ಬ್ರೇಕಿಂಗ್ ನ್ಯೂಸ್
15-04-23 08:13 pm Source: Vijayakarnataka ಡಿಜಿಟಲ್ ಟೆಕ್
ಅಸಾಧಾರಣ ಶಬ್ದ ರದ್ದತಿ ಮತ್ತು ಉನ್ನತ ದರ್ಜೆಯ ಧ್ವನಿ ಗುಣಮಟ್ಟಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಸೋನಿಯ ಜನಪ್ರಿಯ "Sony WH-1000XM5" ವೈರ್ಲೆಸ್ ಹೆಡ್ಫೋನ್ ಇದೀಗ ಮಿಡ್ನೈಟ್ ಬ್ಲೂ ಆವೃತ್ತಿಯಲ್ಲಿ ಮಾರುಕಟ್ಟೆಗೆ ಬಂದಿದೆ. Sony WH-1000XM5 ವೈರ್ಲೆಸ್ ಹೆಡ್ಫೋನ್ಗಳ ಅದ್ಭುತವಾದ ಮಿಡ್ನೈಟ್ ಬ್ಲೂ ಆವೃತ್ತಿಯನ್ನು ಹೊಂದುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಇದೇ ಏಪ್ರಿಲ್ 14, 2023 ರಿಂದ ನಿಮ್ಮ ಹೊಸ ಹೆಡ್ಫೋನ್ ಜೋಡಿಯನ್ನು ಪಡೆದುಕೊಳ್ಳಿ. ಶೈಲಿ ಮತ್ತು ಸುಸ್ಥಿರತೆಯೊಂದಿಗೆ ನಿಮ್ಮ ಆಲಿಸುವ ಅನುಭವವನ್ನು ಹೆಚ್ಚಿಸಿಕೊಳ್ಳಿ. ಮಿಡ್ನೈಟ್ ಬ್ಲ್ಯೂ ಬಣ್ಣದಲ್ಲಿ ಇರುವ WH-1000XM5, 2023ರ ಏಪ್ರಿಲ್ 14ರಿಂದ ಭಾರತದಲ್ಲಿ ಅಮೆಜಾನ್ ಡಾಟ್ ಇನ್ (Amazon.in) ನ್ಲೈನ್ ತಾಣದಲ್ಲಿ ಮಾತ್ರ ಲಭ್ಯವಿರಲಿದೆ ಎಂದು ಕಂಪೆನಿ ಪ್ರಕಟಣೆ ಹೊರಡಿಸಿದೆ.
2022ರಲ್ಲಿ ಸೋನಿ ತನ್ನ ‘ಡಬ್ಲ್ಯುಎಚ್–1000ಎಕ್ಸ್ಎಂ5’ (WH-1000XM5) ವೈರ್ಲೆಸ್ ಹೆಡ್ಫೋನ್ ಪರಿಚಯಿಸಿದ ದಿನದಿಂದಲೂ ಶ್ರೇಷ್ಠ ಧ್ವನಿ ಗುಣಮಟ್ಟ ಮತ್ತು ಹೆಡ್ಫೋನ್ ತಯಾರಿಕೆ ಉದ್ಯಮದಲ್ಲಿಯೇ ಮುಂಚೂಣಿಯಲ್ಲಿ ಇರುವ ಗದ್ದಲ / ಶಬ್ದ ನಿವಾರಿಸುವ ವೈಶಿಷ್ಟ್ಯಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವುದರ ಜೊತೆಗೆ ವಿಮರ್ಶಾತ್ಮಕ ಮೆಚ್ಚುಗೆಯನ್ನೂ ಪಡೆದಿವೆ. ಈಗ ಸೋನಿಯು, ಭಾರಿ ಜನಪ್ರಿಯವಾಗಿರುವ ತನ್ನ ಡಬ್ಲ್ಯುಎಚ್–1000 ಎಕ್ಸ್ಎಂ5 (WH-1000XM5) ಹೆಡ್ಫೋನ್ನಲ್ಲಿ ಹೊಸ ಅತ್ಯಾಕರ್ಷಕ ವಿನ್ಯಾಸದ ಮಿಡ್ನೈಟ್ ಬ್ಲ್ಯೂ ಬಣ್ಣದಲ್ಲಿ ಎಲ್ಲರೂ ಬಹುವಾಗಿ ಇಷ್ಟಪಡುವ ಹೊಸ ತಂತ್ರಜ್ಞಾನ ಪರಿಚಯಿಸಿದೆ. ಇದು ನಿಮ್ಮ ಆಲಿಸುವ ಅನುಭವವನ್ನು ಇನ್ನಷ್ಟು ವೈಯಕ್ತಿಕಗೊಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ ಎಂದು ಸೋನಿ ಕಂಪೆನಿಯು ಪ್ರಕಟಣೆಯಲ್ಲಿ ತಿಳಿಸಿದೆ.
Sony WH-1000XM5 ವೈಶಿಷ್ಟ್ಯಗಳು
ಸೋನಿ ಕಂಪೆನಿಯ ಜನಪ್ರಿಯ Sony WH-1000XM5 ಹೆಡ್ಫೋನ್ ಸುಧಾರಿತ ಧ್ವನಿ ಗುಣಮಟ್ಟ ಮತ್ತು ಸಕ್ರಿಯ ಶಬ್ದ ರದ್ದತಿ ಹೊಂದಿದೆ. ಈ ಹೆಡ್ಫೋನ್ಗಳು ಇಂಟಿಗ್ರೇಟೆಡ್ ಪ್ರೊಸೆಸರ್ V1 ನಿಂದ ಚಾಲಿತವಾಗಿದ್ದು, QN1 ಶಬ್ದ ರದ್ದುಗೊಳಿಸುವ ಪ್ರೊಸೆಸರ್ ಜೊತೆಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತವೆ. ಸಂಪರ್ಕಕ್ಕಾಗಿ, SBC, AAC ಮತ್ತು LDAC ಬ್ಲೂಟೂತ್ ಕೊಡೆಕ್ಗಳ ಜೊತೆಗೆ ಬ್ಲೂಟೂತ್ 5.2 ಬೆಂಬಲವಿದೆ. ಇದರ ಹೆಡ್ಫೋನ್ಗಳು 30mm ಡೈನಾಮಿಕ್ ಡ್ರೈವರ್ಗಳನ್ನು ಹೊಂದಿದ್ದು, 1000X ಲೈನ್ಅಪ್ನಲ್ಲಿನ ಹಿಂದಿನ ಹೆಡ್ಫೋನ್ಗಳಿಗಿಂತ ಹಗುರವಾದ ಮತ್ತು ಹೆಚ್ಚು ಆರಾಮದಾಯಕ ಸುಧಾರಿತ ವಿನ್ಯಾಸ ಹೊಂದಿದೆ. ANC ಮತ್ತು ಧ್ವನಿಗಾಗಿ ಹೆಡ್ಸೆಟ್ನಲ್ಲಿ ಎಂಟು ಮೈಕ್ರೊಫೋನ್ಗಳು ಮತ್ತು ಏಕಕಾಲದಲ್ಲಿ ಎರಡು ಸಾಧನಗಳಿಗೆ ಬಹು-ಪಾಯಿಂಟ್ ಸಂಪರ್ಕದಂತಹ ವೈಶಿಷ್ಟ್ಯಗಳಿವೆ.
ಹೊಸದಾಗಿ ಪರಿಚಯಿಸಿರುವ ಈ Sony WH-1000XM5 ಮಿಡ್ನೈಟ್ ಬ್ಲ್ಯೂ ಹೆಡ್ಫೋನ್ ಡಿವೈಸ್ ಸಾಧನವನ್ನು ಅತ್ಯಾಕರ್ಷಕ ರೀತಿಯಲ್ಲಿ ವಿನ್ಯಾಸಗೊಳಿಸಿರುವುದಲ್ಲದೇ ಪರಿಸರ ಸುಸ್ಥಿರತೆಯನ್ನೂ ಗಮನದಲ್ಲಿ ಇಟ್ಟುಕೊಂಡು ತಯಾರಿಸಲಾಗಿದೆ. ಇದರ ಪ್ಯಾಕೇಜಿಂಗ್ ವಸ್ತುಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿಲ್ಲ. ಸೋನಿ ಕಂಪನಿಯ ಉತ್ಪನ್ನಗಳು ಮತ್ತು ಪ್ರವೃತ್ತಿಗಳು, ಪರಿಸರದ ಮೇಲೆ ಬೀರುವ ಪರಿಣಾಮಗಳನ್ನು ಕಡಿಮೆ ಮಾಡುವ ಸೋನಿಯ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಸೋನಿ ಕಂಪೆನಿ ತಿಳಿಸಿದೆ.
sony wh-1000xm5 headphones now available in dazzling midnight blue check details.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm