ಬ್ರೇಕಿಂಗ್ ನ್ಯೂಸ್
21-10-22 04:45 pm HK News Desk ಕರ್ನಾಟಕ
ಮೈಸೂರು, ಅ.21: ಮೈಸೂರಿನಲ್ಲಿ ಶತಮಾನೋತ್ಸವ ಆಚರಿಸಿರುವ ಐತಿಹಾಸಿಕ ಮಹತ್ವದ ಮಹಾರಾಣಿ ವಿಜ್ಞಾನ ಕಾಲೇಜಿನ ಹಳೆಯ ಕಟ್ಟಡ ನೋಡ ನೋಡುತ್ತಲೇ ಧರಾಶಾಯಿ ಆಗಿದೆ. ಭಾರಿ ಮಳೆಯ ಕಾರಣ ಇಂದು ಬೆಳಗ್ಗೆ ಹತ್ತು ಗಂಟೆ ವೇಳೆಗೆ ಕಾಲೇಜು ಛಾವಣಿ ಕುಸಿದಿದ್ದು ಸ್ಥಳದಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ದುರಂತ ತಪ್ಪಿದೆ.
ಪಾರಂಪರಿಕ ಕಟ್ಟಡದಲ್ಲಿ ವಿಜ್ಞಾನ ವಿಭಾಗದ ಲ್ಯಾಬ್ ಇತ್ತು. ನೂರಾರು ವರ್ಷಗಳ ಹಳೆಯ ಕಾಲದ ಕಟ್ಟಡವಾಗಿದ್ದರಿಂದ ಶಿಥಿಲಗೊಂಡು ಮಳೆಗೆ ಕುಸಿಯುವ ಭೀತಿ ಎದುರಾಗಿತ್ತು. ಹೀಗಾಗಿ ಪ್ರಾಂಶುಪಾಲರು ಬೆಳಗ್ಗೆ ಕಟ್ಟಡದ ವಿದ್ಯುತ್ ಕಡಿತ ಮಾಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲ ರವಿ, ಬೆಳಗ್ಗೆ 10.30ಕ್ಕೆ ಕಟ್ಟಡ ಕುಸಿತಗೊಂಡಿದೆ. ಸ್ವಲ್ಪ ಹೊತ್ತು ಮುನ್ನ 10.15ಕ್ಕೆ ಕಟ್ಟಡದ ವೀಕ್ಷಣೆ ಮಾಡಿದ್ದೆ. ಮಳೆ ನೀರು ಸೋರುತ್ತಿದ್ದ ಕಾರಣಕ್ಕೆ ಲ್ಯಾಬ್ ಎಲೆಕ್ಟ್ರಿಕ್ ಕನೆಕ್ಷನ್ ಕಟ್ ಮಾಡಿಸಲಾಗಿತ್ತು. ಲ್ಯಾಬ್ಗೆ ಯಾರೂ ಬಾರದಂತೆ ಹೇಳಿ ಬೀಗ ಹಾಕಿಸಲಾಗಿತ್ತು. ಅದಾದ 5 ನಿಮಿಷದಲ್ಲೇ ಕಟ್ಟಡ ಕುಸಿದು ಬಿದ್ದಿದೆ ಎಂದಿದ್ದಾರೆ.


ಮೂರು ಕೊಠಡಿ ಒಳಗೊಂಡಂತೆ ಸಂಪೂರ್ಣ ನೆಲಸಮ ಆಗಿದೆ. ಪಾರಂಪರಿಕ ಕಟ್ಟಡದ ಜೀರ್ಣೋದ್ಧಾರ ನಡೆಯಬೇಕಿತ್ತು. 2 ಕೋಟಿ ರೂ. ಹಣ ಕೂಡ ಬಿಡುಗಡೆ ಆಗಿತ್ತು. ಪಾರಂಪರಿಕ ಕಟ್ಟಡ ಆಗಿರುವ ಕಾರಣಕ್ಕೆ ಈಗ ಕಟ್ಟಡ ಮರು ನಿರ್ಮಾಣ ಮಾಡಲು ಜಿಲ್ಲಾಧಿಕಾರಿ ತೀರ್ಮಾನ ಮಾಡಬೇಕಿದೆ. ಸದ್ಯಕ್ಕೆ ಎರಡು ದಿನಗಳು ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಪೋಷಕರು ಆತಂಕ ಪಡಬೇಕಿಲ್ಲ. ಹೊಸ ಕಟ್ಟಡದಲ್ಲಿ ತರಗತಿ ಆರಂಭ ಮಾಡುತ್ತೇವೆ ಎಂದು ಪ್ರಾಂಶುಪಾಲ ರವಿ ಹೇಳಿದ್ದಾರೆ.
A portion of the century-old Maharani’s Science College on Jhansi Lakshmi Bai Road in Mysuru collapsed on October 21 morning following incessant rains over the last few days. Three laboratories – one each of chemistry, biotechnology and botany departments – were reduced to rubble. Though there was no loss of life or injury, the incident has shaken students and staff in the campus.
05-03-26 11:42 pm
HK News Desk
ಸಂಘರ್ಷದಿಂದ ಸಮಸ್ಯೆ ಪರಿಹರಿಸಲಾಗದು, ಪಶ್ಚಿಮ ಏಷ್ಯಾ,...
05-03-26 09:40 pm
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ ; ಮಕ್ಕಳೆದುರೇ ಹಾಸ...
04-03-26 06:47 pm
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
05-03-26 08:51 pm
HK News Staffer
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
05-03-26 07:38 pm
HK News Staffer
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm