ಬ್ರೇಕಿಂಗ್ ನ್ಯೂಸ್
12-04-23 06:56 pm Source: Vijayakarnataka ಡಿಜಿಟಲ್ ಟೆಕ್
ಕಳೆದ ಕೆಲವು ವಾರಗಳಿಂದ ಭಾರತೀಯ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ ವಿನೂತನ "Realme Narzo N55" ಸ್ಮಾರ್ಟ್ಫೋನ್ ಇಂದು ದೇಶದ ಮಾರುಕಟ್ಟೆಗೆ ಭರ್ಜರಿಯಾಗಿ ಬಿಡುಗಡೆಯಾಗಿದೆ. Realme ಕಂಪೆನಿಯ Realme N-ಸರಣಿಯಲ್ಲಿ ದೇಶದಲ್ಲಿ ಮೊದಲ ಡಿವೈಸ್ ಆಗಿ ಈ ನೂತನ Realme Narzo N55 ಸ್ಮಾರ್ಟ್ಫೋನನ್ನು ಪರಿಚಯಿಸಲಾಗಿದ್ದು, ಇದು 6.72-ಇಂಚಿನ IPS LCD ಫುಲ್ HD+ ಡಿಸ್ಪ್ಲೇ, 64-ಮೆಗಾಪಿಕ್ಸೆಲ್ AI ಕ್ಯಾಮೆರಾ ಮತ್ತು 33W ಶಕ್ತಿಯ Supervooc ಫಾಸ್ಟ್ ಚಾರ್ಜಿಂಗ್ನಂತಹ ವೈಶಿಷ್ಟ್ಯಗಳಲ್ಲಿ ಮತ್ತು ಉತ್ತಮ ಬೆಲೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ನೂತನ Realme Narzo N55 ಸ್ಮಾರ್ಟ್ಫೋನ್ ಹೇಗಿದೆ ಮತ್ತು ಈ ಸ್ಮಾರ್ಟ್ಫೋನ್ ಬೆಲೆಗಳು ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
ಹೊಸದಾಗಿ ಬಿಡುಗಡೆಯಾಗಿರುವ Realme Narzo N55 ಸ್ಮಾರ್ಟ್ಫೋನ್ 90Hz ರಿಫ್ರೆಶ್ ರೇಟ್ ಸಾಮರ್ಥ್ಯವಿರುವ 6.72-ಇಂಚಿನ IPS LCD ಫುಲ್ HD+ ರೆಸಲ್ಯೂಶನ್ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ಮಿನಿ ಕ್ಯಾಪ್ಸುಲ್ ವೈಶಿಷ್ಟ್ಯವು ಸಹ ಇದ್ದು, ಪಂಚ್-ಹೋಲ್ ಕಟೌಟ್ ಸುತ್ತಲೂ ಇರುವ ಇದು ಚಾರ್ಜಿಂಗ್, ಡೇಟಾ ಬಳಕೆ ಮತ್ತು ಇನ್ನಿತರ ಅಧಿಸೂಚನೆಗಳನ್ನು ನೀಡುತ್ತದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, 6GB LPDDR4X RAM ಮತ್ತು 128GB UFS 2.2 ಸ್ಟೋರೇಜ್ ಜೊತೆಗೆ ಸಂಯೋಜಿಸಲಾಗಿರುವ MediaTek Helio G88 SoC ಪ್ರೊಸೆಸರ್ ಹೊಂದಿರುವ ಈ Realme Narzo N55 ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ಆಧಾರಿತ Realme UI ಔಟ್-ಆಫ್-ದಿ-ಬಾಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕ್ಯಾಮೆರಾ ವಿಭಾಗದಲ್ಲಿ, Realme Narzo N55 ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು 64-ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ಗಳನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಡಿಸ್ಪ್ಲೇಯ ಮೇಲ್ಭಾಗದಲ್ಲಿ ಕೇಂದ್ರೀಕೃತ ಪಂಚ್-ಹೋಲ್ ಕಟೌಟ್ ನಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮೆರಾ ನಿಡಲಾಗಿದೆ. ಇನ್ನುಳಿದಂತೆ, 33W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ, ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್, 4G ಸಂಪರ್ಕ, ಯುಎಸ್ಬಿ ಟೈಪ್-ಸಿ ಪೋರ್ಟ್, 200% ಅಲ್ಟ್ರಾ ಬೂಮ್ ಸ್ಪೀಕರ್ ಮತ್ತು 1TB ವರೆಗೆ ಬಾಹ್ಯ ಮೆಮೊರಿ ವಿಸ್ತರಣೆಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.

Realme Narzo N55 ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ
ದೇಶದಲ್ಲಿ Realme Narzo N55 ಸ್ಮಾರ್ಟ್ಫೋನ್ 4GB + 64GB ಮತ್ತು 6GB + 128GB ಎರಡು ಮಾದರಿಗಳಲ್ಲಿ ಕ್ರಮವಾಗಿ 10,999 ರೂ. ಮತ್ತು 12,999 ರೂ. ಬೆಲೆಗಳಲ್ಲಿ ಬಿಡುಗಡೆಯಾಗಿದೆ. ಪ್ರೈಮ್ ಬ್ಲೂ ಮತ್ತು ಪ್ರೈಮ್ ಬ್ಲಾಕ್ ಎರಡು ಬಣ್ಣಗಳಲ್ಲಿ ಪರಿಚಯವಾಗಿರುವ ಈ Realme Narzo N55 ಸ್ಮಾರ್ಟ್ಫೋನ್ ಇದೇ ಏಪ್ರಿಲ್ 13 ರಂದು ಮಧ್ಯಾಹ್ನ 12 ಗಂಟೆಗೆ ಮೊದಲ ಬಾರಿಗೆ ವಿಶೇಷ ಮಾರಾಟಕ್ಕೆ ಬರುತ್ತಿದ್ದು, ಗ್ರಾಹಕರು Realme ಮತ್ತು Amazon ವೆಬ್ಸೈಟ್ಗಳಲ್ಲಿ 1,000 ರಿಯಾಯಿತಿಯೊಂದಿಗೆ ಖರೀದಿಸಲು ಸಾಧ್ಯವಿದೆ.
realme narzo n55 phone launched in india price starts at rs 10,999.
14-03-26 10:14 pm
HK News Staffer
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
ಮಂತ್ರಾಲಯದಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿ...
13-03-26 09:44 am
ಮಗಳಿಗೆ ಮದುವೆಯಾಗದ ಚಿಂತೆಯಲ್ಲಿ ಆಟೋ ಚಾಲಕ ಆತ್ಮಹತ್ಯ...
12-03-26 02:48 pm
13 ವರ್ಷಗಳಿಂದ ಜೀವನ್ಮರಣ ಹೋರಾಟ ; ಕೋಮಾದಲ್ಲಿದ್ದ ಯು...
11-03-26 07:16 pm
15-03-26 01:08 pm
HK News Desk
ಗಲ್ಫ್ ಯುದ್ಧ ನಡುವಲ್ಲೇ ಮಿಸೈಲ್ ಉಡಾಯಿಸಿದ ಉತ್ತರ ಕೊ...
14-03-26 10:31 pm
ವಿಮಾನ ಪ್ರಯಾಣಿಕರಿಗೂ ತಟ್ಟಿದ ಇರಾನ್–ಇಸ್ರೇಲ್ ಯುದ್ಧ...
14-03-26 07:38 pm
ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಅಲಿ ಖಮೇನಿ ಬಗ್ಗೆ...
14-03-26 12:51 pm
ಅಮೆರಿಕಾ ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಖಮೇನಿಗೂ ಪೆಟ...
13-03-26 04:18 pm
14-03-26 09:26 pm
HK News Desk
ಕಂದಾಯ- ಅರಣ್ಯ ಭೂಮಿ ಗುರುತಿಸಲು ಜಿಲ್ಲಾ ಮಟ್ಟದಲ್ಲಿ...
14-03-26 08:31 pm
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬಂಟ್ವಾಳದ ಯುವ ಛಾಯಾ...
14-03-26 06:07 pm
‘ಕ್ರಿಶ್ಚಿಯನ್ ಯುವಕ’ನಿಂದ ದೈವ ನರ್ತನ ಸೇವೆ ; ಪಂಬದ...
14-03-26 05:19 pm
ಮಾರ್ಚ್ 16ರಿಂದ 28ರ ವರೆಗೆ ಮಂಗಳೂರಿನಿಂದ ಶಾರ್ಜಾಕ್ಕ...
13-03-26 10:04 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am