ಬ್ರೇಕಿಂಗ್ ನ್ಯೂಸ್
30-01-21 04:35 pm Source: GIZBOT Mutthuraju H M ಡಿಜಿಟಲ್ ಟೆಕ್
ಫೇಸ್ಬುಕ್ ಒಡೆತನದ ವಾಟ್ಸಾಪ್ ವಿಶ್ವದಾದ್ಯಂತ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಇನ್ನು ವಾಟ್ಸಾಪ್ ತನ್ನ ಬಳಕೆದಾರರಿಗೆ ಅನುಕೂಲವಾಗುವಂತೆ ಹಲವು ಫೀಚರ್ಸ್ಗಳನ್ನು ಪರಿಚಯಿಸಿದೆ. ಇನ್ನು ನೀವು ವಾಟ್ಸಾಪ್ ಬಳಸುವಾಗ ನಿಮ್ಮ ಸ್ನೇಹಿತರ ವಾಟ್ಸಾಪ್ ಖಾತೆಯಲ್ಲಿ ಆನ್ಲೈನ್ನಲ್ಲಿ ಇರುವುದು ಗೋಚರವಾಗುತ್ತದೆ. ಆದರೂ ವಾಟ್ಸಾಪ್ನಲ್ಲಿ ಆನ್ಲೈನ್ನಲ್ಲಿ ಇರುವುದು ತಿಳಿದಂತೆ ಮಾಡಿ ಚಾಟ್ ಮಾಡುವುದಕ್ಕೂ ಸಹ ಅವಕಾಶವಿದೆ.
ಹೌದು, ವಾಟ್ಸಾಪ್ನಲ್ಲಿ ಚಾಟ್ ಮಾಡುತ್ತಿದ್ದರೂ ನೀವು ಆನ್ಲೈನ್ನಲ್ಲಿ ಇಲ್ಲದೆ ಇರುವಂತೆ ಮಾಡುವುದಕ್ಕೆ ಅವಕಾಶವಿದೆ. ನಿಮ್ಮ ವಾಟ್ಸಾಪ್ ಲಾಸ್ಟ್ ಸೀನ್ ಅಥವಾ ಆನ್ಲೈನ್ ಸ್ಟೇಟಸ್ ಅನ್ನು ವಾಟ್ಸಾಪ್ನಲ್ಲಿ ತೋರಿಸಲು ನೀವು ಬಯಸದಿದ್ದರೆ ಅದನ್ನು ಮರೆಮಾಚಬಹುದಾಗಿದೆ. ಆದರೆ, ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ನ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಆನ್ಲೈನ್ನಲ್ಲಿ ಇದ್ದರೂ ಸಹ ನಿಮ್ಮ ಸ್ನೇಹಿತರ ವಾಟ್ಸಾಪ್ ಖಾತೆಯಲ್ಲಿ ನೀವು ಆನ್ಲೈನ್ನಲ್ಲಿ ಇರುವುದು ತಿಳಿದಂತೆ ಮಾಡಬಹುದು. ಇದಕ್ಕಾಗಿ ಮೊದಲಿಗೆ, ನಿಮ್ಮ ಫೋನ್ನಲ್ಲಿರುವ ಪ್ಲೇ ಸ್ಟೋರ್ಗೆ ಹೋಗಿ, ನಂತರ ನೀವು ಚಾಟ್ಗಾಗಿ WA ಬಬಲ್ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು. ಅದನ್ನು ಡೌನ್ಲೋಡ್ ಮಾಡಿದ ನಂತರ, ಅಪ್ಲಿಕೇಶನ್ ತೆರೆಯಿರಿ. ಈಗ ವಾಟ್ಸಾಪ್ನಲ್ಲಿ ಬರುವ ಸಂದೇಶಗಳು ಬಬಲ್ನಲ್ಲಿ ಕಂಡುಬರುತ್ತವೆ. ನೀವು ಇಲ್ಲಿ ಚಾಟ್ ಮಾಡುವಾಗ, ನೀವು ಯಾರನ್ನೂ ಆನ್ಲೈನ್ನಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಮತ್ತು ಆಫ್ಲೈನ್ನಲ್ಲಿದ್ದರೂ ಸಹ ನೀವು ಆರಾಮವಾಗಿ ಚಾಟ್ ಮಾಡಲು ಸಾಧ್ಯವಾಗುತ್ತದೆ. ಈ ಅಪ್ಲಿಕೇಶನ್ ಮೂಲಕ ನೀವು ವಾಟ್ಸಾಪ್ ತೆರೆಯದೆ ಚಾಟ್ ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರು ಮಾತ್ರ ಈ ಅಪ್ಲಿಕೇಶನ್ ಅನ್ನು ಬಳಸಬಹುದು.
ಇನ್ನು ಆಂಡ್ರಾಯ್ಡ್ ಡಿವೈಸ್ನಲ್ಲಿ ನಿಮ್ಮ ಗೌಪ್ಯತೆಯನ್ನು ಉಳಿಸಿಕೊಳ್ಳಲು ನೀವು ಬಯಸಿದರೆ, ನೀವು Chrome ಗೆ ಹೋಗಿ GBWhatsApp ಅನ್ನು ಸರ್ಚ್ ಮಾಡಿ. ಇದನ್ನು ಡೌನ್ಲೋಡ್ ಮಾಡಿದ ನಂತರ, ನೀವು ವಾಟ್ಸಾಪ್ ನಂತಹ ಐಕಾನ್ ಅನ್ನು ಪಡೆಯುತ್ತೀರಿ. ಇದು ಕೂಡ ವಾಟ್ಸಾಪ್ನಂತೆ ಕಾರ್ಯನಿರ್ವಹಿಸುತ್ತದೆ. ಈಗ, ನೀವು ಮೇಲಿನ ಬಲ ಮೂಲೆಯಲ್ಲಿ ಕ್ಲಿಕ್ ಮಾಡಬೇಕಾಗುತ್ತದೆ. ಇಲ್ಲಿ ನೀವು ಅನೇಕ ಆಯ್ಕೆಗಳನ್ನು ಪಡೆಯುತ್ತೀರಿ, ನೀವು ಆನ್ಲೈನ್ ಬಾರ್ ಅನ್ನು ಹೈಡ್ ಮಾಡುವ ಆಯ್ಕೆ ಮಾಡಬೇಕಾಗುತ್ತದೆ. ಈಗ, ನೀವು ಇತರರ ಗಮನಕ್ಕೆ ಬಾರದೆ ಗೌಪ್ಯತೆಯಿಂದ ಚಾಟ್ ಮಾಡಬಹುದಾಗಿದೆ.
ಇದಲ್ಲದೆ ನಿಮ್ಮ ಲಾಸ್ಟ್ ಸೀನ್ ಅನ್ನು ಮರೆಮಾಚುವಂತಹ ಇತರ ಆಯ್ಕೆಗಳಿವೆ. ಇದರಲ್ಲಿ, ನಿಮ್ಮ "ಲಾಸ್ಟ್ ಸೀನ್" ವೈಶಿಷ್ಟ್ಯವನ್ನು ನೀವು ನಿಷ್ಕ್ರಿಯಗೊಳಿಸಬಹುದು ಅಥವಾ ಮರೆಮಾಡಬಹುದು. ಈ ರೀತಿಯಾಗಿ ಸಂದೇಶಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಒತ್ತಡದಿಂದ ನೀವು ನಿಮ್ಮನ್ನು ಉಳಿಸಿಕೊಳ್ಳಬಹುದು. ಇದಕ್ಕಾಗಿ, ನಿಮ್ಮ ವಾಟ್ಸಾಪ್ನಲ್ಲಿನ ಸೆಟ್ಟಿಂಗ್ಗಳ ಆಯ್ಕೆಗೆ ನೀವು ಹೋಗಿ ಲಾಸ್ಟ್ ಸೀನ್ ಆಫ್ ಮಾಡಲು ಖಾತೆಯನ್ನು ಆಯ್ಕೆ ಮಾಡಿ. ಗೌಪ್ಯತೆ ಟ್ಯಾಬ್ ಅಡಿಯಲ್ಲಿ ನೀವು ಕೊನೆಯದಾಗಿ ನೋಡಿದವರನ್ನು "Nobody" ಎಂದು ಬದಲಾಯಿಸಿ. ನೀವು ಕೊನೆಯ ಬಾರಿಗೆ ವಾಟ್ಸಾಪ್ನಲ್ಲಿ ಕಾಣಿಸಿಕೊಂಡಾಗ ಯಾರಿಗೂ ತಿಳಿಯಲು ಸಾಧ್ಯವಾಗುವುದಿಲ್ಲ. ಈ ಫೀಚರ್ಸ್ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಲ್ಲಿ ಲಭ್ಯವಿದೆ.
This News Article is a Copy of GIZBOT
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 11:32 am
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm