ಬ್ರೇಕಿಂಗ್ ನ್ಯೂಸ್
19-01-21 04:44 pm Source: GIZBOT Manthesh ಡಿಜಿಟಲ್ ಟೆಕ್
ಪ್ರಸ್ತುತ ಇ -ಕಾಮರ್ಸ್ ಪ್ಲಾಟ್ಫಾರ್ಮ್ ಗಳು ಪ್ರಮುಖ ಆಫರ್ ಅಡ್ಡಾಗಳಾಗಿ ಗುರುತಿಸಿಕೊಂಡಿದ್ದು, ಗ್ರಾಹಕರಿಗೆ ಆನ್ಲೈನ್ ಶಾಪಿಂಗ್ ಮಾಡಲು ಸೆಳೆಯುತ್ತಿವೆ. ಅದರಲ್ಲಿಯೂ ವಿಶೇಷ ದಿನಗಳು, ತಿಂಗಳ ಕೊನೆ ದಿನಗಳಂದು ಇ-ಕಾಮರ್ಸ್ ತಾಣಗಳು ಹೆಚ್ಚಿನ ಕೊಡುಗೆ ನೀಡಲು ಮುಂದಾಗುತ್ತವೆ. ಇದೀಗ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಪ್ಲಾಟ್ಫಾರ್ಮ್ ಗಣರಾಜ್ಯೋತ್ಸವದ ಅಂಗವಾಗಿ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಸೇಲ್ ಮೇಳವನ್ನು ಘೋಷಿಸಿದೆ.
ಹೌದು, ಗಣರಾಜ್ಯೋತ್ಸವ ದಿನದ ಪ್ರಯುಕ್ತ ಅಮೆಜಾನ್ ತಾಣವು 'ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್' ಮೇಳವನ್ನು ಆಯೋಜಿಸಿದೆ. ಇದೇ ಜನೆವರಿ 20ರಿಂದ ಶುರುವಾಗುವ ಈ ಸೇಲ್ ವೇಳವು ಜನೆವರಿ 23ರಂದು ಮುಕ್ತಾಯವಾಗಲಿದೆ. ಅಮೆಜಾನ್ ಪ್ರೈಮ್ ಚಂದಾದಾರಿಗೆ ಜ.19ರ(ಇಂದು) ರಾತ್ರಿಯಿಂದ ಆಫರ್ ಲಭ್ಯವಾಗಲಿದೆ. ಈ ಮೇಳದಲ್ಲಿ ಅಮೆಜಾನ್ ಸ್ಮಾರ್ಟ್ಫೋನ್ಗಳಿಗೆ ವಿಶೇಷ ರಿಯಾಯಿತಿ ತಿಳಿಸಿದ್ದು, ಅದರೊಂದಿಗೆ ಆಯ್ದ ಬ್ಯಾಂಕ್ಗಳಿಂದ ಡಿಸ್ಕೌಂಟ್ ದೊರೆಯುತ್ತದೆ. ಹಾಗಾದರೆ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಮೇಳದಲ್ಲಿ ಬೆಸ್ಟ್ ಆಫರ್ ಪಡೆದಿರುವ ಸ್ಮಾರ್ಟ್ಫೋನ್ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ.
ಸ್ಯಾಮ್ಸಂಗ್ ಗ್ಯಾಲಕ್ಸಿ M31s
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ M31s ಸ್ಮಾರ್ಟ್ಫೋನಿಗೆ ವಿಶೇಷ ಡಿಸ್ಕೌಂಟ್ ತಿಳಿಸಲಾಗಿದೆ. ಈ ಸ್ಮಾರ್ಟ್ಫೋನ್ ಕ್ವಾಡ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ನಲ್ಲಿದೆ. ಸೇಲ್ನಲ್ಲಿ ಈ ಫೋನಿನ 6GB RAM + 128GB ಬೇಸ್ ವೇರಿಯಂಟ್ 17,999ರೂ.ಗಳಿಗೆ ಲಭ್ಯವಾಗಲಿದೆ.
ಐಫೋನ್ 12 ಮಿನಿ
ಆಪಲ್ ಕಂಪನಿಯ ಇತ್ತೀಚಿಗಿನ ಹೊಸ ಐಫೋನ್ 12 ಮಿನಿ ಸ್ಮಾರ್ಟ್ಫೋನ್ ಸಹ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನಲ್ಲಿ ಆಕರ್ಷಕ ರಿಯಾಯಿತಿ ಪಡೆದಿದೆ. ಈ ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್ನಲ್ಲಿವೆ. ಈ ಐಫೋನ್ ಆರಂಭಿಕ ವೇರಿಯಂಟ್ ಮಾಡೆಲ್ 59,990ರೂ.ಗಳಿಗೆ ಲಭ್ಯವಾಗಲಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ M21
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ M21 ಸ್ಮಾರ್ಟ್ಫೋನಿಗೆ ವಿಶೇಷ ಡಿಸ್ಕೌಂಟ್ ತಿಳಿಸಲಾಗಿದೆ. ಈ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ನಲ್ಲಿದೆ. ಸೇಲ್ನಲ್ಲಿ ಈ ಫೋನಿನ 4GB RAM + 64GB ಬೇಸ್ ವೇರಿಯಂಟ್ ಮಾಡೆಲ್ 12,499ರೂ.ಗಳಿಗೆ ಲಭ್ಯವಾಗಲಿದೆ.
ರೆಡ್ಮಿ ನೋಟ್ 9 ಪ್ರೊ
ಶಿಯೋಮಿಯ ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್ಫೋನ್ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ಫೋನ್ ನಾಲ್ಕು ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ನಲ್ಲಿದೆ. ಸೇಲ್ನಲ್ಲಿ ಈ ಫೋನಿನ ಬೇಸ್ ವೇರಿಯಂಟ್ ಮಾಡೆಲ್ 12,999ರೂ.ಗಳಿಗೆ ಲಭ್ಯವಾಗಲಿದೆ.
This News Article is a Copy of GIZBOT
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
29-04-25 12:40 pm
Mangalore Correspondent
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
Mangalore, Terror Attack, Doctor Post: ಹೈಲ್ಯಾ...
27-04-25 11:09 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm