ಮುತಾಲಿಕ್ ಚುನಾವಣಾ ಕಣಕ್ಕೆ, ಬೆಳಗಾವಿ, ಕಾರ್ಕಳ, ಪುತ್ತೂರಿನಲ್ಲಿ ಸ್ಪರ್ಧೆಗೆ ಒಲವು, ಹೊಸ ಪಕ್ಷ ಇಲ್ಲ ; ಪಕ್ಷೇತರ ಸ್ಪರ್ಧೆ 

29-10-22 07:01 pm       HK News Desk   ಕರ್ನಾಟಕ

2023 ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಸುಳಿವು ನೀಡಿದ್ದಾರೆ.‌

ಧಾರವಾಡ, ಅ.29: 2023 ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಸುಳಿವು ನೀಡಿದ್ದಾರೆ.‌

ಬೆಳಗಾವಿ, ಬಾಗಲಕೋಟೆ, ಮಂಗಳೂರು, ಉಡುಪಿ ಜಿಲ್ಲೆಯಿಂದ ಸ್ಪರ್ಧೆಗೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಬೆಳಗಾವಿ ನಗರದ ಎರಡು ಕ್ಷೇತ್ರ, ಬಾಗಲಕೋಟೆಯ ತೇರದಾಳ, ಜಮಖಂಡಿ, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ, ಪುತ್ತೂರು, ಚಿಕ್ಕಮಗಳೂರಿನ ಶೃಂಗೇರಿಯಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಒಂದು ಕ್ಷೇತ್ರದ ಬಗ್ಗೆ ನಿರ್ಣಯ ಮಾಡುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಮುತಾಲಿಕ್ ಹೇಳಿದ್ದಾರೆ.‌

Multiple factors helped BJP emerge victorious in UP' - The Sunday Guardian  Live

2014 ರಿಂದ ಬಿಜೆಪಿ ತನಗೆ ಟಿಕೇಟ್ ಕೊಡುತ್ತೆ ಎಂದು ಭಾವಿಸಿದ್ದೆ. ಬಿಜೆಪಿ ಪಕ್ಷವನ್ನು ಕಟ್ಟಿದವರು ನಾವು. ಆದರೆ ಬಿಜೆಪಿ ನನಗೆ ನಿರಂತರ ತೊಂದರೆ ಕೊಟ್ಟಿದೆ. ಹಿಂದುಗಳ ಹೆಸರಲ್ಲಿ ಗೆದ್ದು ಬಂದು ಅವರ ಮೇಲೆ ದೌರ್ಜನ್ಯಗಳನ್ನು ಎಸಗಿದೆ. ಇದಕ್ಕಾಗಿ ಚುನಾವಣೆಗೆ ನಿಲ್ಲುವ ತೀರ್ಮಾನಕ್ಕೆ ಬಂದಿದ್ದೇನೆ.‌ ನಾನು ಕಟ್ಟರ್ ಹಿಂದುತ್ವವಾದಿ.‌ ಚುನಾವಣೆಯಲ್ಲಿ ಗೆದ್ದರೆ, ನಾನು ಹಿಂದುತ್ವ ಪರ ಇರುವ ಬಿಜೆಪಿಗೆ ಬೆಂಬಲಿಸುತ್ತೇನೆ. ಆದರೆ ಬಿಜೆಪಿಗೆ ಹಿಂದುತ್ವ ಬೇಕಾಗಿಲ್ಲ.‌

Congress adds over 2 crore new members digitally, a first for the grand old  party - India Today

ಬಿಜೆಪಿಯಲ್ಲಿ ಸದ್ಯ ಕಾಂಗ್ರೆಸ್ಸಿಗರೇ ತುಂಬಿದ್ದಾರೆ. ಹಿಂದುತ್ವದ ಹಿನ್ನೆಲೆ ಹೊಂದಿದವರಿಗೆ ಬಿಜೆಪಿಯಲ್ಲಿ ಮರ್ಯಾದೆ ಇಲ್ಲ. ಹೊಸ ಪಕ್ಷ ಮಾಡುವ ಗೋಜಿಗೆ ಹೋಗಲ್ಲ.‌ ಸ್ವತಂತ್ರವಾಗಿ ಸ್ಪರ್ಧಿಸಲು ಹಿಂದು ಕಾರ್ಯಕರ್ತರು ನಿರ್ಧರಿಸಿದ್ದಾರೆ.‌ ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಡಿಸೆಂಬರ ಮೊದಲ ವಾರದಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಅನ್ನೋದನ್ನ ಪ್ರಕಟಿಸುತ್ತೇನೆ ಎಂದು ಪ್ರಮೋದ ಮುತಾಲಿಕ್ ಹೇಳಿದ್ದಾರೆ.

Pramod Muthalik all set to join politics, yet to choose constituency.