ಬ್ರೇಕಿಂಗ್ ನ್ಯೂಸ್
12-01-23 07:52 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಇದೇ ಫೆಬ್ರವರಿ 1, 2023 ರಂದು ಆಯೋಜಿಸಿರುವ 'Galaxy Unpacked' ಈವೆಂಟ್ನಲ್ಲಿ Samsung ತನ್ನ ಬಹುನಿರೀಕ್ಷಿತ Galaxy S23 ಸರಣಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಬಗ್ಗೆ ಈಗಾಗಲೇ ಬಹಿರಂಗಪಡಿಸಿದೆ. ಇದೀಗ ದೊರೆತಿರುವ ಮತ್ತೊಂದು ಸಿಹಿಸುದ್ದಿ ಏನೆಂದರೆ, ಗ್ರಾಹಕರು ಇಂದಿನಿಂದಲೇ Samsung Galaxy S23 ಸರಣಿ ಸ್ಮಾರ್ಟ್ಫೋನ್ಗಳನ್ನು ಕೊಡುಗೆಗಳೊಂದಿಗೆ ಪ್ರೀ-ಬುಕ್ ಮಾಡಲು ಅನುಮತಿಸಲಾಗಿದೆ. ಹೌದು, ದೇಶದಲ್ಲಿ Galaxy S23 ಸರಣಿಯಲ್ಲಿ ಬಿಡುಗಡೆಯಾಗಲಿರುವ Galaxy S23, Galaxy S23+, ಮತ್ತು Galaxy S23 Ultra ಮೂರು ಸ್ಮಾರ್ಟ್ಫೋನ್ಗಳನ್ನು ಪ್ರೀ-ಬುಕ್ ಮಾಡಬಹುದಾಗಿದ್ದು, ಈ ಸ್ಮಾರ್ಟ್ಫೋನ್ಗಳನ್ನು ಮೊದಲೇ ಬುಕ್ ಗ್ರಾಹಕರಿಗೆ 5000 ಮೌಲ್ಯದ ಪ್ರಯೋಜನಗಳು ದೊರೆಯಲಿವೆ ಎಂದು Samsung ಕಂಪೆನಿ ತಿಳಿಸಿದೆ.
ಭಾರತದಲ್ಲಿ Samsung Galaxy S23 ಸರಣಿ ಫೋನ್ಗಳ ಪ್ರೀ-ಬುಕಿಂಗ್ ಕೊಡುಗೆಗಳು
ಫೆಬ್ರವರಿ 1, 2023 ರಂದು ದೇಶದಲ್ಲಿ ಬಿಡುಗಡೆಯಾಗಲಿರುವ Samsung Galaxy S23 ಸರಣಿ ಸ್ಮಾರ್ಟ್ಪೋನ್ಗಳನ್ನು ಮೊದಲೇ ಪಡೆಯಲು ಇಚ್ಚಿಸುವ ಗ್ರಾಹಕರು Samsung ಕಂಪೆನಿಯ ಅಧಿಕೃತ ವೆಬ್ಸೈಟ್ ಮೂಲಕ ಯಾವುದೇ Galaxy S23, Galaxy S23+, ಮತ್ತು Galaxy S23 Ultra ಸಾಧನವನ್ನು ಪ್ರೀ-ಬುಕ್ ಮಾಡಬಹುದು. ಇದಕ್ಕಾಗಿ, Samsung ಕಂಪೆನಿ 1999 ರೂ.ಗೆ ಪ್ರೀ ಬುಕ್ಕಿಂಗ್ ಬೆಲೆಯನ್ನು ನಿಗಧಿಪಡಿಸಿದೆ. ಹೀಗೆ 1999 ರೂ. ಪಾವತಿಸಿ ಪ್ರೀ-ಬುಕ್ ಮಾಡುವ ಗ್ರಾಹಕರಿಗೆ 5000 ಮೌಲ್ಯದ ಪ್ರಯೋಜನಗಳನ್ನು ಒದಗಿಸುವುದಾಗಿ Samsung ಕಂಪೆನಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೇ, Galaxy S23 ಸರಣಿ ಸ್ಮಾರ್ಟ್ಫೋನ್ಗಳನ್ನು ಪ್ರೀ-ಬುಕ್ ಮಾಡುವ ಗ್ರಾಹಕರಿಗೆ ಆರಂಭಿಕ ವಿತರಣೆ, ವಿಶೇಷ ಬಣ್ಣದ ಆಯ್ಕೆಗಳು ಮತ್ತು 2000 ರೂ. ವೆಲ್ಕಮ್ ಕೂಪನ್ ಸಹ ದೊರೆಯಲಿವೆ.
Samsung ಆಯೋಜಿಸಿರುವ Galaxy Unpacked 2023 ಕಾರ್ಯಕ್ರಮವು ದೇಶದಲ್ಲಿ ಇದೇ ಫೆಬ್ರವರಿ 1 ರಂದು ರಾತ್ರಿ 11: 30 ಕ್ಕೆದ ಪ್ರಾರಂಭವಾಗಲಿದೆ ಮತ್ತು ಕಾರ್ಯಕ್ರಮವನ್ನು ಕಂಪನಿಯ ಅಧಿಕೃತ ಚಾನೆಲ್ಗಳ ಮೂಲಕ ಲೈವ್ಸ್ಟ್ರೀಮ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಇತ್ತೀಚಿನ Snapdragon 8 Gen 2 ಪ್ರೊಸೆಸರ್ ಹೊತ್ತು Galaxy S23, Galaxy S23+, ಮತ್ತು Galaxy S23 Ultra ಮೂರು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲಿವೆ ಎಂದು ಹೇಳಲಾಗಿದೆ. ಇತ್ತೀಚಿಗೆ ಸೋರಿಕೆಯಾದ ಹಲವು ಮಾಹಿತಿಗಳ ಪ್ರಕಾರ, ದೇಶದಲ್ಲಿ Galaxy S23 ಮತ್ತು Galaxy S23+ ಸ್ಮಾರ್ಟ್ಫೋನ್ಗಳು ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಮತ್ತು Galaxy S23 Ultra 100 ಎಕ್ಸ್ ಜೂಮ್ ಸಾಮರ್ಥ್ಯದ 200-MP ಕ್ವಾಡ್ ಕ್ಯಾಮೆರಾ ಸಟಪ್ನೊಂದಿಗೆ ಬರಲಿದೆ ಎನ್ನಲಾಗಿದೆ.
Samsung Galaxy S23 Series Pre-Reservation Orders Open In India.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm