ಬ್ರೇಕಿಂಗ್ ನ್ಯೂಸ್
11-10-22 12:12 pm Bangalore Correspondent ಕರ್ನಾಟಕ
ಬೆಂಗಳೂರು, ಅ.11: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆಯ ಕಾಮಗಾರಿಯ ಗುತ್ತಿಗೆ ನೀಡಲು ಲಂಚ ಪಡೆದ ಬಗ್ಗೆ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಕರ್ನಾಟಕದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಐಎಎಸ್ ಅಧಿಕಾರಿ ಜಿ.ಸಿ.ಪ್ರಕಾಶ್ ಹಾಗೂ 37 ಕ್ರೆಸೆಂಟ್ ಹೋಟೆಲ್ ಮಾಲೀಕ ಕೆ.ರವಿ ಸಲ್ಲಿಸಿರುವ ಪ್ರತ್ಯೇಕ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪ್ರಕರಣದಲ್ಲಿ ಬಿಜೆಪಿ ಶಾಸಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ಬಗ್ಗೆ ತನಿಖೆಗೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 23 ರಂದು ತಡೆಯಾಜ್ಞೆ ನೀಡಿತ್ತು. ಇದೇ ನೆಲೆಯಲ್ಲಿ ಮೂವರು ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹಟಗಿ, ದೇವದತ್ತ ಕಾಮತ್ ಹಾಗೂ ಸಿದ್ಧಾರ್ಥ ದವೆ ವಾದ ಮಂಡಿಸಿ, ಹೈಕೋರ್ಟ್ ಆದೇಶದ ಸಿಂಧುತ್ವ ಪ್ರಶ್ನಿಸಿದ್ದರು.
ಪ್ರಕರಣದಲ್ಲಿ ಒಬ್ಬ ಆರೋಪಿ ವಿರುದ್ಧ ತನಿಖೆಗೆ ತಡೆಯಾಜ್ಞೆ ನೀಡಿರುವುದರಿಂದ ಲೋಕಾಯುಕ್ತ ಪೊಲೀಸರು ಇತರರ ವಿರುದ್ಧ ವಿಚಾರಣೆ ನಡೆಸುವುದು ಸರಿಯಲ್ಲ ಎಂದು ವಾದಿಸಿದ್ದರು. ಆದರೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ ಮನವಿಯನ್ನು ತಿರಸ್ಕರಿಸಿದೆ.
ಈ ನಡುವೆ, ದೂರುದಾರ ಟಿ.ಜೆ.ಅಬ್ರಹಾಂ ಪರ ವಕೀಲರು, 'ಯಡಿಯೂರಪ್ಪ ಪ್ರಕರಣ ವಿಭಿನ್ನವಾಗಿತ್ತು. ಯಡಿಯೂರಪ್ಪ ಪ್ರಕರಣದಲ್ಲಿ ರಾಜ್ಯಪಾಲರಿಂದ ಪೂರ್ವಾನುಮತಿ ಕೋರಲಾಗಿತ್ತು. ಅದು ತಿರಸ್ಕೃತವಾಗಿತ್ತು. ಆದರೆ, ಬೇರೆ ಆರೋಪಿಗಳ ವಿಚಾರದಲ್ಲಿ ಇದು ಅನ್ವಯವಾಗುವುದಿಲ್ಲ' ಎಂದರು. ಬೆಂಗಳೂರು ಪೂರ್ವ ತಾಲ್ಲೂಕಿನ ಕೋನದಾಸನಪುರದಲ್ಲಿ ಬಿಡಿಎ ನಿರ್ಮಿಸುತ್ತಿರುವ ಬಹುಮಹಡಿ ವಸತಿ ಸಮುಚ್ಚಯದ ಗುತ್ತಿಗೆ ಸಂಬಂಧ ಚಂದ್ರಕಾಂತ್ ರಾಮಲಿಂಗಂ ಎಂಬ ಗುತ್ತಿಗೆದಾರರಿಂದ ಆರೋಪಿಗಳು ಒಟ್ಟು ₹ 29.5 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಟಿ.ಜೆ. ಅಬ್ರಹಾಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಎಫ್ಐಆರ್ ದಾಖಲಿಸಿ ಕೋರ್ಟ್ ತನಿಖೆಗೆ ಆದೇಶ ಮಾಡಿತ್ತು.
BDA bribe case, S T Somashekar in troubke, supreme court rejects application of consideration.
06-05-25 09:38 pm
HK News Desk
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm