ಬ್ರೇಕಿಂಗ್ ನ್ಯೂಸ್
06-03-23 06:59 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯ ಸ್ಮಾರ್ಟ್ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Xiaomi ಕಂಪೆನಿಯ ಅತ್ಯಂತ ಪ್ರೀಮಿಯಂ ಬ್ರ್ಯಾಂಡ್ Xiaomi 13 Pro ಸ್ಮಾರ್ಟ್ಫೋನ್ ದೇಶದಲ್ಲಿ ಇಂದಿನಿಂದ (ಮಾರ್ಚ್ 6 ) ಮೊದಲ ಮಾರಾಟಕ್ಕೆ ಬಂದಿದೆ. ಫೆಬ್ರವರಿ 26 ರಂದು MWC 2023 ಈವೆಂಟ್ನಲ್ಲಿ ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆಯಾಗಿದ್ದ Xiaomi 13 Pro ಸ್ಮಾರ್ಟ್ಫೋನ್ ದೇಶದಲ್ಲಿ ಏಕೈಕ 12GB + 256GB ಸ್ಟೋರೇಜ್ ಮಾದರಿಯಲ್ಲಿ 79,999 ರೂ. ಬೆಲೆಯಲ್ಲಿ ಮಾರಾಟಕ್ಕೆ ಬಂದಿದ್ದು, ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ 10,000 ರೂ. ರಿಯಾಯಿತಿ ಮತ್ತು ಹಾಗೂ Xiaomi ಹಾಗೂ Redmi ಸ್ಮಾರ್ಟ್ಫೋನ್ಗಳ ಮೇಲೆ 12,000 ರೂ. ವರೆಗೆ ಹಾಗೂ iPhone ಗಳ ಮೇಲೆ 8,000 ರೂ. ಹೆಚ್ಚುವರಿ ವಿನಿಮಯ ಬೋನಸ್ ಪ್ರಕಟಿಸಲಾಗಿದೆ.
ದೇಶದಲ್ಲಿ Xiaomi 13 Pro ಸ್ಮಾರ್ಟ್ಫೋನಿನ ಪೂರ್ಣ ಮಾರಾಟವು ಮಾರ್ಚ್ 10 ರಂದು ಆರಂಭವಾಗಲಿದೆ. ಆದರೆ ಇಂದು (ಮಾರ್ಚ್ 6)Xiaomi 13 Pro ಸ್ಮಾರ್ಟ್ಫೋನನ್ನು ವಿಶೇಷ ಆರಂಭಿಕ ಮಾರಾಟಕ್ಕಿಡಲಾಗಿದೆ ಎಂದು Xiaomi ಕಂಪೆನಿ ತಿಳಿಸಿದೆ. ಇಂದು Xiaomi 13 Pro ಸ್ಮಾರ್ಟ್ಫೋನ್ ಖರೀದಿಸುವ ಮೊದಲ 1,000 ಖರೀದಿದಾರರು ವಿಶೇಷ Xiaomi 13 Pro ಮರ್ಚಂಡೈಸ್ ಬಾಕ್ಸ್ ಪಡೆಯಲಿದ್ದಾರೆ. ಈ ವಿಶೇಷ ಮಾರಾಟವು Mi.com, Mi Home ಮತ್ತು Mi ಸ್ಟುಡಿಯೋಗಳಲ್ಲಿ ಮಾತ್ರ ಲೈವ್ ಆಗಲಿದ್ದರೆ, ಮಾರ್ಚ್ 10 ರಂದು 12 PM IST ಕ್ಕೆ Amazon, Mi.com, Mi Home, ಚಿಲ್ಲರೆ ಪಾಲುದಾರರು ಮತ್ತು Mi ಸ್ಟುಡಿಯೋಸ್ ಮೂಲಕ Xiaomi 13 Pro ಸ್ಮಾರ್ಟ್ಫೋನ್ ಸೆರಾಮಿಕ್ ವೈಟ್ ಮತ್ತು ಸೆರಾಮಿಕ್ ಕಪ್ಪು ಎರಡು ಬಣ್ಣಗಳಲ್ಲಿ ಮಾರಾಟಕ್ಕೆ ಬರಲಿದೆ.
Xiaomi 13 Pro ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
ಇತ್ತೀಚಿನ Xiaomi 13 ಸರಣಿಯಲ್ಲಿ ಪ್ರೊ ಮಾದರಿ ಸ್ಮಾರ್ಟ್ಫೋನ್ ಆಗಿ ಬಿಡುಗಡೆಯಾಗಿರುವ ನೂತನ Xiaomi 13 Pro ಸ್ಮಾರ್ಟ್ಫೋನ್ 6.73-ಇಂಚಿನ 2K OLED ಡಿಸ್ಪ್ಲೇ ಅಳವಡಿಸಲಾಗಿದೆ. ಇದರ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್ ಸಾಮರ್ಥ್ಯದ ಜೊತೆಗೆ 1900 nits ಪೀಕ್ ಬ್ರೈಟ್ನೆಸ್, HDR10+ ಮತ್ತು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಕಾರ್ಯನಿರ್ವಹಣಾ ವಿಭಾಗದಲ್ಲಿ, 12GB RAM ಮತ್ತು 512GB ಆಂತರಿಕ ಮೆಮೊರಿ ಜೊತೆಗೆ ಜೋಡಿಸಲಾಗಿರುವ ಇತ್ತೀಚಿನ Qualcomm Snapdragon 8 Gen 2 ಪ್ರೊಸೆಸರ್ ಹೊಂದಿರುವ ಈ Xiaomi 13 Pro ಸಾಧನವು ಇತ್ತೀಚಿನ MIUI 14 (Android 13 ಆಧಾರಿತ) ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
ಹೊಸ Xiaomi 13 Pro ಸ್ಮಾರ್ಟ್ಫೋನಿನ ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ವ್ಯವಸ್ಥೆ ತರಲಾಗಿದೆ. ಇದು 50MP ಪ್ರಾಥಮಿಕ ಲೆನ್ಸ್, 50MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 50MP ಟೆಲಿಫೋಟೋ ಮೂರು ಲೆನ್ಸ್ಗಳನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ, ಸ್ಮಾರ್ಟ್ಫೋನಿನ ಮುಂಭಾಗದಲ್ಲಿ 32MP ಲೆನ್ಸ್ ಅಳವಡಿಸಲಾಗಿದೆ. ಇನ್ನುಳಿದಂತೆ, 120W ವೇಗದ ಚಾರ್ಜಿಂಗ್ ಮತ್ತು 50W ವೈರ್ಲೆಸ್ ಚಾರ್ಜಿಂಗ್ಗೆ ಬೆಂಬಲದೊಂದಿಗೆ 4,820mAh ಬ್ಯಾಟರಿ ಹೊಂದಿರುವ ಈ Xiaomi 13 Pro ಸ್ಮಾರ್ಟ್ಫೋನ್ 5G ಸಾಧನವಾಗಿದ್ದು, ಚಾರ್ಜಿಂಗ್ ಮತ್ತು ವೈರ್ಡ್ ಡೇಟಾ ವರ್ಗಾವಣೆಗಾಗಿ ಟೈಪ್-ಸಿ ಪೋರ್ಟ್, ಹೈ-ರೆಸ್ ಆಡಿಯೊ, ಸ್ಟಿರಿಯೊ ಸ್ಪೀಕರ್ಗಳು ಮತ್ತು ಡಾಲ್ಬಿ ಅಟ್ಮಾಸ್ ವೈಶಿಷ್ಟ್ಯಗಳನ್ನು ಹೊಂದಿದೆ.
xiaomi 13 pro sale in india starts today 10,000 rs discount.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm