ಬ್ರೇಕಿಂಗ್ ನ್ಯೂಸ್
04-06-22 02:38 pm HK News Desk ಕರ್ನಾಟಕ
ಹುಬ್ಬಳ್ಳಿ, ಜೂನ್ 4: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ಜೊತೆಗೆ ಮಾತನಾಡಿಲ್ಲ. ನನಗೆ ಚುನಾವಣೆ ಬಗ್ಗೆ ಯಾವುದೇ ತಳಮಳವೂ ಇಲ್ಲ. ರಾಜಕೀಯ ಜಂಜಾಟದಿಂದ ದೂರವಿರಲು ಸಿಂಗಾಪುರಕ್ಕೆ ಹೋಗಿದ್ದೆ. ಇಬ್ಬರು ಕಾಂಗ್ರೆಸ್ ನಾಯಕರು ಸೇರಿ ಜೆಡಿಎಸ್ನ್ನ ಮುಗಿಸಲು ನಿಂತಿದ್ದಾರೆ. ಅದರೆ ಅದು ಸಾಧ್ಯವಾಗಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮ ಪಕ್ಷದ 32 ಮತಗಳಿದ್ದು ಇದರಲ್ಲಿ ಕೆಲವರಿಗೆ ಅಸಮಾಧಾನ ಇದೆ. ಅವನ್ನು ಸರಿ ಮಾಡಿಕೊಂಡಿದ್ದೇವೆ. ಎಲ್ಲ 32 ಮತಗಳು ಜೆಡಿಎಸ್ ಅಭ್ಯರ್ಥಿಗೆ ಬರಲಿವೆ. ಕಾಂಗ್ರೆಸ್ನವರು ಏನೇ ಮಾಡಿದ್ರೂ 2016 ರಲ್ಲಿ ನಡೆದಂತಹ ಪ್ರಕರಣ ಮತ್ತೆ ಮರುಕಳಿಸಲ್ಲ. ಇಲ್ಲಿ ಕಾಂಗ್ರೆಸ್ನ ಎರಡನೆಯ ಅಭ್ಯರ್ಥಿ ಲೆಕ್ಕಕ್ಕೇ ಬರುವುದಿಲ್ಲ.
ಈ ಹಿಂದೆ ಖರ್ಗೆ ಮತ್ತು ದೇವೇಗೌಡ್ರ ರಾಜ್ಯಸಭೆ ಚುನಾವಣೆ ಬೇರೆ. ಈಗ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯೇ ಬೇರೆ. ಈ ಚುನಾವಣೆಯಲ್ಲಿ ಕ್ರಾಸ್ ಮತಗಳನ್ನ ಹಾಕಿದ್ರೆ ಅದು ಹೊರಗಡೆ ಬರುತ್ತದೆ. ಬಿಜೆಪಿಯ ಬಿ ಟೀಮ್ ಯಾರು ಎಂಬುದು ಇದೇ ಹತ್ತರಂದು ಫಲಿತಾಂಶ ನಂತ್ರ ತಿಳಿಯುತ್ತದೆ. ಸಿದ್ದರಾಮಯ್ಯ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆದ್ರು ಎನ್ನುತ್ತಿದ್ದಾರೆ. ಆದ್ರೆ ಇಲ್ಲಿ ಸಿದ್ದರಾಮಯ್ಯ ತಮ್ಮ ಕಲ್ಲನ್ನ ತೆಗೆದುಕೊಂಡು ತಮಗೇ ಹೊಡೆದುಕೊಂಡಿದ್ದಾರೆ ಎಂದು ಟಾಂಗ್ ನೀಡಿದರು.
ಸೋನಿಯಾ ಗಾಂಧಿ, ಕೈ ನಾಯಕರ ಜತೆ ಮಾತುಕತೆ ಮಾಡಿದ್ದೇನೆ ಅಂತ ವದಂತಿ ಇದೆ. ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿ ಯಾರ ಜೊತೆಯೂ ಮಾತನಾಡಿಲ್ಲ. ಅನೇಕ ವಿಶ್ಲೇಷಣೆ ಕೇಳಿದ್ದೇನೆ; ಜೆಡಿಎಸ್ ಪಕ್ಷವನ್ನ ಅವಮಾನಿಸಿದ್ದಾರೆ. ನಮ್ಮ ಅಭ್ಯಥಿಯನ್ನ ಚುನಾವಣೆಗೆ ನಿಲ್ಲಿಸಿದ್ದೇವೆ. ಫಲಿತಾಂಶದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದರು.
Former HD Kumaraswamy (Former HD) commented on the Congress, the second candidate for the Rajya Sabha election. Former CM Siddaramaiah is not hitting two birds with one stone in the Rajya Sabha polls. Instead they are slapping their heads. The candidate has not discussed with the Congress leaders about whether to stop the election. There is no question of trembling, no question of agitation. I am comfortable with my paddy. Analysts have come out that the two have come out of the JDS (JDS), which has been leveled against the Congress and the BJP.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm