ಬ್ರೇಕಿಂಗ್ ನ್ಯೂಸ್
17-03-23 07:09 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್ಟಿವಿಗಳನ್ನು ಮಾರಾಟ ಮಾಡುತ್ತಿರುವ ಜನಪ್ರಿಯ ಟೆಕ್ ಬ್ರ್ಯಾಂಡ್ Xiaomi ದೇಶದಲ್ಲಿ ತನ್ನ ವಿನೂತನ Redmi Smart Fire TV 32 ಸ್ಮಾರ್ಟ್ಟಿವಿಯನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಅನಾವರಣಗೊಳಿಸಿದೆ. ದೇಶದಲ್ಲಿ Xiaomi ಕಂಪೆನಿಯ ಆಂಡ್ರಾಯ್ಡ್-ಅಲ್ಲದ ಮೊದಲ ಸ್ಮಾರ್ಟ್ಟಿವಿ ಇದಾಗಿದ್ದು, ಈ ಹೊಸ Redmi Smart Fire TV 32 ಸ್ಮಾರ್ಟ್ಟಿವಿ Amazon Fire OS ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ತಿಳಿಸಿದೆ. ಹಾಗಾದರೆ, ದೇಶದ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಹೊಸ Redmi Smart Fire TV 32 ಸ್ಮಾರ್ಟ್ಟಿವಿ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
ಹೇಗಿದೆ Redmi Smart Fire TV ಸ್ಮಾರ್ಟ್ಟಿವಿ
Redmi Smart Fire TV 32 ಸ್ಮಾರ್ಟ್ಟಿವಿ ಹೆಸರೇ ಸೂಚಿಸುವಂತೆ ಈ ಸ್ಮಾರ್ಟ್ಟಿವಿಯು 32-ಇಂಚಿನ HD (1366x768-ಪಿಕ್ಸೆಲ್ ರೆಸಲ್ಯೂಶನ್) LED ಡಿಸ್ಪ್ಲೇ ಹೊಂದಿದೆ. 1GB RAM ಮತ್ತು 8GB ಆಂತರಿಕ ಮೆಮೊರಿ ಹೊಂದಿರುವ ಈ ಸ್ಮಾರ್ಟ್ಟಿವಿಯು ಎರಡು USB ಪೋರ್ಟ್ಗಳು, ಎರಡು HDMI ಪೋರ್ಟ್ಗಳು, 3.5mm ಆಡಿಯೋ ಜ್ಯಾಕ್, ಎತರ್ನೆಟ್ ಪೋರ್ಟ್, AV ಇನ್ಪುಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಡಾಲ್ಬಿ ಆಡಿಯೊವನ್ನು ಬೆಂಬಲಿಸುವ 20W ಸ್ಪೀಕರ್ ಸಿಸ್ಟಮ್ನೊಂದಿಗೆ, ಬ್ಲೂಟೂತ್ 5.0, ಡ್ಯುಯಲ್-ಬ್ಯಾಂಡ್ Wi-Fi, AirPlay ಮತ್ತು Miracast ಬೆಂಬಲವನ್ನು ನೀಡುತ್ತದೆ.

ಮೊದಲೇ ಹೇಳಿದಂತೆ, ಇದು Xiaomi ಕಂಪೆನಿಯ ಆಂಡ್ರಾಯ್ಡ್-ಅಲ್ಲದ ಮೊದಲ ಸ್ಮಾರ್ಟ್ಟಿವಿಯಾಗಿದ್ದು, Amazon Fire OS 7 ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದನ್ನು Amazon ಕಂಪೆನಿಯ ಸ್ವಂತ ಫೈರ್ ಟಿವಿಗಳು ಮತ್ತು Fire TV ಸ್ಟ್ರೀಮಿಂಗ್ ಸಾಧನಗಳಲ್ಲಿ ಬಳಸಲಾಗುತ್ತದೆ. ಇದರಿಂದ ಪ್ರೈಮ್ ವಿಡಿಯೋ, ಅಮೆಜಾನ್ ಮ್ಯೂಸಿಕ್ ಮತ್ತು ಮುಂತಾದ Amazon ಅಪ್ಲಿಕೇಶನ್ಗೆ ಸುಲಭ ಪ್ರವೇಶ ದೊರೆಯಲಿದೆ. ಇನ್ನು ಈ Redmi Smart Fire TV ಸ್ಮಾರ್ಟ್ಟಿವಿಯಲ್ಲಿ Netflix,Apple TV, YouTube, Disney+ Hotstar ಸ್ಟ್ರೀಮಿಂಗ್ ಸೇವೆಗಳು ಸಹ ಲಭ್ಯವಿವೆ.

ಭಾರತದಲ್ಲಿ Redmi Smart Fire TV 32 ಸ್ಮಾರ್ಟ್ಟಿವಿ ಬೆಲೆ
ಭಾರತದಲ್ಲಿ Redmi Smart Fire TV 32 ಸ್ಮಾರ್ಟ್ಟಿವಿ ಏಕೈಕ 1GB RAM ಮತ್ತು GB ಮಾದರಿಯು 13,999 ರೂ.ಬೆಲೆಯಲ್ಲಿ ಬಿಡುಗಡೆಯಾಗಿದೆ. ಆದರೆ, ಈ ಸ್ಮಾರ್ಟ್ಟಿವಿಯಯನ್ನು ವಿಶೇಷ 12,999 ರೂ. ಪರಿಚಯಾತ್ಮಕ ಬೆಲೆಯಲ್ಲಿ ಇದೇ ಮಾರ್ಚ್ 21 ರಿಂದ Amazon ಮತ್ತು Mi ಆನ್ಲೈನ್ ಸ್ಟೋರ್ ಮೂಲಕ ಮಾರಾಟಕ್ಕೆ ತರಲಾಗುವುದು ಎಂದು ಕಂಪೆನಿ ತಿಳಿಸಿದೆ.
redmi smart fire tv 32 launched in india.
28-07-26 08:12 pm
HK News Staffer
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
28-07-26 08:11 pm
HK News Staffer
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ;...
27-07-26 11:07 pm
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm