ಬ್ರೇಕಿಂಗ್ ನ್ಯೂಸ್
28-02-23 08:37 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯ ಸ್ಮಾರ್ಟ್ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Xiaomi 13 Pro ಸ್ಮಾರ್ಟ್ಫೋನ್ ದೇಶದಲ್ಲಿಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಫೆಬ್ರವರಿ 26, ಭಾನುವಾರದಂದು MWC 2023 ಈವೆಂಟ್ನಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿದ್ದ Xiaomi 13 Pro ಸ್ಮಾರ್ಟ್ಫೋನ್ ದೇಶದಲ್ಲಿ ಇದೀಗ 79,999 ರೂ. ಬೆಲೆಯಲ್ಲಿ ಪರಿಚಯಗೊಂಡಿದ್ದು, ಮುಂದಿನ ಮಾರ್ಚ್ 10 ರಂದು ಮಾರಾಟಕ್ಕೆ ಬರಲಿದೆ. ದೇಶದಲ್ಲಿ Xiaomi 13 Pro ಸ್ಮಾರ್ಟ್ಫೋನನ್ನು 12GB + 256GB ಸ್ಟೋರೇಜ್ ಏಕೈಕ ಮಾದರಿಯಲ್ಲಿ ಎಂಟ್ರಿ ನೀಡಿದ್ದು, ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ 10,000 ರೂ. ರಿಯಾಯಿತಿ ಮತ್ತು ಹಾಗೂ Xiaomi ಹಾಗೂ Redmi ಸ್ಮಾರ್ಟ್ಫೋನ್ಗಳ ಮೇಲೆ 12,000 ರೂ. ವರೆಗೆ ಹಾಗೂ iPhone ಗಳ ಮೇಲೆ 8,000 ರೂ. ಹೆಚ್ಚುವರಿ ವಿನಿಮಯ ಬೋನಸ್ ಪ್ರಕಟಿಸಿದೆ.
ದೇಶದಲ್ಲಿ Xiaomi 13 Pro ಸ್ಮಾರ್ಟ್ಫೋನಿನ ಮಾರಾಟವು ಮಾರ್ಚ್ 10 ರಂದು ಆರಂಭವಾಗಲಿದ್ದರೂ, ಮಾರ್ಚ್ 6 ರಂದು ಮಧ್ಯಾಹ್ನ 12 ಗಂಟೆಗೆ Xiaomi 13 Pro ಸ್ಮಾರ್ಟ್ಫೋನನ್ನು ವಿಶೇಷ ಆರಂಭಿಕ ಮಾರಾಟಕ್ಕಿಡಲಾಗುವುದು ಎಂದು Xiaomi ಕಂಪೆನಿ ತಿಳಿಸಿದೆ. ಈ ವೇಳೆ Xiaomi 13 Pro ಸ್ಮಾರ್ಟ್ಫೋನ್ ಖರೀದಿಸುವ ಮೊದಲ 1,000 ಖರೀದಿದಾರರು ವಿಶೇಷ Xiaomi 13 Pro ಮರ್ಚಂಡೈಸ್ ಬಾಕ್ಸ್ ಅನ್ನು ಪಡೆಯಲಿದ್ದಾರೆ. ಈ ವಿಶೇಷ ಮಾರಾಟವು Mi.com, Mi Home ಮತ್ತು Mi ಸ್ಟುಡಿಯೋಗಳಲ್ಲಿ ಮಾತ್ರ ಲೈವ್ ಆಗಲಿದ್ದರೆ, ಮಾರ್ಚ್ 10 ರಂದು 12 PM IST ಕ್ಕೆ Amazon, Mi.com, Mi Home, ಚಿಲ್ಲರೆ ಪಾಲುದಾರರು ಮತ್ತು Mi ಸ್ಟುಡಿಯೋಸ್ ಮೂಲಕ Xiaomi 13 Pro ಸ್ಮಾರ್ಟ್ಫೋನ್ ಸೆರಾಮಿಕ್ ವೈಟ್ ಮತ್ತು ಸೆರಾಮಿಕ್ ಕಪ್ಪು ಎರಡು ಬಣ್ಣಗಳಲ್ಲಿ ಮಾರಾಟಕ್ಕೆ ಬರಲಿದೆ.
Xiaomi 13 Pro ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
Xiaomi 13 ಸರಣಿಯಲ್ಲಿ ಪ್ರೊ ಮಾದರಿ ಸ್ಮಾರ್ಟ್ಫೋನ್ ಆಗಿ ಬಿಡುಗಡೆಯಾಗಿರುವ ನೂತನ Xiaomi 13 Pro ಸ್ಮಾರ್ಟ್ಫೋನ್ 6.73-ಇಂಚಿನ 2K OLED ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್ ಸಾಮರ್ಥ್ಯದ ಜೊತೆಗೆ 1900 nits ಪೀಕ್ ಬ್ರೈಟ್ನೆಸ್, HDR10+ ಮತ್ತು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಹುಡ್ ಅಡಿಯಲ್ಲಿ, 12GB RAM ಮತ್ತು 512GB ಆಂತರಿಕ ಮೆಮೊರಿ ಜೊತೆಗೆ ಜೋಡಿಸಲಾಗಿರುವ ಇತ್ತೀಚಿನ Qualcomm Snapdragon 8 Gen 2 ಪ್ರೊಸೆಸರ್ ಹೊಂದಿರುವ ಈ Xiaomi 13 Pro ಸಾಧನವು ಇತ್ತೀಚಿನ MIUI 14 (Android 13 ಆಧಾರಿತ) ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
Xiaomi 13 Pro ಸ್ಮಾರ್ಟ್ಫೋನಿನ ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ವ್ಯವಸ್ಥೆ ತರಲಾಗಿದೆ. ಇದು 50MP ಪ್ರಾಥಮಿಕ ಲೆನ್ಸ್, 50MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 50MP ಟೆಲಿಫೋಟೋ ಮೂರು ಲೆನ್ಸ್ಗಳನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೋಗಳಿಗಾಗಿ, ಸ್ಮಾರ್ಟ್ಫೋನಿನ ಮುಂಭಾಗದಲ್ಲಿ 32MP ಲೆನ್ಸ್ ಅಳವಡಿಸಲಾಗಿದೆ. ಬ್ಯಾಟರಿ ವಿಭಾಗದಲ್ಲಿ, 120W ವೇಗದ ಚಾರ್ಜಿಂಗ್ ಮತ್ತು 50W ವೈರ್ಲೆಸ್ ಚಾರ್ಜಿಂಗ್ಗೆ ಬೆಂಬಲದೊಂದಿಗೆ 4,820mAh ಬ್ಯಾಟರಿ ಹೊಂದಿರುವ ಈ Xiaomi 13 Pro ಸ್ಮಾರ್ಟ್ಫೋನ್ 5G ಸಾಧನವಾಗಿದ್ದು, ಚಾರ್ಜಿಂಗ್ ಮತ್ತು ವೈರ್ಡ್ ಡೇಟಾ ವರ್ಗಾವಣೆಗಾಗಿ ಟೈಪ್-ಸಿ ಪೋರ್ಟ್, ಹೈ-ರೆಸ್ ಆಡಿಯೊ, ಸ್ಟಿರಿಯೊ ಸ್ಪೀಕರ್ಗಳು ಮತ್ತು ಡಾಲ್ಬಿ ಅಟ್ಮಾಸ್ ವೈಶಿಷ್ಟ್ಯಗಳನ್ನು ಹೊಂದಿರುವುದನ್ನು ನಾವು ನೋಡಬಹುದು.
xiaomi 13 pro price in india revealed post launch check price and sale date.
29-04-25 04:28 pm
HK News Desk
Praveen Nettaru, Mohsin Shukur, Karwar Police...
29-04-25 01:04 pm
Siddaramaiah Angry, Belagavi, Police: ಸಿಎಂ ಭಾ...
28-04-25 10:15 pm
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 05:45 pm
Mangalore Correspondent
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
29-04-25 02:53 pm
Mangalore Correspondent
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm