ಬ್ರೇಕಿಂಗ್ ನ್ಯೂಸ್
03-07-22 07:50 pm HK News Desk ಕರ್ನಾಟಕ
ಬೆಂಗಳೂರು, ಜುಲೈ 3: ದೇಶಕ್ಕೆ ಮಾತನಾಡುವ ರಾಷ್ಟ್ರಪತಿ ಬೇಕು. ಮೌನಿಯಾಗಿರುವ ಅಥವಾ ಯಾರದ್ದೋ ರಬ್ಬರ್ ಸ್ಟಾಂಪ್ ಆಗಿರುವ ರಾಷ್ಟ್ರಪತಿಯ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಪುನರುಚ್ಚರಿಸಿದ್ದಾರೆ.
ಜುಲೈ 18 ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಶಾಂಗ್ರಿಲಾ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯಶವಂತ ಸಿನ್ಹಾ ಮತ ಯಾಚಿಸಿ ಅವರು ಮಾತನಾಡಿದರು.
ವಿರೋಧ ಪಕ್ಷಗಳ ನಾಯಕರು ಮಾತನಾಡುವ ಪರಿಸ್ಥಿತಿ ಇಲ್ಲ. ಯಾರಾದರೂ ಏನಾದರೂ ಮಾತಾಡಿದರೆ ತನಿಖಾ ಸಂಸ್ಥೆಗಳಿಂದ ನೋಟಿಸ್ ಬರುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಗೋವಾ, ಅರುಣಾಚಲ ಪ್ರದೇಶದಲ್ಲಿ ಏನೇನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಹಾಲಿ ಸರ್ಕಾರಗಳನ್ನು ಉರುಳಿಸುವ ಕೆಲಸ ಪ್ರಜಾಪ್ರಭುತ್ವ ವಿರೋಧಿ ಕೆಲಸ. ಬಿಜೆಪಿಯು ಬೇರೆ ಸರ್ಕಾರಗಳನ್ನು ಉರುಳಿಸುವ ಕೆಲಸ ಮಾಡುತ್ತಿರುವುದು ಒಪ್ಪುವಂಥದ್ದಲ್ಲ’ ಎಂದರು.
ಎರಡು ದಿನಗಳ ಹಿಂದೆ ನೂಪುರ್ ಶರ್ಮಾ ಬಗ್ಗೆ ಸುಪ್ರೀಂ ಕೋರ್ಟ್ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ನ್ಯಾಯಾಂಗವು ಸಂವಿಧಾನಕ್ಕೆ ಮಾತ್ರ ಉತ್ತರದಾಯಿ ಆಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯದ ಬಗ್ಗೆ ಟೀಕೆ ಟಿಪ್ಪಣಿ ಮಾಡಲಾಗುತ್ತಿದೆ. ಕೆಟ್ಟದಾಗಿ ಟೀಕೆ ಮಾಡಲಾಗುತ್ತಿದೆ. ನ್ಯಾಯಾಂಗದ ಮೇಲಿನ ಇಂಥ ಟೀಕೆ ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ತಮಗೆ ಅನುಕೂಲ ರೀತಿ ತೀರ್ಪು ಕೊಟ್ಟರೆ ಸಂಭ್ರಮ ಪಡುತ್ತಾರೆ. ತಮಗೆ ಬೇಡವಾದ ತೀರ್ಪು, ಅಭಿಮತ ಬಂದರೆ ತೆಗಳುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಂಥ ಸಂದರ್ಭದಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ವಿರೋಧ ಪಕ್ಷಗಳು ಸಿನ್ಹಾ ಅವರನ್ನು ಅಭ್ಯರ್ಥಿ ಮಾಡಿವೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸಿನ್ಹಾ ಅವರು ರಾಷ್ಟ್ರಪತಿ ಆಗುವ ಅಗತ್ಯ ಇದೆ’ ಎಂದರು.
‘ಯಶವಂತ್ ಸಿನ್ಹಾ ಅವರು ಈ ಹಿಂದೆ ಕೇಂದ್ರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಇವತ್ತು ದೇಶದಲ್ಲಿ ಅವರು ಎತ್ತರದ ರಾಜಕಾರಣಿ, ಹಿರಿಯರು ಮತ್ತು ಮುತ್ಸದ್ಧಿಯಾಗಿದ್ದಾರೆ. ದೇಶದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಇಂಥ ವ್ಯಕ್ತಿ ರಾಷ್ಟ್ರಪತಿ ಸ್ಥಾನಕ್ಕೆ ಏರಬೇಕು ಎಂದು ಹೇಳಿದರು.
The opposition candidate for the presidential polls, former Union minister Yashwant Sinha, Sunday said that the BJP government in Karnataka was attempting to communalize school curriculum in the state. Sinha, who was in Bengaluru to meet Congress MLAs to canvas support for the presidential polls on July 17, said the government in Karnataka is “attempting to communalize the minds of the young generation by introducing a new school curriculum coloured by the ruling party’s ideological agenda.’’
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm