ಬ್ರೇಕಿಂಗ್ ನ್ಯೂಸ್
06-02-21 03:54 pm Source: GIZBOT Mutthuraju H M ಡಿಜಿಟಲ್ ಟೆಕ್
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (IRCTC) ತನ್ನದೇ ಆದ ಹೊಸ ಆನ್ಲೈನ್ ಬಸ್ ಬುಕಿಂಗ್ ಸೇವೆಗಳನ್ನು ಪರಿಚಯಿಸಿದೆ. ಇಷ್ಟು ದಿನ IRCTC ಮೂಲಕ ರೈಲ್ವೇ ಟಿಕೆಟ್ ಕಾಯ್ದಿರಿಸುತ್ತಿದ್ದ ಜನರು ಇನ್ಮುಂದೆ ಬಸ್ ಟಿಕೆಟ್ ಅನ್ನು ಬುಕ್ಕಿಂಗ್ ಮಾಡಬಹುದಾಗಿದೆ. ಈ ಸೇವೆ ಕಳೆದ ಜನವರಿ ತಿಂಗಳಿನ 29 ರಂದೇ ರಾಷ್ಟ್ರದ ಸೇವೆಗಾಗಿ ಲೈವ್ ಆಗಿದೆ ಎಂದು IRCTC ಶುಕ್ರವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹೌದು, IRCTC ದೇಶದ ಜನರಿಗೆ ಆನ್ಲೈನ್ ಬಸ್ ಬುಕ್ಕಿಂಗ್ ಸೇವೆಯನ್ನು ಪರಿಚಯಿಸಿದೆ. ಈ ಮೂಲಕ ಒಂದೇ ಪೋರ್ಟಲ್ನಲ್ಲಿ ಬಸ್ ಹಾಗೂ ಟ್ರೈನ್ ಎರಡನ್ನು ಬುಕ್ಕಿಂಗ್ ಮಾಡುವ ಅವಕಾಶ ದೊರೆಯಲಿದೆ. ಸದ್ಯ ರೈಲ್ವೇ ಸಚಿವಾಲಯ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮತ್ತು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ನೇತೃತ್ವದಲ್ಲಿ IRCTC ದೇಶದ ಮೊದಲ ಸರ್ಕಾರದ 'ಒನ್ ಸ್ಟಾಪ್ ಶಾಪ್ ಟ್ರಾವೆಲ್ ಪೋರ್ಟಲ್' ಆಗಿ ಹೆಜ್ಜೆ ಹಾಲು ಮುಂದಾಗಿದೆ.
ರೈಲ್ವೆ ಇಲಾಖೆ ತನ್ನ ಗ್ರಾಹಕರಿಗೆ ಹೆಚ್ಚು ಸಮಗ್ರ ಪ್ರಯಾಣದ ಅನುಭವವನ್ನು ಒದಗಿಸುವ ಉದ್ದೇಶದಿಂದ ಹೊಸ ಹೆಜ್ಜೆಯನ್ನು ಹಾಕಿದೆ. ತನ್ನ ಇತ್ತೀಚಿನ ಬೆಳವಣಿಗೆಯಲ್ಲಿ, ಈಗಾಗಲೇ ಆನ್ಲೈನ್ ರೈಲು ಮತ್ತು ಫ್ಲೈಟ್ ಟಿಕೆಟ್ ಬುಕಿಂಗ್ ವ್ಯವಹಾರದಲ್ಲಿರುವ ಐಆರ್ಸಿಟಿಸಿ ತನ್ನ ಆನ್ಲೈನ್ ಬಸ್ ಬುಕಿಂಗ್ ಸೇವೆಗಳನ್ನು ಸಹ ಪ್ರಾರಂಭಿಸಿದೆ. ಇದು 2021 ಜನವರಿ 29 ರಂದೆ ರಾಷ್ಟ್ರದ ಜನರಿಗೆ ಸೇವೆ ಒದಗಿಸುತ್ತಿದೆ ಎಂದು ರೈಲ್ವೆ ಇಲಾಖೆ ಹೇಳಿಕೊಂಡಿದೆ. ಇನ್ನು IRCTC ಮೊಬೈಲ್-ಆಪ್ ಮೂಲಕ ಈ ಸೇವೆಯ ಏಕೀಕರಣವು ಮಾರ್ಚ್ ಮೊದಲ ವಾರದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರಿಂದಾಗಿ ಸಾರ್ವಜನಿಕರಿಗೆ ಮೊಬೈಲ್ ಮೂಲಕವೂ ಬಸ್ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆ.
ಇನ್ನು ಗ್ರಾಹಕರಿಗೆ ಆನ್ಲೈನ್ ಬಸ್ ಬುಕಿಂಗ್ ಸೇವೆಗಳನ್ನು ನೀಡುವುದಕ್ಕಾಗಿ IRCTC 50,000 ಕ್ಕೂ ಹೆಚ್ಚು ರಾಜ್ಯ ರಸ್ತೆ ಸಾರಿಗೆ ಮತ್ತು 22 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಖಾಸಗಿ ಬಸ್ ನಿರ್ವಾಹಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆನ್ಲೈನ್ ಬಸ್ ಬುಕಿಂಗ್ನ ಈ ಹೊಸ ಫೀಚರ್ಸ್ ಗ್ರಾಹಕರಿಗೆ ವಿವಿಧ ಬಸ್ಗಳನ್ನು ವೀಕ್ಷಿಸಲು ಮತ್ತು ಮಾರ್ಗ, ಸೌಕರ್ಯಗಳು, ವಿಮರ್ಶೆಗಳು, ರೇಟಿಂಗ್ಗಳು ಮತ್ತು ಲಭ್ಯವಿರುವ ಬಸ್ ಚಿತ್ರಗಳನ್ನು ಪರಿಗಣಿಸಿ ಪ್ರಯಾಣಕ್ಕೆ ಸೂಕ್ತವಾದ ಬಸ್ಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.
ಇದರೊಂದಿಗೆ, ಗ್ರಾಹಕರು ತಮ್ಮ ಪಿಕ್-ಅಪ್ ಮತ್ತು ಡ್ರಾಪ್ ಪಾಯಿಂಟ್ಗಳು ಮತ್ತು ಸಮಯಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಈ ಟಿಕೆಟ್ ಬುಕ್ಕಿಂಗ್ ಅನ್ನು ತಾವು ಬಳಸುತ್ತಿರುವ ಬ್ಯಾಂಕ್ ಮತ್ತು ಇ-ವ್ಯಾಲೆಟ್ ರಿಯಾಯಿತಿಯೊಂದಿಗೆ ತಮ್ಮ ಪ್ರಯಾಣವನ್ನು ಸಮಂಜಸವಾದ ಬೆಲೆಯಲ್ಲಿ ಕಾಯ್ದಿರಿಸಬಹುದು. IRCTCಯ ಹೊಸ ವ್ಯವಹಾರ ಉಪಕ್ರಮವು ಈಗಾಗಲೇ IRCTCಯ ಸೇವೆಗಳನ್ನು ರೈಲು ಮತ್ತು ವಿಮಾನ ಟಿಕೆಟ್ ಬುಕಿಂಗ್ಗಾಗಿ ಬಳಸುತ್ತಿರುವ ಪ್ರಯಾಣಿಕರಿಗೆ ಬಸ್ ಟಿಕಟ್ ಬುಕ್ಕಿಂಗ್ ಸೇವೆಯನ್ನು ಕಲ್ಪಿಸಲಿದೆ.
This News Article is a Copy of GIZBOT
10-07-25 12:45 pm
HK News Desk
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನ...
09-07-25 10:45 pm
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
Heart attack, Dharwad, Davanagere: ಉದ್ಯಮಿ ಮಗನ...
09-07-25 11:50 am
10-07-25 03:24 pm
HK News Desk
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
10-07-25 04:01 pm
Mangalore Correspondent
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
Mangalore Peace meeting Home Minister: ಎಳೆಯ ಮ...
09-07-25 07:37 pm
10-07-25 01:05 pm
HK News Desk
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm