ತರ ಒಡನಾಟ ಇಟ್ಟುಕೊಳ್ಳದ, ಅಭಿವೃದ್ಧಿ ಕಾರ್ಯದಲ್ಲಿ ಹಿಂದುಳಿದ ಶಾಸಕರನ್ನು ಕೈಬಿಡಬೇಕು ಎನ್ನುವ ಆಗ್ರಹವನ್ನು ಬಹುತೇಕ ಎರಡನೇ ಹಂತದ ನಾಯಕರು ರಾಜ್ಯ ನಾಯಕರ ಮುಂದಿಟ್ಟಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಆ ರೀತಿಯ ನಿರ್ಧಾರ ತೆಗೆದುಕೊಂಡಲ್ಲಿ ಕಾಂಗ್ರೆಸಿನಲ್ಲಿಯೂ ಹಲವರು ಟಿಕೆಟ್ ವಂಚಿತರಾಗಲಿದ್ದಾರೆ.
BJP High command to refine Karnataka like Gujarat model, more than 40 MLA to be removed, new faces to be launched. In a bid to nullify anti-incumbency sentiment, the ruling party to drop 40 MLAs in state.
08-05-25 12:23 pm
HK News Desk
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
08-05-25 04:57 pm
HK News Desk
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
08-05-25 04:52 pm
Mangalore Correspondent
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm