ಬ್ರೇಕಿಂಗ್ ನ್ಯೂಸ್
14-04-23 09:16 pm Source: Vijayakarnataka ಡಿಜಿಟಲ್ ಟೆಕ್
ಪ್ರೀಮಿಯಂ ಗ್ಯಾಜೆಟ್ ಉತ್ಪನ್ನಗಳಿಗೆ ಹೆಸರಾದ ಜನಪ್ರಿಯ ಟೆಕ್ ಬ್ರ್ಯಾಂಡ್ ಜಬ್ರಾ (Jabra) ಭಾರತದ ಮಾರುಕಟ್ಟೆಗೆ ತನ್ನ ವಿನೂತನ "Jabra Elite 4" ಟ್ರೂಲಿ ವಾಯರ್ಲೆಸ್ ಇಯರ್ಬಡ್ ಡಿವೈಸ್ ಪರಿಚಯಿಸಿದೆ. ಬಜೆಟ್ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ ಇಯರ್ಬಡ್ ಡಿವೈಸ್ ಹುಡುಕುತ್ತಿರುವ ಗ್ರಾಹಕರಿಗಾಗಿ ಈ ಹೊಸ Jabra Elite 4 ಇಯರ್ಬಡ್ ಪರಿಚಯಿಸಲಾಗಿದ್ದು, ಈ ಡಿವೈಸ್ ಏಕಕಾಲದಲ್ಲಿ 6 ಬ್ಲೂಟೂತ್ ಡಿವೈಸ್ಗಳಿಗೆ ಕನೆಕ್ಟ್ ಮಾಡುವ ಸಾಮರ್ಥ್ಯ, 6 ಎಂಎಂ ಆಡಿಯೊ ಡ್ರೈವರ್ಗಳು, ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್, ಫಾಸ್ಟ್ ಪೇರ್ ಕನೆಕ್ಟಿವಿಟಿ ಮತ್ತು 28 ಗಂಟೆಗಳ ಪ್ಲೇ ಬ್ಯಾಕ್ ಟೈಂ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗಾದರೆ, ಹೊಸ Jabra Elite 4 ಇಯರ್ಬಡ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
Jabra Elite 4 ಇಯರ್ಬಡ್ ಡಿವೈಸ್ ವೈಶಿಷ್ಟ್ಯಗಳು.
ನೂತನ Jabra Elite 4 ಇಯರ್ಬಡ್ ಡಿವೈಸ್ ಆಕರ್ಷಕ ವಿನ್ಯಾಸದ ಚಾರ್ಜಿಂಗ್ ಕೇಸ್ ಹಾಗೂ ಹಗುರವಾದ ಇಯರ್ಬಡ್ಗಳೊಂದಿಗೆ ಕೇವಲ 33.4gm ತೂಕ ಹೊಂದಿದೆ. ಇದರಲ್ಲಿನ ಪ್ರತಿ ಇಯರ್ಬಡ್ಗಳು 4.6gm ತೂಕದಲ್ಲಿ ಕಿವಿಗೆ ಸರಿಯಾಗಿ ಗಾತ್ರ ಹೊಂದಿಸುವಂತಹ ಸಿಲಿಕಾನ್ ಇಯರ್ಜೆಲ್ಗಳೊಂದಿಗೆ ಬಂದಿವೆ. ಮೂರು ಗಾತ್ರಗಳಲ್ಲಿ ಪರಸ್ಪರ ಬದಲಾಯಿಸಬಹುದಾದ ಸಣ್ಣ, ಮಧ್ಯಮ ಮತ್ತು ದೊಡ್ಡದಾದ ಮಾದರಿಯಲ್ಲಿ ಎಲ್ಲಾ ಕಿವಿ ಗಾತ್ರಗಳಿಗೆ ಆರಾಮವಾಗಿ ಹೊಂದಿಕೊಳ್ಳುತ್ತದೆ. ಆರಾಮದಾಯಕ ಫಿಟ್ಗಾಗಿ ಇಯರ್ ಪ್ರೆಶರ್ ರಿಲೀಫ್ ವೈಶಿಷ್ಟ್ಯವು ಸಹ ಇದೆ. ಈ ಇಯರ್ಬಡ್ IP55 ರೇಟಿಂಗ್ ಹೊಂದಿದ್ದು, ಮಳೆ ಅಥವಾ ಬೆವರಿನ ಬಗ್ಗೆ ಚಿಂತಿಸದೆ ಕೆಲಸ ಮಾಡಬಹುದು ಮತ್ತು ಅವರೊಂದಿಗೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಕಂಪೆನಿ ತಿಳಿಸಿದೆ.
Jabra Elite 4 ಇಯರ್ಬಡ್ ಡಿವೈಸ್ ಇಯರ್ಬಡ್ಗಳು 6 ಎಂಎಂ ಆಡಿಯೊ ಡ್ರೈವರ್ಗಳನ್ನು ಹೊಂದಿದೆ. ಸುಧಾರಿತ ಕರೆ ಸ್ಪಷ್ಟತೆ ನೀಡಲು 4 ಮೈಕ್ರೊಫೋನ್ ನೀಡಲಾಗಿದ್ದು, ಇದರಲ್ಲಿ ಮೈಕ್ರೊಫೋನ್ಗಳು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಸಕ್ರಿಯವಾಗಿದೆ. ಬ್ಲೂಟೂತ್ 5.2 ಸಂಪರ್ಕದಿಂದ ಕಾರ್ಯನಿರ್ವಹಿಸಲಿರುವ ಈ ಡಿವೈಸ್ ಏಕಕಾಲದಲ್ಲಿ 6 ಬ್ಲೂಟೂತ್ ಡಿವೈಸ್ಗಳಿಗೆ ಕನೆಕ್ಟ್ ಆಗಲಿದೆ. ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ನೊಂದಿಗೆ ಜೊತೆಗೆ ವೇಗವಾಗಿ ಕನೆಕ್ಟ್ ಮಾಡುವುದಕ್ಕಾಗಿ ಫಾಸ್ಟ್ ಪೇರ್ ಕನೆಕ್ಟಿವಿಟಿ ಫೀಚರ್, ಗೂಗಲ್ ಅಸಿಸ್ಟೆಂಟ್ ಬೆಂಬಲ, ಸಿಂಗಲ್ ಚಾರ್ಜ್ನಲ್ಲಿ ANC ಆಪ್ ಆಗಿರುವಾಗ 28 ಗಂಟೆಗಳ ಪ್ಲೇ ಬ್ಯಾಕ್ ಟೈಂ ,ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಆನ್ ಮಾಡಿದಾಗ 22 ಗಂಟೆಗಳ ಪ್ಲೇಬ್ಯಾಕ್ ಟೈಂ ಮತ್ತು ಕ್ವಾಲ್ಕಾಮ್ ಆಪ್ಟಿಕ್ಸ್ ಬೆಂಬಲವನ್ನು ಸಹ ನೀಡಲಾಗಿದೆ.
Jabra Elite 4 ಇಯರ್ಬಡ್ ಬೆಲೆ ಎಷ್ಟು?
ಇಷ್ಟೆಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ Jabra Elite 4 ಇಯರ್ಬಡ್ ಡಿವೈಸ್ ದೇಶದಲ್ಲಿ 9,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದೆ. ಇಂದಿನಿಂದ (ಏಪ್ರಿಲ್ 14 ರಿಂದ) ಮೊದಲ ಮಾರಾಟಕ್ಕೆ ಬರುತ್ತಿರುವ ಈ ಇಯರ್ಬಡ್ ಡಿವೈಸ್ ಅನ್ನು ನೀವು ಅಮೆಜಾನ್, ಫ್ಲಿಪ್ಕಾರ್ಟ್, ಕ್ರೋಮಾ, ರಿಲಯನ್ಸ್ ಮತ್ತು ಜಬ್ರಾ ಅಧಿಕೃತ ಸ್ಟೋರ್ಗಳಲ್ಲಿ ಡಾರ್ಕ್ ಗ್ರೇ, ನೇವಿ, ಲಿಲಾಕ್ ಮತ್ತು ಲೈಟ್ ಬೀಜ್ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದು.
jabra elite 4 tws earbuds launched in india price, specifications.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm