ಬ್ರೇಕಿಂಗ್ ನ್ಯೂಸ್
31-03-23 07:43 pm Source: Vijayakarnataka ಡಿಜಿಟಲ್ ಟೆಕ್
ಲ್ಯಾಪ್ಟಾಪ್ ತಯಾರಿಕೆಯಲ್ಲಿ ಹೆಸರಾಂತ ಟೆಕ್ ಬ್ರ್ಯಾಂಡ್ Acer ದೇಶದಲ್ಲಿಂದು ಎರಡು ವಿನೂತನ 4K ಆಂಡ್ರಾಯ್ಡ್ QLED ಸ್ಮಾರ್ಟ್ಟಿವಿಗಳನ್ನು ಬಿಡುಗಡೆಗೊಳಿಸಿದೆ. Acer ಕಂಪೆನಿಯ ಜನಪ್ರಿಯ Acer W ಸರಣಿಯಲ್ಲಿ 55 ಮತ್ತು 65 ಇಂಚಿನ ಎರಡು ಮಾದರಿಗಳಲ್ಲಿ ಈ ಎರಡೂ 4K ಆಂಡ್ರಾಯ್ಡ್ QLED ಸ್ಮಾರ್ಟ್ಟಿವಿಗಳನ್ನು ಪರಿಚಯಿಸಲಾಗಿದ್ದು, ಈ ಎರಡೂ ಸ್ಮಾರ್ಟ್ಟಿವಿಗಳು ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ ಅದ್ಭುತ ಚಿತ್ರ ಗುಣಮಟ್ಟವನ್ನು ನೀಡುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾದರೆ, Acer W ಸರಣಿಯಲ್ಲಿ ಪರಿಚಯಿಸಲಾಗಿರುವ ನೂತನ Acer W ಸರಣಿ ಸ್ಮಾರ್ಟ್ಟಿವಿಗಳು ಹೇಗಿವೆ ಮತ್ತು ಇವುಗಳ ಬೆಲೆಗಳು ಎಷ್ಟು ಎಂಬ ಎಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
Acer ಪರಿಚಯಿಸಿರುವ Acer W ಸರಣಿಯ ಎರಡೂ ಮಾದರಿ ಸ್ಮಾರ್ಟ್ಟಿವಿಗಳು ಪೂರ್ಣ-ಚಲನೆಯ ಸ್ಲಿಮ್ ವಾಲ್ ಮೌಂಟ್ನೊಂದಿಗೆ ಬಂದಿವೆ. ಪ್ರೀಮಿಯಂ ನೋಟವನ್ನು ನೀಡುವಂತಹ ಸೊಗಸಾದ ಫ್ರೇಮ್ಲೆಸ್, ಎಡ್ಜ್-ಟು-ಎಡ್ಜ್ ಡಿಸ್ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್ಟಿವಿಗಳು ಆಂಟಿ-ಗ್ಲೇರ್ ಡಿಸ್ಪ್ಲೇ ಮತ್ತು 95% DCI-P3 ಬಣ್ಣದ ಗ್ಯಾಮಟ್ನೊಂದಿಗೆ ಬರುತ್ತದೆ, ಇದು ವ್ಯಾಪಕ ಶ್ರೇಣಿಯ ಬಣ್ಣಗಳನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ನಾವು ಮೊದಲೇ ಹೇಳಿದಂತೆ, ಈ ಸ್ಮಾರ್ಟ್ಟಿವಿಗಳು ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ 4K ಅಲ್ಟ್ರಾ ಎಚ್ಡಿ ರೆಸಲ್ಯೂಶನ್ ಹೊಂದಿದ್ದು, ಇದು ಅದ್ಭುತವಾದ ದೃಶ್ಯಗಳನ್ನು ನೀಡುವಂತಹ ಇತ್ತೀಚಿನ ತಂತ್ರಜ್ಞಾನವಾಗಿದೆ.
![]()
ಕಾರ್ಯನಿರ್ವಹಣೆ ವಿಭಾಗದಲ್ಲಿ, 2GB RAM ಮತ್ತು 16GB ಸ್ಟೋರೇಜ್ನೊಮದಿಗೆ 64 ಬಿಟ್ ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್ಟಿವಿಗಳು ಆಂಡ್ರಾಯ್ಡ್ TV 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಪ್ರಮಾಣೀಕೃತ ಆಂಡ್ರಾಯ್ಡ್ ಟಿವಿ 11 ಜೊತೆಗೆ ಗೂಗಲ್ ಅಪ್ಲಿಕೇಶನ್ಗಳು, ಫಾರ್ ಫೀಲ್ಡ್ ಮೈಕ್, ಮೋಷನ್ ಸೆನ್ಸರ್ ಮತ್ತು ಧ್ವನಿ-ನಿಯಂತ್ರಿತ ಸ್ಮಾರ್ಟ್ ರಿಮೋಟ್ ಸಹ ಒಳಗೊಂಡಿವೆ. ಟಿವಿ ರಿಮೋಟ್ ಅಂತರ್ನಿರ್ಮಿತ ಗೂಗಲ್ ಅಸಿಸ್ಟೆಂಟ್ ವೈಶಿಷ್ಟ್ಯವನ್ನು ಹೊಂದಿದ್ದು, ಇದು ಬಳಕೆದಾರರಿಗೆ ತಮ್ಮ ಧ್ವನಿಯ ಮೂಲಕ ಟಿವಿಯನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ, ಇದು ವಿಷಯವನ್ನು ಹುಡುಕಲು ಮತ್ತು ಟಿವಿಯನ್ನು ನಿರ್ವಹಿಸಲು ಸುಲಭವಾಗುತ್ತದೆ ಎನ್ನಲಾಗಿದೆ.

AcerW ಸರಣಿಯ ಸ್ಮಾರ್ಟ್ಟಿವಿಗಳು HDMI, USB, ಮತ್ತು ಈಥರ್ನೆಟ್ ಪೋರ್ಟ್ಗಳು ಸೇರಿದಂತೆ ಹಲವಾರು ಸಂಪರ್ಕ ಆಯ್ಕೆಗಳನ್ನು ಸಹ ನೀಡುತ್ತದೆ. ಟಿವಿಯು ಅಂತರ್ನಿರ್ಮಿತ Wi-Fi ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ಬರುತ್ತದೆ, ಇದು ಬಳಕೆದಾರರು ತಮ್ಮ ಸಾಧನಗಳನ್ನು ಟಿವಿಗೆ ವೈರ್ಲೆಸ್ ಆಗಿ ಸುಲಭವಾಗಿ ಸಂಪರ್ಕಿಸಲು ಸುಲಭಗೊಳಿಸುತ್ತದೆ. ಇನ್ನು ಈ ಸ್ಮಾರ್ಟ್ಟಿವಿಗಳು 30W ಆರಲ್ ಸೌಂಡ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಪ್ರಭಾವಶಾಲಿ ಧ್ವನಿ ಗುಣಮಟ್ಟವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ, ಈ ಸ್ಮಾರ್ಟ್ಟಿವಿಗಳಲ್ಲಿರುವ MEMC ಮತ್ತು ALLM ವೈಶಿಷ್ಟ್ಯಗಳು ಸುಗಮ ಮತ್ತು ತಡೆರಹಿತ ಪ್ಲೇಬ್ಯಾಕ್ ಒದಗಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
Acer W ಸ್ಮಾರ್ಟ್ಟಿವಿಗಳ ಬೆಲೆ ಮತ್ತು ಲಭ್ಯತೆ.
ಭಾರತದಲ್ಲಿ Acer W ಸರಣಿಯಲ್ಲಿನ 55 ಮತ್ತು 65 ಇಂಚಿನ ಎರಡು ಮಾದರಿಗಳು ಕ್ರಮವಾಗಿ 69,999 ರೂ. ಮತ್ತು 89,999ರೂ. ಬೆಲೆಯಲ್ಲಿ ಬಿಡುಗಡೆಯಾಗಿವೆ. Acer ಕಂಪೆನಿಯ ಅಧಿಕೃತ ವೆಬ್ಸೈಟ್ ಮತ್ತು ಫ್ಲಿಪ್ಕಾರ್ಟ್ ಮತ್ತು ಅಮೆಜಾನ್.ಇನ್ ನಂತಹ ವಿವಿಧ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕ ಮಾರಾಟಕ್ಕೆ ಬರಲಿರುವ ಈ ಎರಡೂ ಮಾದರಿಯ ಸ್ಮಾರ್ಟ್ಟಿಟಿಗಳ ಮೇಲೆ ಯಾವುದೇ ವೆಚ್ಚವಿಲ್ಲದ EMI ಮತ್ತು ಕ್ಯಾಶ್ಬ್ಯಾಕ್ ಕೊಡುಗೆಗಳನ್ನು ಲಭ್ಯವಿರಲಿವೆ ಎಂದು ಕಂಪೆನಿ ತಿಳಿಸಿದೆ.
acer launches 55 and 65 w series 4k android qled tvs in india .
27-10-26 01:23 pm
HK News Desk
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
ಸ್ಟಿಂಗ್ ಆಪರೇಶನ್ ; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಗೆ...
24-10-26 05:35 pm
Parvez dharwad: 40 ದಿನಗಳ ನಿಗೂಢತೆ ಅಂತ್ಯ ; ಡೆತ್...
24-10-26 12:22 pm
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
27-10-26 03:35 pm
HK News Staffer
Mangalore Man Missing, Israel: ಉದ್ಯೋಗಕ್ಕಾಗಿ ಇ...
27-10-26 01:53 pm
ಸೌಜನ್ಯ ಪ್ರಕರಣದ ಎಸ್ಐಟಿ ಮುಖ್ಯಸ್ಥರ ಬದಲಾವಣೆಗೆ ಪಟ್...
26-10-26 03:41 pm
ನವರಾತ್ರಿಗೆ ಯಕ್ಷವೇಷ ಧರಿಸಿ ಗಳಿಸಿದ 2 ಲಕ್ಷ ದೇಣಿಗೆ...
25-10-26 10:26 pm
ಸ್ಟಿಂಗ್ ರಾಜಕೀಯ, ಸಿಎಂ ಬದಲಾವಣೆ ಕಾಂಗ್ರೆಸಿಗೆ ಹಿನ್...
25-10-26 08:25 pm
27-10-26 05:22 pm
HK News Staffer
ಸುರತ್ಕಲ್ ಬೀಚ್ ಬಳಿ ಕುಡಿದ ಮತ್ತಿನಲ್ಲಿ ಜಗಳ ; ಕೇಸು...
27-10-26 03:01 pm
ಬಸ್ ಡಿಕ್ಕಿಯಾಗಿ ಯುವಕ ದೂರಕ್ಕೆಸೆಯಲ್ಪಟ್ಟರೂ ಚಾಲಕನ...
26-10-26 09:22 pm
ಸಿಎಂ ಡಿಕೆಶಿ ಬಗ್ಗೆ ಲಘು ಹೇಳಿಕೆ ; ನಟ ಧನ್ವೀರ್ ವಿರ...
26-10-26 02:59 pm
Gurudas Shenoy: ಕೋಟದಲ್ಲಿ ಭೀಕರ ಅಪಘಾತ ; ಸೈಕಲ್ ನ...
26-10-26 12:49 pm