ಬ್ರೇಕಿಂಗ್ ನ್ಯೂಸ್
21-02-23 07:48 pm Source: Vijayakarnataka ಡಿಜಿಟಲ್ ಟೆಕ್
ದೇಶದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Poco C55 ಸ್ಮಾರ್ಟ್ಫೋನ್ ದೇಶದಲ್ಲಿಂದು (ಫೆಬ್ರವರಿ 21, ಮಂಗಳವಾರ) ಪರಿಚಯಗೊಂಡಿದೆ. Poco ಕಂಪೆನಿಯ ಜನಪ್ರಿಯ ಬಜೆಟ್ C-ಸರಣಿ ಸ್ಮಾರ್ಟ್ಫೋನ್ಗಳ ಸಾಲಿಗೆ ಹೊಸ ಸೇರ್ಪಡೆಯಾಗಿರುವ ಈ ಸ್ಮಾರ್ಟ್ಫೋನ್ MediaTek Helio G85 ಪ್ರೊಸೆಸರ್, ವಾಟರ್ಡ್ರಾಪ್-ಶೈಲಿಯ ಕ್ಯಾಮೆರಾ ನಾಚ್ನೊಂದಿಗೆ 6.71-ಇಂಚಿನ HD+ ಡಿಸ್ಪ್ಲೇ, 5,000mAh ಬ್ಯಾಟರಿ ಮತ್ತು 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನಂತಹ ವೈಶಿಷ್ಟ್ಯಗಳನ್ನು ಹೊತ್ತು ಬಜೆಟ್ ಬೆಲೆಗಳಲ್ಲಿ ಬಿಡುಗಡೆಯಾಗಿದೆ. ಹಾಗಾದರೆ, ನೂತನ Poco C55 ಸ್ಮಾರ್ಟ್ಫೋನ್ ಹೇಗಿದೆ ಮತ್ತು ಈ ಸ್ಮಾರ್ಟ್ಫೋನ್ ಬೆಲೆಗಳು ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Poco C55 ಸ್ಮಾರ್ಟ್ಫೋನ್ ವೈಶಿಷ್ಟ್ಯಗಳು
ಬಜೆಟ್ ಬೆಲೆಯ ನೂತನ Poco C55 ಸ್ಮಾರ್ಟ್ಫೋನ್ ವಾಟರ್ಡ್ರಾಪ್-ಶೈಲಿಯ ಕ್ಯಾಮೆರಾ ನಾಚ್ ಶೈಲಿಯಲ್ಲಿ 6.71-ಇಂಚಿನ HD+ (720x1,650 ಪಿಕ್ಸೆಲ್ಗಳು) LCD ಡಿಸ್ಪ್ಲೇ ಹೊಂದಿದೆ. ಇದರ ಡಿಸ್ಪ್ಲೇಯು 60Hz ರಿಫ್ರೆಶ್ ರೇಟ್, 534 nits ವರೆಗಿನ ಗರಿಷ್ಠ ಬ್ರೈಟ್ನೆಸ್ ಮತ್ತು 120Hz ಟಚ್ ಸ್ಯಾಂಪ್ಲಿಂಗ್ ರೇಟಿಂಗ್ ಸಾಮರ್ಥ್ಯದಲ್ಲಿದೆ. ಪ್ರೊಸೆಸರ್ ವಿಭಾಗದಲ್ಲಿ, 6GB RAM ಮತ್ತು 64GB ಮಸ್ಟೋರೇಜ್ನೊಂದಿಗೆ ಜೋಡಿಸದಾದ MediaTek Helio G85 SoC ಚಿಪ್ಸೆಟ್ ಹೊಂದಿರುವ ಈ Poco C55 ಸ್ಮಾರ್ಟ್ಫೋನ್ MIUI 13 ಔಟ್-ಆಫ್-ದಿ-ಬಾಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ, ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಈ ಸ್ಮಾರ್ಟ್ಫೋನಿನ ಆನ್ಬೋರ್ಡ್ ಸ್ಟೋರೇಜ್ ಅನ್ನು 1TB ವರೆಗೆ ವಿಸ್ತರಿಸಲು ಸಾಧ್ಯ ಎಂದು ಕಂಪೆನಿ ತಿಳಿಸಿದೆ.
ಕ್ಯಾಮೆರಾ ವಿಭಾಗದಲ್ಲಿ, Poco C55 ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು f/1.8 ಅಪರ್ಚರ್ ಲೆನ್ಸ್ ಜೊತೆಗೆ 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಾಥಮಿಕ ಮತ್ತು ಅನಿರ್ದಿಷ್ಟ(ಈ ಬಗ್ಗೆ ಮಾಹಿತಿ ದೊರೆತಿಲ್ಲ) ಸೆಕೆಂಡರಿ ಕ್ಯಾಮೆರಾಗಳನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಚಾಟ್ಗಳಿಗಾಗಿ, ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಈ ಸ್ಮಾರ್ಟ್ಫೋನಿನ ಸಂಪರ್ಕ ಆಯ್ಕೆಗಳಲ್ಲಿ ವೈ-ಫೈ, 4ಜಿ, ಬ್ಲೂಟೂತ್ 5.1, ಜಿಪಿಎಸ್ ಮತ್ತು ಮೈಕ್ರೋ-ಯುಎಸ್ಬಿ ಪೋರ್ಟ್ ವೈಶಿಷ್ಟ್ಯಗಳಿವೆ. ಇನ್ನು ಈ ಸ್ಮಾರ್ಟ್ಫೋನ್ 10W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ, IP52 ರೇಟಿಂಗ್ ಧೂಳು ಮತ್ತು ನೀರಿನ ಪ್ರತಿರೋಧಕ ಮತ್ತು ಹಿಂಬದಿ-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ನಂತಹ ವೈಶಿಷ್ಟ್ಯಗಳಲ್ಲಿ ಬಿಡುಗಡೆಯಾಗಿದೆ.
Poco C55 ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ.
ಭಾರತದಲ್ಲಿ Poco C55 ಸ್ಮಾರ್ಟ್ಫೋನ್ 9,499 ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಆದರೆ, Poco C55 ಸ್ಮಾರ್ಟ್ಫೋನಿನ ವಿಶೇಷ "ಮೊದಲ ದಿನದ" ಮಾರಾಟದ ಕೊಡುಗೆಯಾಗಿ HDFC, SBI ಮತ್ತು ICICI ಬ್ಯಾಂಕ್ ಗ್ರಾಹಕರು 8,499 ರೂ. ಬೆಲೆಯಲ್ಲಿ Poco C55 ಸ್ಮಾರ್ಟ್ಫೋನನ್ನು ಖರೀದಿಸಬಹುದು. ಕಂಪೆನಿ ಅಧಿಕೃತವಾಗಿ ತಿಳಿಸಿರುವಂತೆ, 4GB RAM + 64GB ಸ್ಟೋರೇಜ್ ಮಾದರಿಯ Poco C55 ಸ್ಮಾರ್ಟ್ಫೋನ್ ಬೆಲೆ 9,499 ರೂ.ಗಳಾದರೆ, ಇದರ 6GB + 128GB ಸ್ಟೋರೇಜ್ ಮಾದರಿ ಸ್ಮಾರ್ಟ್ಫೋನ್ ಬೆಲೆ 9,999 ರೂ.ಗಳಾಗಿವೆ. ಇನ್ನು ಗ್ರಾಹಕರು ಇದೇ ಫೆಬ್ರವರಿ 28 ರಿಂದ ಫ್ಲಿಪ್ಕಾರ್ಟ್ ಮತ್ತು ಕಂಪನಿಯ ವೆಬ್ಸೈಟ್ ಮೂಲಕ, ಕೂಲ್ ಬ್ಲೂ, ಫಾರೆಸ್ಟ್ ಗ್ರೀನ್ ಮತ್ತು ಪವರ್ ಬ್ಲ್ಯಾಕ್ ಬಣ್ಣ ಆಯ್ಕೆಗಳಲ್ಲಿ ಈ ಸ್ಮಾರ್ಟ್ಫೋನ್ ಖರೀದಿಸಬಹುದು.
poco c55 with 50-megapixel rear camera launched in india price, specifications.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm