ಬ್ರೇಕಿಂಗ್ ನ್ಯೂಸ್
27-02-23 09:08 pm Source: Vijayakarnataka ಡಿಜಿಟಲ್ ಟೆಕ್
ವಿಶ್ವ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ 'Xiaomi 13 Lite' ಸ್ಮಾರ್ಟ್ಫೋನ್ ಮೊದಲ ಬಾರಿಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ನೀಡಿದೆ. ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆಯೇ ವಿಶ್ವ ಮೊಬೈಲ್ ಕಾಂಗ್ರೆಸ್ 2023 ಕಾರ್ಯಕ್ರಮದಲ್ಲಿ Xiaomi 13 ಮತ್ತು Xiaomi 13 Pro ಸ್ಮಾರ್ಟ್ಫೋನ್ಗಳ ಜೊತೆಗೆ ನೂತನ Xiaomi 13 Lite ಸ್ಮಾರ್ಟ್ಫೋನನ್ನು ಸಹ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಈ ಹೊಸ ಸ್ಮಾರ್ಟ್ಫೋನ್ 120Hz ಕರ್ವ್ಡ್ ಡಿಸ್ಪ್ಲೇ, Snapdragon 7 Gen 1 ಪ್ರೊಸೆಸರ್ ಮತ್ತು 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಿಡುಗಡೆಯಾಗಿದೆ. ಹಾಗಾದರೆ, ನೂತನ Xiaomi 13 Lite ಸ್ಮಾರ್ಟ್ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಸ್ಮಾರ್ಟ್ಫೋನ್ ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
Xiaomi 13 Lite ಸ್ಮಾರ್ಟ್ಫೋನ್ ವೈಶಿಷ್ಟ್ಯಗಳು.
ನೂತನ Xiaomi 13 Lite ಸ್ಮಾರ್ಟ್ಫೋನ್ ಫುಲ್ ಹೆಚ್ಡಿ+ ರೆಸಲ್ಯೂಶನ್ನೊಂದಿಗೆ 6.55-ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದಿರುವ ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಲಾಟಿಂಗ್ ರೇಟ್, 1000 ನಿಟ್ ಬ್ರೈಟ್ನೆಸ್, ಎಚ್ಡಿಆರ್ 10+, ಡಾಲ್ಟಿ ವಿಷನ್ ಮತ್ತು 1920Hz ಹೈ-ಫ್ರೀಕ್ವೆನ್ಸಿ ಪಿಡಬ್ಲ್ಯೂಎಂ ಡಿಮ್ಮಿಂಗ್ ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ .ಪ್ರೊಸೆಸರ್ ವಿಭಾಗದಲ್ಲಿ, Xiaomi 13 Lite ಸ್ಮಾರ್ಟ್ಫೋನ್ 8GB RAM ಮತ್ತು 128GB/256GB ಸ್ಟೋರೇಜ್ಗಳೊಂದಿಗೆ ಸಂಯೋಜಿಸಲಾದ Qualcomm’s Snapdragon 7 Gen 1 ಚಿಪ್ಸೆಟ್ ಮತ್ತು Adreno 644 GPU ಹೊಂದಿದೆ. ಮತ್ತು Android 12 ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ ವಿಭಾಗದಲ್ಲಿ, ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುವ Xiaomi 13 Lite ಸ್ಮಾರ್ಟ್ಫೋನ್ 50MP Sony IMX766 ಮುಖ್ಯ ಕ್ಯಾಮೆರಾ 8MP 115-ಡಿಗ್ರಿ ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾಗಳನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ, ಸೆಲ್ಫಿ ಗ್ಲೋ ಫ್ಲ್ಯಾಷ್ನೊಂದಿಗೆ 8MP ಸಾಮರ್ಥ್ಯದ ಡೆಪ್ತ್ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನುಳಿದಂತೆ, 67W ಫಾಸ್ಟ್ ಚಾರ್ಜಿಂಗ್ ಬೆಂಬಲದ 4,500mAh ಬ್ಯಾಟರಿ, ಡಾಲ್ಬಿ ಅಟ್ಮೋಸ್ ಬೆಂಬಲವಿರುವ ಡ್ಯುಯಲ್ ಸ್ಪೀಕರ್ಗಳು, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಜೊತೆಗೆ 5G SA/NSA, Dual 4G VoLTE, Wi-Fi 6 802.11, Bluetooth 5.2, GPS, NavIC, NFC ಮತ್ತು USB Type-C ಯಂತಹ ಕನೆಕ್ಟಿವಿಟಿ ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್ಫೋನ್ ಬೆಂಬಲಿಸಲಿದೆ.
Xiaomi 13 Lite ಸ್ಮಾರ್ಟ್ಫೋನ್ ಬೆಲೆ?
Qualcomm’s Snapdragon 7 Gen 1 ಚಿಪ್ಸೆಟ್ ಜೊತೆಗೆ ಮಧ್ಯಮ ಫೀಚರ್ಸ್ ಹೊಂದಿರುವ Xiaomi 13 Lite ಸ್ಮಾರ್ಟ್ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ 499 ಯುರೋ (ಸುಮಾರು 43,750 ರೂ.) ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದೇ ಮಾರ್ಚ್ 8 ರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರಲಿರುವ Xiaomi 13 Lite ಸ್ಮಾರ್ಟ್ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ಈವರೆಗೂ ಲಭ್ಯವಾಗಿಲ್ಲ.
xiaomi 13 lite launched with snapdragon 7 gen 1 specifications, price and more.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm