ಇನ್ಸ್ ಪೆಕ್ಟರ್ ನಿಯೋಜನೆಗೆ 70 -80 ಲಕ್ಷ ಲಂಚ ; ಕಿಡಿ ಹೊತ್ತಿಸಿದ ಸಚಿವ ಎಂಟಿಬಿ ಹೇಳಿಕೆ, ಬಿಜೆಪಿ ಭ್ರಷ್ಟಾಚಾರಕ್ಕೆ ಇನ್ಸ್ ಪೆಕ್ಟರ್ ನಂದೀಶ್ ಬಲಿ ಎಂದ ಕಾಂಗ್ರೆಸ್ ! 

29-10-22 09:37 pm       Bangalore Correspondent   ಕರ್ನಾಟಕ

ಅಮಾನತಾಗಿದ್ದ ಕೆ.ಆರ್.ಪುರಂ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಎಚ್‌.ಎಲ್‌. ನಂದೀಶ್ ಸಾವು ರಾಜ್ಯ ಸರಕಾರದ ಕೊರಳು ಸುತ್ತಿಕೊಂಡಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎನ್ನಲಾಗುತ್ತಿದ್ದರೂ, ನಂದೀಶ್ ಮೃತಪಟ್ಟ ಸಂದರ್ಭದಲ್ಲಿ ಸಚಿವ ಎಂಟಿಬಿ ನಾಗರಾಜ್ ನೀಡಿದ್ದ ಹೇಳಿಕೆಯೇ ಪೊಲೀಸ್ ಇಲಾಖೆ ಒಳಗಿನ ಭ್ರಷ್ಟಾಚಾರವನ್ನು ಎತ್ತಿಹಿಡಿದಿದೆ.

ಬೆಂಗಳೂರು, ಅ.29 : ಅಮಾನತಾಗಿದ್ದ ಕೆ.ಆರ್.ಪುರಂ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಎಚ್‌.ಎಲ್‌. ನಂದೀಶ್ ಸಾವು ರಾಜ್ಯ ಸರಕಾರದ ಕೊರಳು ಸುತ್ತಿಕೊಂಡಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎನ್ನಲಾಗುತ್ತಿದ್ದರೂ, ನಂದೀಶ್ ಮೃತಪಟ್ಟ ಸಂದರ್ಭದಲ್ಲಿ ಸಚಿವ ಎಂಟಿಬಿ ನಾಗರಾಜ್ ನೀಡಿದ್ದ ಹೇಳಿಕೆಯೇ ಪೊಲೀಸ್ ಇಲಾಖೆ ಒಳಗಿನ ಭ್ರಷ್ಟಾಚಾರವನ್ನು ಎತ್ತಿಹಿಡಿದಿದೆ. 70-80 ಲಕ್ಷ ಲಂಚ ಕೊಟ್ಟು ಇನ್ಸ್ ಪೆಕ್ಟರ್ ಸ್ಥಳ ನಿಯೋಜನೆ ಮಾಡಲಾಗಿತ್ತು ಎಂದು ಸಚಿವ ಎಂಟಿಬಿ ನಾಗರಾಜ್ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಕಾಂಗ್ರೆಸ್ ನಾಯಕರು ಇದನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. 

ಇನ್ಸ್ ಪೆಕ್ಟರ್ ಸ್ಥಳ ನಿಯೋಜನೆಗೆ 70 ಲಕ್ಷ ಲಂಚ ನೀಡಲಾಗಿದೆ ಎಂಬ ಸಚಿವ ಎಂಟಿಬಿ ನಾಗರಾಜ್ ಹೇಳಿಕೆಯೇ ಕೈ ಪಡೆಗೆ ಹೊಸ ಅಸ್ತ್ರವಾಗಿದ್ದು, ಹೋರಾಟಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಗೃಹ ಇಲಾಖೆಯ ಭ್ರಷ್ಟಾಚಾರ ಮತ್ತು ಹಿರಿಯ ಅಧಿಕಾರಿಗಳ ಕಿರುಕುಳ ಕುರಿತು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ, ಹಗರಣದ ಸಾಲಿಗೆ ಮತ್ತೊಂದು ಸೇರ್ಪಡೆ ಎನ್ನುವ ರೀತಿ ಕಾಂಗ್ರೆಸ್ ನಾಯಕರು ಬಿಂಬಿಸತೊಡಗಿದ್ದಾರೆ. 

Seven-time MLA Ramalinga Reddy to quit Karnataka Assembly membership - The  Hindu

ಸಚಿವ ಎಂಟಿಬಿ ಹೇಳಿಕೆ ಹಿನ್ನೆಲೆ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿದ್ದು, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಶರತ್ ಬಚ್ಚೆಗೌಡ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಸರ್ಕಾರದ ಪ್ರತಿ ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಅನ್ನೋದಕ್ಕೆ ಎಂಟಿಬಿ ಹೇಳಿಕೆಯೇ ಸಾಕ್ಷಿ. ಸಚಿವರು ತಮ್ಮ ಮನಸ್ಸಲ್ಲಿ ಇರೋದನ್ನು ಹೇಳಿದ್ದಾರೆ. ಸಿಎಂ ಯಾವಾಗಲೂ ತಾಕತ್ತು, ಧಮ್ ಅಂತ ಹೇಳ್ತಾರೆ. ಸಿಎಂ ಅವರಿಗೆ ಧಮ್, ತಾಕತ್ತು ಅಂತೇನಾದರೂ ಇದ್ದರೆ ನ್ಯಾಯಾಂಗ ತನಿಖೆ ಮಾಡಲಿ. ಇಲ್ಲವೇ ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದು ರಾಮಲಿಂಗಾ ರೆಡ್ಡಿ ಒತ್ತಾಯಿಸಿದ್ದಾರೆ. 

ಅಮಾನತುಗೊಂಡಿದ್ದ ಕೆಆರ್ ಪುರಂ ಇನ್‌ಸ್ಪೆಕ್ಟರ್ ಹೃದಯಾಘಾತದಿಂದ ಸಾವು | Suspended KR  Puram Police Inspector HL Nandish Dies of Heart Attack - Kannada Oneindia

I contest for them, and they betrayed me, says Gowda | Deccan Herald

ಬಿಜೆಪಿಯ ಭ್ರಷ್ಟಾಚಾರಕ್ಕೆ ಪೊಲೀಸ್ ಅಧಿಕಾರಿ ಬಲಿ ! 

ಮಾಜಿ ಸಚಿವ ಕೃಷ್ಣಾ ಭೈರೇಗೌಡ ಮಾತನಾಡಿ, ಭ್ರಷ್ಟಾಚಾರದ ಒತ್ತಡದಲ್ಲಿ ಸಿಲುಕಿ ಇನ್ಸ್ಪೆಕ್ಟರ್ ನಂದೀಶ್ ಸಾವು ಸಂಭವಿಸಿದೆ. ನಂದೀಶ್ 70 - 80 ಲಕ್ಷ ರೂ. ಲಂಚ ಕೊಟ್ಟು ಆ ಸ್ಟೇಷನ್ ಗೆ ಬಂದಿದ್ದರು ಅಂತ ಸಚಿವರೇ ಬಹಿರಂಗ ಪಡಿಸಿದ್ದಾರೆ. ಒಂದು ವರ್ಷ ಮಾತ್ರ ಇನ್ಸ್ ಪೆಕ್ಟರ್ ಹುದ್ದೆಯಲ್ಲಿ ಇರಲಿದ್ದು ಅದಕ್ಕೂ ಮೊದಲೇ ಸರ್ಕಾರಕ್ಕೆ ಭ್ರಷ್ಟಾಚಾರದ ರೂಪದಲ್ಲಿ ಕೊಟ್ಟ ಹಣವನ್ನು ವಾಪಸ್ ಪಡೆಯುವ ಸ್ಥಿತಿ ಇದೆ. ಅದೇ ಟೆನ್ಸನ್ ನಲ್ಲಿ ನಂದೀಶ್ ಸಾವು ಆಗಿದೆ. ಇದು ಬಿಜೆಪಿ ಸರ್ಕಾರದಿಂದ ಆಗಿರುವ ಹತ್ಯೆ. ಗೃಹ ಸಚಿವರು, ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ನಂದೀಶ್ ಬಲಿಯಾಗಿದೆ. ಹೀಗಾಗಿ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. 

IPS Officer CH Pratap Reddy is new Bengaluru Police Commissioner

HD Kumarswamy led coalition government falls in Karnataka; BJP to stake  claim - The Indian Wire

ಪಬ್ ಕಾರಣಕ್ಕೆ ಇನ್ಸ್ ಪೆಕ್ಟರ್ ಅಮಾನತು, ಸಾವು 

ವಾರದ ಹಿಂದೆ ಪಬ್ ಒಂದು ಲೇಟ್ ಆಗಿಯೂ ಓಪನ್ ಇದ್ದ ಕಾರಣಕ್ಕೆ ಕೆಆರ್ ಪುರಂ ಇನ್ಸ್ ಪೆಕ್ಟರ್ ನಂದೀಶ್ ಅವರನ್ನು ಎಡಿಜಿಪಿ ಪ್ರತಾಪ್ ರೆಡ್ಡಿ ಅಮಾನತು ಮಾಡಿದ್ದರು. ಅದೇ ಒತ್ತಡದಿಂದ ನಂದೀಶ್ ಅ.27ರಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ಸಾವು ಕಂಡಿದ್ದರು. ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ, ಇದು ಬಿಜೆಪಿ ಸರ್ಕಾರ ಮಾಡಿರುವ ಹತ್ಯೆ. ಇವರ ಭ್ರಷ್ಟಾಚಾರಕ್ಕೆ ನಂದೀಶ್ ಬಲಿಯಾಗಿದ್ದಾರೆ ಎಂದಿದ್ದರು. ಇದೇ ವೇಳೆ, ಸಚಿವ ಎಂಟಿಬಿ ನಾಗರಾಜ್ ಕೂಡ ನಂದೀಶ್ ಕುಟುಂಬಸ್ಥರನ್ನು ಸಂತೈಸುತ್ತಾ ಪೊಲೀಸ್ ಅಧಿಕಾರಿಗಳ ಲಂಚದ ಬಗ್ಗೆ ಪ್ರಸ್ತಾಪಿಸಿದ್ದರು. ಅಲ್ಲದೆ, ಎಡಿಜಿಪಿ ಪ್ರತಾಪ್ ರೆಡ್ಡಿ ಅವರನ್ನು ತರಾಟೆಗೆತ್ತಿಕೊಂಡು ಪಬ್ ಕಾರಣಕ್ಕೆ ಇನ್ಸ್ ಪೆಕ್ಟರ್ ಒಬ್ಬರನ್ನು ಅಮಾನತು ಮಾಡುವ ಅಗತ್ಯವಿತ್ತೇ.. ಇದು ಐಪಿಎಸ್ ಅಧಿಕಾರಿಗಳ ದರ್ಪ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದರು.

Suspended police inspector dies of cardiac arrest, BJP corruption reason says Congress.