ಬ್ರೇಕಿಂಗ್ ನ್ಯೂಸ್
25-02-23 07:33 pm Source: Vijayakarnataka ಡಿಜಿಟಲ್ ಟೆಕ್
ದೇಶದಲ್ಲಿ ಕಳೆದ ವರ್ಷ ಬಿಡುಗಡೆಯಾಗಿದ್ದ Samsung ಕಂಪೆನಿಯ ಅತ್ಯಂತ ಬಜೆಟ್ ಬೆಲೆಯ Galaxy F13 ಸ್ಮಾರ್ಟ್ಫೋನ್ ಬೆಲೆ ಇದೀಗ ಮೊದಲ ಬಾರಿಗೆ ಇಳಿಕೆಯಾಗಿದೆ. ಟ್ರಿಪಲ್ ರಿಯರ್ ಕ್ಯಾಮೆರಾ, 6,000mAh ಬ್ಯಾಟರಿ ಮತ್ತು ಆಕ್ಟಾ-ಕೋರ್ Exynos 850 SoC ಪ್ರೊಸೆಸರ್ ನಂತಹ ವೈಶಿಷ್ಟ್ಯಗಳನ್ನು ಹೊಂದಿರುವ Samsung Galaxy F13 ಸ್ಮಾರ್ಟ್ಫೋನ್ ಇದೀಗ 1,000 ರೂ.ಬೆಲೆ ಇಳಿಕೆಯೊಂದಿಗೆ 10,999 ರೂ. ಆರಂಭಿಕ ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿದ್ದು, ಈ ಮೊದಲು 11,999 ರೂ. ಬೆಲೆ ಹೊಂದಿದ್ದ ಬೇಸ್ 4GB RAM + 64GB ಸ್ಟೋರೇಜ್ ಮಾದರಿ ಫೋನ್ 10,999 ರೂ. ಹೊಸ ಬೆಲೆಯಲ್ಲಿ ಹಾಗೂ 12,999 ರೂ. ಬೆಲೆ ಹೊಂದಿದ್ದ 4GB + 128GB ಮಾದರಿ ಫೋನ್ 11,999 ರೂ.ಗಳ ಹೊಸ ಪ್ರೈಸ್ ಟ್ಯಾಗ್ನಲ್ಲಿ Samsung ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಕಾಣಿಸಿಕೊಂಡಿವೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ಈ 'Samsung Galaxy F13' ಬಜೆಟ್ ಸ್ಮಾರ್ಟ್ಫೋನ್ 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ, 6,000mAh ಬ್ಯಾಟರಿ ಮತ್ತು ಆಕ್ಟಾ-ಕೋರ್ Exynos 850 SoC ಪ್ರೊಸೆಸರ್ ನಂತಹ ವೈಶಿಷ್ಟ್ಯಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ನೈಟ್ಸ್ಕಿ ಗ್ರೀನ್, ಸನ್ರೈಸ್ ಕಾಪರ್ ಮತ್ತು ವಾಟರ್ಫಾಲ್ ಬ್ಲೂ ಸೇರಿದಂತೆ ಹಲವಾರು ಬಣ್ಣಗಳಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್ಫೋನ್ ದೇಶದ ಜನತೆಯ ಮನಸೂರೆಗೊಳಿಸಿತ್ತು. ಹಾಗಾದರೆ, ಬಜೆಟ್ ಬೆಲೆಯ ಈ 'Samsung Galaxy F13' ಸ್ಮಾರ್ಟ್ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ನೋಡೋಣ ಬನ್ನಿ.
Samsung Galaxy F13 ವೈಶಿಷ್ಟ್ಯಗಳು
Samsung Galaxy F13 ಸ್ಮಾರ್ಟ್ಫೋನಿನಲ್ಲಿ 6.6-ಇಂಚಿನ ಪೂರ್ಣ-HD+ (1,080x2,408 ಪಿಕ್ಸೆಲ್ಗಳು) ಡಿಸ್ಪ್ಲೇ ಅಳವಡಿಸಲಾಗಿದೆ. ಈ ಸ್ಮಾರ್ಟ್ಫೋನಿನಲ್ಲಿ Exynos 850 SoC ಪ್ರೊಸೆಸರ್ ಇದ್ದು, ಈ ಪ್ರೊಸೆಸರ್ 4GB RAM ಮತ್ತು 128GB ವರೆಗಿನ ಆನ್ಬೋರ್ಡ್ ಮೆಮೊರಿಯೊಂದಿಗೆ ಜೋಡಿಯಾಗಿದೆ. ಈ ಫೋನಿನಲ್ಲಿ ಆನ್ಬೋರ್ಡ್ ಮೆಮೊರಿಯನ್ನು ಬಳಸಿಕೊಂಡು RAM ವಿಸ್ತರಿಸಲು ಸಾಧ್ಯವಿರುವ RAM ಪ್ಲಸ್ ವೈಶಿಷ್ಟ್ಯ ಹಾಗೂ ಮೈಕ್ರೊ SD ಕಾರ್ಡ್ ಸಹಾಯದಿಂದ 1TB ವರೆಗೆ ಮೆಮೊರಿ ವಿಸ್ತರಿಸಬಹುದಾದ ವೈಶಿಷ್ಟ್ಯಗಳಿವೆ. ಇನ್ನು Samsung Galaxy F13 ಫೋನಿನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದ್ದು, ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, ಜೊತೆಗೆ 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ಗಳನ್ನು ಹೊಂದಿದೆ.
ಸೆಲ್ಫಿಗಳು ಮತ್ತು ವೀಡಿಯೊ ಚಾಟ್ಗಳಿಗಾಗಿ, Samsung Galaxy F13 ಸ್ಮಾರ್ಟ್ಫೋನಿನ ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಸಂಪರ್ಕ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, GPS/ A-GPS, USB ಟೈಪ್-C, ಮತ್ತು 3.5mm ಹೆಡ್ಫೋನ್ ಜ್ಯಾಕ್ ವೈಶಿಷ್ಟ್ಯಗಳಿವೆ. ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕವನ್ನು ಒಳಗೊಂಡಿರುವ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ. ಪ್ರಮುಖ ವಿಶೇಷತೆಯಾಗಿ, ಈ ಪೋನಿನಲ್ಲಿ 6,000mAh ಬ್ಯಾಟರಿಯಅಳವಡಿಸಲಾಗಿದ್ದು, ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಡ್ಯುಯಲ್-ಸಿಮ್ (ನ್ಯಾನೋ) ಸಾಮರ್ಥ್ಯದ ಈ ಫೋನ್ Android 12 ನಲ್ಲಿ ಕೆಲಸ ಮಾಡುತ್ತದೆ.
samsung galaxy f13 receives a price cut in india.
29-04-25 04:28 pm
HK News Desk
Praveen Nettaru, Mohsin Shukur, Karwar Police...
29-04-25 01:04 pm
Siddaramaiah Angry, Belagavi, Police: ಸಿಎಂ ಭಾ...
28-04-25 10:15 pm
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 05:45 pm
Mangalore Correspondent
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
29-04-25 02:53 pm
Mangalore Correspondent
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm