ಬ್ರೇಕಿಂಗ್ ನ್ಯೂಸ್
09-02-21 04:18 pm Source: GIZBOT Manthesh ಡಿಜಿಟಲ್ ಟೆಕ್
ಜನಪ್ರಿಯ ಶಿಯೋಮಿ ಸಂಸ್ಥೆಯು ಈಗಾಗಲೇ ರೆಡ್ಮಿ K ಸರಣಿಯಲ್ಲಿ ಹಲವು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಇತ್ತೀಗಷ್ಟೆ ರೆಡ್ಮಿ K30 ಸರಣಿಯ ಬಿಡುಗಡೆ ಮಾಡಿದ್ದು, ಅದರ ಮುಂದುವರಿದ ಭಾಗವಾಗಿ ಇದೀಗ ರೆಡ್ಮಿ K40 ದೈತ್ಯ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ಸಕಲ ತಯಾರಿ ನಡೆಸಿದೆ. ಈ ಸ್ಮಾರ್ಟ್ಫೋನ್ ಲೀಕ್ ಮಾಹಿತಿಗಳು ಈಗ ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿವೆ.
ಹೌದು, ಶಿಯೋಮಿ ಲಾಂಚ್ ಮಾಡಲಿರುವ ಹೊಸ ರೆಡ್ಮಿ K40 ಸ್ಮಾರ್ಟ್ಫೋನ್ ಸರಣಿಯು ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಸರಣಿಯು ರೆಡ್ಮಿ K40 ಹಾಗೂ ರೆಡ್ಮಿ K40 ಪ್ರೊ ಮಾಡೆಲ್ಗಳ ವೇರಿಯಂಟ್ ಹೊಂದಿರಲಿದೆ ಎನ್ನಲಾಗಿದೆ. ಇದೇ ಫೆ.25ರಂದು ಅಧಿಕೃತವಾಗಿ ರೆಡ್ಮಿ K40 ಸರಣಿಯ ಫೀಚರ್ಸ್ಗಳು ಅನಾವರಣಗೊಳ್ಳಲಿವೆ ಎಂದು ತಿಳಿದುಬಂದಿದೆ.
ರೆಡ್ಮಿ K40 ಸ್ಮಾರ್ಟ್ಫೋನ್ ಪಾಪ್-ಅಪ್ ಕ್ಯಾಮೆರಾ ಕಾರ್ಯವಿಧಾನದ ಬದಲು ಪಂಚ್-ಹೋಲ್ ಡಿಸ್ಪ್ಲೇ ರಚನೆಯೊಂದಿಗೆ ಬರುವ ಸಾಧ್ಯತೆಗಳಿವೆ. ರೆಡ್ಮಿ ಜನರಲ್ ಮ್ಯಾನೇಜರ್ ಲು ವೀಬಿಂಗ್ ಕೂಡ ಈ ಸ್ಮಾರ್ಟ್ಫೋನ್ನಲ್ಲಿನ ಚಿಕ್ಕದಾದ ಪಂಚ್-ಹೋಲ್ ಕಟೌಟ್ ಆಗಿರುತ್ತದೆ ಎಂದು ದೃಢೀಕರಣ ಪಡಿಸಿದ್ದಾರೆ. ಹಾಗೆಯೇ ರೆಡ್ಮಿ K40 ಫೋನ್ 120Hz ರಿಫ್ರೆಶ್ ದರ ಮತ್ತು LCD ಪ್ಯಾನಲ್ ಒಳಗೊಂಡ ಪೂರ್ಣ ಹೆಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿರಲಿದೆ.
ಇನ್ನು ಈ ಸ್ಮಾರ್ಟ್ಫೋನ್ ಅನ್ನು ಸಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್ಸೆಟ್ನಿಂದ ನಿಯಂತ್ರಿಸಲಿದ್ದು, ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 870 SoC ಪ್ರೊಸೆಸರ್ ಅನ್ನು ಪಡೆದಿರಲಿದೆ. ಇದರೊಂದಿಗೆ 6GB RAM ಮತ್ತು 128GB ಆಂತರಿಕ ಸಂಗ್ರಹವನ್ನು ಪಡೆದುಕೊಂಡಿರಲಿದೆ ಎಂಬ ವದಂತಿಗಳಿವೆ. ಹಾಗೆಯೇ ಇದಕ್ಕೆ ಪೂರಕವಾಗಿ 4,000mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಪಡೆದಿರಲಿದೆ ಎನ್ನಲಾಗಿದೆ.
ಈ ಸ್ಮಾರ್ಟ್ಫೋನ್ ಇತ್ತೀಚಿನ ಆಂಡ್ರಾಯ್ಡ್ 11 ಓಎಸ್ ಆಧಾರಿತ ಎಂಐಯುಐ 12.5 ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಮತ್ತು 5G ಬೆಂಬಲದೊಂದಿಗೆ ಅನಾವರಣ ಆಗಲಿದೆ. ಚೀನಾದಲ್ಲಿ CNY 2,999 (ಭಾರತದಲಲ್ಲಿ ಅಂದಾಜು 34,000.ರೂ ಎನ್ನಲಾಗಿದೆ) ಬೆಲೆಯಲ್ಲಿ ಹೊಸ ರೆಡ್ಮಿ K40 ಸ್ಮಾರ್ಟ್ಫೋನ್ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.
This News Article is a Copy of GIZBOT
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm