ಬ್ರೇಕಿಂಗ್ ನ್ಯೂಸ್
27-01-21 03:47 pm Source: GIZBOT Mutthuraju H M ಡಿಜಿಟಲ್ ಟೆಕ್
ಭಾರತೀಯ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್ ಡಿಜಿಬಾಕ್ಸ್ ಬಳಕೆದಾರರಿಗೆ ಹೊಸ ಅವಕಾಶವೊಂದನ್ನು ಕಲ್ಪಿಸಿದೆ. ಈಗಾಗಲೇ ಭಾರತದಲ್ಲಿ ಗೂಗಲ್ ಡ್ರೈವ್ಗೆ ಪರ್ಯಾಯವಾಗಿರುವ ಡಿಜಿಬಾಕ್ಸ್ ತನ್ನ ಸೇವೆಗಾಗಿ ಸೈನ್ ಅಪ್ ಮಾಡುವ ಹೊಸ ಬಳಕೆದಾರರಿಗಾಗಿ 26GB ಕ್ಲೌಡ್ ಸ್ಟೋರೇಜ್ ನೀಡಲು ಮುಂದಾಗಿದೆ. ರಿಪಬ್ಲಿಕ್ ಡೇ ಸಂಭ್ರಮದಂದೇ ಈ ಮಹತ್ತರವಾದ ನಿರ್ಣಯವನ್ನು ಡಿಜಿಬಾಕ್ಸ್ ಕೈ ಗೊಂಡಿದೆ. ಈ ವಾರ ಸ್ವದೇಶಿ ಸ್ಟೋರೇಜ್ ಅನ್ನು ಸೈನ್ ಅಪ್ ಮಾಡುವ ಬಳಕೆದಾರರು ಕಂಪನಿಯ ಸೀಮಿತ ಕೊಡುಗೆಯನ್ನು ಪಡೆಯಬಹುದು.
ಹೊಡೆಯಲು ಪ್ರಾರಂಭವಾದ ಸೇವೆಯ ಡಿಜಿಬಾಕ್ಸ್ ಕ್ಲೌಡ್ ಸ್ಟೋರೇಜ್ ಸೇವೆ. ಇದೀಗ ಸ್ವದೇಶಿ ಸ್ಟೋರೇಜ್ ಪ್ಲೆಡ್ಜ್ ಅಭಿಯಾನದಲ್ಲಿ ಹೊಸದಾಗಿ ಸೈನ್ ಇನ್ ಮಾಡುವ ಬಳಕೆದಾರರಿಗೆ 26GB ಕ್ಲೌಡ್ ಸ್ಟೋರೇಜ್ ನೀಡಲಿದೆ. ಇನ್ನು ಈ ಅಪ್ಲಿಕೇಶನ್ ಪ್ರಾರಂಭವಾದಾಗಿನಿಂದ 4 ಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಸದ್ಯ ಡಿಜಿಬಾಕ್ಸ್ ಉಚಿತವಾಗಿ 26GB ಕ್ಲೌಡ್ ಸ್ಟೋರೇಜ್ ನಿಡುತ್ತಿರುವುದು
ಡಿಜಿಬಾಕ್ಸ್ ‘ಮೇಡ್ ಇನ್ ಇಂಡಿಯಾ' ಉತ್ಪನ್ನವಾಗಿರುವುದರಿಂದ, #ಸ್ವದೇಶಿ ಸ್ಟೋರೇಜ್ ಪ್ರತಿಜ್ಞೆಯನ್ನು ತೆಗೆದುಕೊಳ್ಳುವವರಿಗೆ ಉಚಿತ ಸ್ಟೋರೇಜ್ ನೀಡಲು ಮುಂದಾಗಿದೆ. ಸ್ವದೇಶಿ ಸ್ಟೋರೇಜ್ ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ ನಮ್ಮೊಂದಿಗೆ ಸೈನ್ ಅಪ್ ಮಾಡುವ ಹೊಸ ಬಳಕೆದಾರರಿಗೆ ಈ ಅವಕಾಶವನ್ನು ನೀಡಲಿದ್ದೇವೆ ಎಂದು ಡಿಜಿಬಾಕ್ಸ್ ಸಂಸ್ಥೆ ಹೇಳಿದೆ. ಇನ್ನು ಈ #ಸ್ವದೇಶಿಸ್ಟೋರೇಜ್ ಪ್ರತಿಜ್ಞೆಯಲ್ಲಿ ವಾರ್ ಪೂರ್ತಿ ಸ್ವದೇಶಿ ವಸ್ತುಗಳನ್ನು ಕೊಂಡುಕೊಳ್ಳುವುದು, ಸ್ವದೇಶಿ ಉತ್ಪನ್ನಗಳನ್ನು ಪ್ರೊತ್ಸಾಹಿಸುವುದು ಮಾಡಬೇಕಿದೆ. ಇದಕ್ಕಾಗಿ ಡಿಜಿಬಾಕ್ಸ್ 26GB ಉಚಿತ ಸ್ಟೋರೇಜ್ ನೀಡಲಿದೆ.
ನಮ್ಮ ಪರಿಧಿಯನ್ನು ವಿಸ್ತರಿಸಲು ಮತ್ತು ಬಳಕೆದಾರರನ್ನು 'ಭಾರತದಲ್ಲಿ ಸ್ಟೋರೇಜ್ ಮಾಡಲು, ಸೇವ್ ಮಾಡಲು ಮತ್ತು ಶೇರ್ಮಾಡಲು' ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೆ #VocalforLocal ಗೆ ಹೋಗಿ, ಇದರಿಂದಾಗಿ 'ಡಿಜಿಟಲ್ ಇಂಡಿಯಾ'ದತ್ತ ದಾರಿ ಮಾಡಿಕೊಡುತ್ತೇವೆ ಮತ್ತು ಸ್ವದೇಶಿ ಡಿಜಿಟಲ್ ಆವಿಷ್ಕಾರಗಳನ್ನು ಹೆಚ್ಚಿಸುತ್ತೇವೆ "ಎಂದು ಡಿಜಿಬಾಕ್ಸ್ ಸಿಇಒ ಅರ್ನಾಬ್ ಮಿತ್ರಾ ಹೇಳಿದ್ದಾರೆ. ಇನ್ನು ಈ ಕೊಡುಗೆ ಅವಧಿ ಮುಗಿದ ನಂತರ, ಹೊಸ ಬಳಕೆದಾರರು ವೈಯಕ್ತಿಕ ಫೈಲ್ಗಳಿಗೆ 2GB ಮಿತಿಯೊಂದಿಗೆ ಪ್ಲಾಟ್ಫಾರ್ಮ್ನಲ್ಲಿ ಇನ್ನೂ 20GB ಉಚಿತ ಸ್ಟೋರೇಜ್ ಅನ್ನು ಪಡೆಯುತ್ತಾರೆ.
ಇದಲ್ಲದೆ ಡಿಜಿಬಾಕ್ಸ್ ಬಳಕೆದಾರರು ತಿಂಗಳಿಗೆ 30 ರೂ.ಗಳ ಯೋಜನೆಗೆ ಚಂದಾದಾರರಾಗಬಹುದು, ಇದು 5GB ಸ್ಟೋರೇಜ್ ಅನ್ನು ನೀಡುತ್ತದೆ. ಜೊತೆಗೆ ಇದು 10GBಯಲ್ಲಿ ಪ್ರತ್ಯೇಕ ಫೈಲ್ನ ಅಪ್ಲೋಡ್ ಮಿತಿಯನ್ನು ಹೊಂದಿರುತ್ತದೆ. ಡಿಜಿಬಾಕ್ಸ್ ವ್ಯವಹಾರಗಳಿಗೆ ತಿಂಗಳಿಗೆ 999 ರೂ.ಗಳ ಯೋಜನೆಯನ್ನು ನೀಡುತ್ತದೆ, ಇದು 500 ಬಳಕೆದಾರರನ್ನು ಒಳಗೊಂಡಿರುತ್ತದೆ. ವ್ಯಾಪಾರ ಯೋಜನೆಯಲ್ಲಿ ಶೇಖರಣಾ ಮಿತಿ 500TB ಆಗಿದ್ದು, ಪ್ರತ್ಯೇಕ ಫೈಲ್ ಗಾತ್ರದ ಮಿತಿಯನ್ನು 10TBಗೆ ನಿಗದಿಪಡಿಸಲಾಗಿದೆ.
ಇನ್ನು ಕಳೆದ ವರ್ಷ ನಿತಿ ಆಯೋಗ್ ಸಿಇಒ ಅಮಿತಾಭ್ ಕಾಂತ್ ಅವರು ‘ಆತ್ಮನಿರ್ಭಾರ ಭಾರತ್' ಅಡಿಯಲ್ಲಿ ಈ ಸೇವೆಯನ್ನು ಘೋಷಿಸಿದಾಗ ಕ್ಲೌಡ್ ಸ್ಟೋರೇಜ್ ಪ್ರಾರಂಭವಾಯಿತು. ಈ ಪ್ಲಾಟ್ಫಾರ್ಮ್ ‘ಇನ್ಸ್ಟಾಶೇರ್' ಎಂಬ ಫೈಲ್-ಶೇರಿಂಗ್ ಫೀಚರ್ಸ್ ಅನ್ನು ಸಹ ನೀಡುತ್ತದೆ. ಬಳಕೆದಾರರು ತಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು 2GB ವರೆಗೆ ಫೈಲ್ಗಳನ್ನು ಶೇರ್ಮಾಡಲು ಈ ಫೀಚರ್ಸ್ ಅನ್ನು ಬಳಸಬಹುದು. ಬಳಕೆದಾರರು ಫೈಲ್ಗಳನ್ನು ಡಿಲೀಟ್ ಮಾಡಿದರೂ ಸಹ, ಕಣ್ಮರೆಯಾಗುವ ಮೊದಲು 60 ದಿನಗಳವರೆಗೆ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರಲಿದೆ. ಆರಂಭದಲ್ಲಿ ಆಂಡ್ರಾಯ್ಡ್ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾದ ಡಿಜಿಬಾಕ್ಸ್ ಈಗ ಆಪಲ್ ಆಪ್ ಸ್ಟೋರ್ನಲ್ಲೂ ಲಭ್ಯವಿದೆ. ಬಳಕೆದಾರರು ಚಿತ್ರಗಳು, ವೀಡಿಯೊಗಳು, ಡಾಕ್ಯುಮೆಂಟ್ಗಳನ್ನು ಸಂಗ್ರಹಿಸಲು ಸಹಾಯ ಮಾಡುವಂತಹ Gmail ಏಕೀಕರಣವನ್ನು ಸಹ ಅಪ್ಲಿಕೇಶನ್ ನೀಡುತ್ತದೆ.
This News Article is a Copy of GIZBOT
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm