ಬ್ರೇಕಿಂಗ್ ನ್ಯೂಸ್
05-04-23 06:54 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಇಯರ್ಬಡ್ಗಳಲ್ಲಿ ಒಂದಾದ OnePlus Nord Buds ಉತ್ತರಾಧಿಕಾರಿಯಾಗಿ ವಿನೂತನ OnePlus Nord Buds 2 ಇಯರ್ಬಡ್ ದೇಶದಲ್ಲಿ ಇದೀಗ ಬಿಡುಗಡೆಯಾಗಿದೆ. ಮಂಗಳವಾರ (ಏಪ್ರಿಲ್ 4) ಸಂಜೆ OnePlus ಆಯೋಜಿಸಿದ್ದ ಸರಳ ಸಮಾರಂಭದಲ್ಲಿ OnePlus Nord CE 2 Lite 5G ಸ್ಮಾರ್ಟ್ಫೋನಿನ ಜೊತೆಗೆ ಈ OnePlus Nord Buds 2 ಇಯರ್ಬಡ್ ಕೂಡ ಬಿಡುಗಡೆಗೊಂಡಿದ್ದು, ಇದು ಸಕ್ರಿಯ ಶಬ್ದ ರದ್ದತಿ, ಸಂಪರ್ಕ, ಬ್ಯಾಟರಿ ಬಾಳಿಕೆ ಮತ್ತು ಇಯರ್ಪೀಸ್ಗಳ ವಿನ್ಯಾಸ ಮತ್ತು ಚಾರ್ಜಿಂಗ್ ಕೇಸ್ನಲ್ಲಿ ಸುಧಾರಣೆ ಸೇರಿದಂತೆ ಹಲವಾರು ಪ್ರಮುಖ ಬದಲಾವಣೆಗಳನ್ನು ಹೊತ್ತು ಬಂದಿದೆ. ಹಾಗಾದರೆ, ನೂತನ OnePlus Nord Buds 2 ಇಯರ್ಬಡ್ ಹೇಗಿದೆ ಮತ್ತು ಈ ಹೊಸ ಡಿವೈಸ್ ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
OnePlus Nord Buds 2 ಇಯರ್ಬಡ್ ವೈಶಿಷ್ಟ್ಯಗಳು.
ನೂತನ OnePlus Nord Buds 2 ಇಯರ್ಫೋನ್ಗಳು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP55 ರೇಟ್ ಮತ್ತು ಮೂಲ Nord Buds ನಂತೆಯೇ ವಿನ್ಯಾಸವನ್ನು ಸಹ ಹೊಂದಿವೆ. ಆದರೆ, ಇದರೆ ಇದರಲ್ಲಿರುವ ಶಕ್ತಿಯುತ 12.4mm ಡೈನಾಮಿಕ್ ಡ್ರೈವರ್ಗಳ ಇಯರ್ಫೀಸ್ಗಳಲ್ಲಿ ಕಸ್ಟಮೈಸ್ ಮಾಡಬಹುದಾದ ಟಚ್ ಕಂಟ್ರೋಲ್ಗಳಲ್ಲಿ ಹೆಚ್ಚು ಸುಧಾರಣೆ ತರಲಾಗಿದೆ ಎಂದು ಕಂಪೆನಿ ತಿಳಿಸಿದೆ. ಈ ಡಿವೈಸ್ನಲ್ಲಿ ಈಕ್ವಲೈಜರ್ ಸೆಟ್ಟಿಂಗ್ಗಳು ಮತ್ತು ಕಡಿಮೆ ಲೇಟೆನ್ಸಿ ಗೇಮ್ ಮೋಡ್ ಗ್ರಾಹಕೀಕರಣ ಆಯ್ಕೆಗಳನ್ನು HeyMelody ಅಪ್ಲಿಕೇಶನ್ ಮೂಲಕ ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗಿದೆ. ಇನ್ನು ಇಯರ್ಬಡ್ಸ್ ಇನ್-ಕೆನಾಲ್ ಇಯರ್ಫೋನ್ಗಳನ್ನು ಧರಿಸಿದಾಗ ಆಂಬಿಯೆಂಟ್ ಆಲಿಸುವಿಕೆಗೆ ಸಹಾಯ ಮಾಡುವುದಕ್ಕಾಗಿ ಇಯರ್-ಥ್ರೋ ಮೋಡ್ ಸಹ ನೀಡಲಾಗಿದೆ.
ಈ ಹೊಸ OnePlus Nord Buds 2 ಡಿವೈಸ್ ಬ್ಯಾಟರಿ ಬಾಳಿಕೆ, ಸಂಪರ್ಕ ಮತ್ತು ಧ್ವನಿ ಗುಣಮಟ್ಟದಲ್ಲಿ ಸುಧಾರಣೆಗಳ ಭರವಸೆ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಕನೆಕ್ಟಿವಿಟಿ ಮತ್ತು ಸೌಂಡ್ ಸಿಸ್ಟಂನಲ್ಲಿಯೂ ಸಹ ಸಾಕಷ್ಟು ಸುಧಾರಿತ ಫೀಚರ್ಸ್ ತರಲಾಗಿದ್ದು, ಈ ಈ ಇಯರ್ಬಡ್ SBC ಮತ್ತು AAC ಬ್ಲೂಟೂತ್ ಕೊಡೆಕ್ಗಳಿಗೆ ಬೆಂಬಲಿಸಲಿದೆ ಮತ್ತು ಇದಕ್ಕಾಗಿ ಬ್ಲೂಟೂತ್ 5.3 ಸಂಪರ್ಕವನ್ನು ಬಳಸುತ್ತದೆ. ಇತರ ಸಂಪರ್ಕ ವೈಶಿಷ್ಟ್ಯಗಳಲ್ಲಿ, OnePlus ಫಾಸ್ಟ್ ಪೇರ್ಗೆ ಬೆಂಬಲ, ಚಾರ್ಜಿಂಗ್ಗಾಗಿ, ಮರುವಿನ್ಯಾಸಗೊಳಿಸಲಾದ ಚಾರ್ಜಿಂಗ್ ಕೇಸ್ನಲ್ಲಿ USB ಟೈಪ್-ಸಿ ಪೋರ್ಟ್ ಮತ್ತು ಆಯ್ದ OnePlus ಸ್ಮಾರ್ಟ್ಫೋನ್ಗಳಲ್ಲಿ Dolby Atmos ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ಇದರಲ್ಲಿ ಆಕ್ಟೀವ್ ನಾಯ್ಸ್ ಕ್ಯಾನ್ಸಲೇಶನ್ (ANC) ವೈಶಿಷ್ಟ್ಯವು ಸಹ ಇದ್ದು, ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ.
OnePlus Nord Buds 2 ಇಯರ್ಬಡ್ ಬೆಲೆ ಎಷ್ಟು?
ಭಾರತದಲ್ಲಿ OnePlus Nord Buds 2 ಇಯರ್ಬಡ್ 2,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದೆ.. ಇನ್ನು ಇದೇ ಏಪ್ರಿಲ್ 11 ರಂದು ದೇಶದಲ್ಲಿ ಮಾರಾಟಕ್ಕೆ ಬರಲಿರುವ ಈ ಡಿವೈಸ್ ಬಿಳಿ ಮತ್ತು ಬೂದು ಎರಡು ಬಣ್ಣ ಆಯ್ಕಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ಒನ್ಪ್ಲಸ್ ಆನ್ಲೈನ್ ಸ್ಟೋರ್, ಅಮೆಜಾನ್, ಫ್ಲಿಪ್ಕಾರ್ಟ್, Myntra, ಒನ್ಪ್ಲಸ್ ಎಕ್ಸ್ಪೀರಿಯೆನ್ಸ್ ಸ್ಟೋರ್ಗಳು ಮತ್ತು ಆಯ್ದ ಪಾಲುದಾರ ಸ್ಟೋರ್ಗಳ ಮೂಲಕ ಸಾಧನವನ್ನು ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ. ಗಮನಸುವುದಾದರೆ, ಈ ಹೊಸ OnePlus Nord Buds 2 ಇಯರ್ಬಡ್ ಡಿವೈಸ್ ಕಳೆದ ಫೆಬ್ರವರಿಯಲ್ಲಿ ಚೀನಾದಲ್ಲಿ ಬಿಡುಗಡೆಯಾದ ಒನ್ಪ್ಲಸ್ ಬಡ್ಸ್ ಏಸ್ ಹೆಡ್ಸೆಟ್ನ ಮರುಹೆಸರಿಸಿದ ಮತ್ತು ಸ್ಥಳೀಯ ಆವೃತ್ತಿಯಾಗಿ ದೇಶದ ಮಾರುಕಟ್ಟೆಗೆ ಕಾಲಿಟ್ಟಿದೆ.
oneplus nord buds 2 with bluetooth 5.3 launched in india.
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
29-04-25 12:40 pm
Mangalore Correspondent
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
Mangalore, Terror Attack, Doctor Post: ಹೈಲ್ಯಾ...
27-04-25 11:09 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm