ಬ್ರೇಕಿಂಗ್ ನ್ಯೂಸ್
11-02-21 03:10 pm Source: GIZBOT Manthesh ಡಿಜಿಟಲ್ ಟೆಕ್
ಸದ್ಯ ವ್ಯಾಲೆಂಟೈನ್ಸ್ ವೀಕ್ ಇದ್ದು, ಪ್ರೇಮಿಗಳ ಪಾಲಿಗೆ ಹಬ್ಬದ ವಾತಾವರಣ ಅನಿಸಿದೆ. ಈ ನಿಟ್ಟಿನಲ್ಲಿ ಬಹುತೇಕ ಜನರು ಪ್ರೇಮಿಗಳ ದಿನಾಚರಣೆಗಾಗಿ ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ಹುಡುಕಲು ಇಂಟರ್ನೆಟ್ನಲ್ಲಿ ಸಮಯ ವ್ಯಯಸುತ್ತಿದ್ದಾರೆ. ಪ್ರಸ್ತುತ ವ್ಯಾಲೇಂಟನ್ಸ್ ಗಿಫ್ಟ್ಗೆ ಸಂಬಂಧಿಸಿದ ದುರುದ್ದೇಶಪೂರಿತ ಫಿಶಿಂಗ್ ಮೇಲ್ ಅಭಿಯಾನಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಸೈಬರ್ ಸೆಕ್ಯುರಿಟಿ ಸಂಸ್ಥೆ ಚೆಕ್ಪಾಯಿಂಟ್ ರಿಸರ್ಚ್ ತಿಳಿಸಿದೆ.
ಹೌದು, ಪ್ರೇಮಿಗಳ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ಇಂಟರ್ನೆಟ್ನಲ್ಲಿ ಜಾಲಾಡುತ್ತಿರುತ್ತಾರೆ. ಬಳಕೆದಾರರನ್ನು ಗುರಿಯಾಗಿಸಿಕೊಂಡು ವ್ಯಾಲೇಂಟನ್ಸ್ ಉಡುಗೊರೆ ನೆಪದಲ್ಲಿ ದುರುದ್ದೇಶಪೂರಿತ ಫಿಶಿಂಗ್ ಮೇಲ್ ಅಭಿಯಾನ ಹೆಚ್ಚಾಗಿ ಆಗಿದೆ. ಜನವರಿ ದ್ವಿತೀಯಾರ್ಧದಿಂದ ಪ್ರತಿ ವಾರ 400ಕ್ಕೂ ಹೆಚ್ಚು ಪ್ರೇಮಿಗಳ ದಿನದ ವಿಷಯದ ಫಿಶಿಂಗ್ ಮೇಲ್ಗಳನ್ನು ಗುರುತಿಸಲಾಗಿದೆ

ಇದಲ್ಲದೆ, ದುರುದ್ದೇಶಪೂರಿತ ಪ್ರೇಮಿಗಳ ದಿನದ ಡೊಮೇನ್ಗಳಲ್ಲಿ ಏರಿಕೆ ಆಗಿದೆ. ಜನವರಿಯುದ್ದಕ್ಕೂ, ವ್ಯಾಲೆಂಟೈನ್ಸ್ ಡೇ ವಿಷಯದ ಕುರಿತಾಗಿ ಹೊಸ ಡೊಮೇನ್ಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. 23,000 ಹೊಸ ಡೊಮೇನ್ಗಳಲ್ಲಿ, 0.5 ಪ್ರತಿಶತ (115) ದುರುದ್ದೇಶಪೂರಿತವೆಂದು ಕಂಡುಬಂದಿದೆ ಮತ್ತು 1.8 ಪ್ರತಿಶತ (414) ಅನುಮಾನಾಸ್ಪದವೆಂದು ಕಂಡುಬಂದಿದೆ ಎಂದು ಚೆಕ್ ಪಾಯಿಂಟ್ ರಿಸರ್ಚ್ ಹೇಳಿದೆ.

ಈ ಫಿಶಿಂಗ್ ಇಮೇಲ್ಗಳಲ್ಲಿ ಹೆಚ್ಚಿನವು ಸಂಭಾವ್ಯ ಖರೀದಿದಾರರನ್ನು ಗುರಿಯಾಗಿಸುವುದರ ಮೇಲೆ ಕೇಂದ್ರೀಕರಿಸಿದೆ. ಅನೇಕ ಸಂದರ್ಭಗಳಲ್ಲಿ ಹಿಂದಿನ ಫಿಶಿಂಗ್ ಪ್ರಯತ್ನಗಳಿಂದ ಥೀಮ್ಗಳು ಮತ್ತು ವೆಬ್ಪುಟಗಳನ್ನು ಮರುಬಳಕೆ ಮಾಡಿವೆ. ವ್ಯಾಲೆಂಟೈನ್ಸ್ ವೀಕ್ನ ಈ ಸಂದರ್ಭದಲ್ಲಿ ಫಿಶಿಂಗ್ ಮೇಲ್ ಅಭಿಯಾನದ ಮೂಲಕ ಬಳಕೆದಾರರನ್ನು ವಂಚಿಸುವ ಸಾಧ್ಯತೆಗಳು ಅಧಿಕವಾಗಿವೆ ಎಂದು ಚೆಕ್ ಪಾಯಿಂಟ್ ವರದಿಯಲ್ಲಿ ಹೇಳಿದೆ.

ಹಲವಾರು ಬಳಕೆದಾರರು ಈ ಹಿಂದೆ ಫಿಶಿಂಗ್ ದಾಳಿಗೆ ಬಲಿಯಾಗಿ, ಮಹತ್ತರ ಡೇಟಾ, ಹಣ ಕಳೆದುಕೊಳ್ಳಲು ಕಾರಣವಾಗಿದೆ. ಹೀಗಾಗಿ ಬಳಕೆದಾರರು ಆನ್ಲೈನ್ನಲ್ಲಿ ಉಡುಗೊರೆಗಳಿಗಾಗಿ ಶಾಪಿಂಗ್ ಮಾಡುವಾಗ, ಶಾಪಿಂಗ್ ಮಾಡುತ್ತಿರುವ ಪ್ಲಾಟ್ಫಾರ್ಮ್ ಅನ್ನು ಯಾವಾಗಲೂ ದೃಢೀಕರಿಸಿಕೊಳ್ಳಿ. ಹಾಗೆಯೇ ಇಮೇಲ್ಗಳು ಮತ್ತು ವಾಟ್ಸಾಪ್ನಲ್ಲಿ ಸ್ವೀಕರಿಸುವ ರಿಯಾಯಿತಿ ಕೂಪನ್ಗಳು ಮತ್ತು ಉಡುಗೊರೆ ಲಿಂಕ್ಗಳ ಬಗ್ಗೆ ಜಾಗರೂಕರಾಗಿರಿ.
This News Article is a Copy of GIZBOT
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm