ಬ್ರೇಕಿಂಗ್ ನ್ಯೂಸ್
14-04-21 02:30 pm Mangalore Correspondent ಕ್ರೈಂ
ಮಂಗಳೂರು, ಎ.14: ನಗರದ ಹೆಸರಾಂತ ಮಾಲ್ ಒಂದರಲ್ಲಿರುವ ಪಬ್ ಕಂ ಬಾರ್ ನಲ್ಲಿ ವೇಟರ್ ಮತ್ತು ಮ್ಯಾನೇಜರ್ ಸೇರಿ ಗ್ರಾಹಕರನ್ನು ಮೋಸ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಸರಣಿ ವಂಚನೆಗೊಳಗಾದ ಪಾಂಡುರಂಗ ನಾಯಕ್ ಎಂಬವರು ಪಬ್ ವಿರುದ್ಧ ಮಂಗಳೂರು ಸೆಂಬ್ರಲ್ ಉಪವಿಭಾಗದ ಎಸಿಪಿ ಮತ್ತು ಅಬಕಾರಿ ಇಲಾಖೆಗೆ ದೂರು ನೀಡಿದ್ದಾರೆ.
ಅಲ್ಲದೆ, ಇದೇ ರೀತಿ ಮೋಸಕ್ಕೆ ಒಳಗಾದವರು ಫೇಸ್ ಬುಕ್ ನಲ್ಲಿ ತಮಗಾದ ಮೋಸದ ಬಗ್ಗೆ ಬರೆದುಕೊಂಡಿದ್ದಾರೆ. ಮಣ್ಣಗುಡ್ಡ ನಿವಾಸಿ ಪಾಂಡುರಂಗ ನಾಯಕ್ ದೂರಿನಲ್ಲಿ ಹೇಳಿದ ಪ್ರಕಾರ, ಅಲ್ಲಿನ ನಾಲ್ಕೈದು ಮಂದಿ ವೇಟರ್ ಗಳು ಹಾಗೂ ಮ್ಯಾನೇಜರ್ ಚೇತನ್ ಶೆಟ್ಟಿ ಎಂಬವರು ಸೇರಿ ಈ ಮೋಸದ ಕೃತ್ಯ ನಡೆಸುತ್ತಿದ್ದಾರೆ.
ನಗರದ ಭಾರತ್ ಮಾಲ್ ನಲ್ಲಿರುವ Spindrift ಎನ್ನುವ ಹೆಸರಿನ ಪಬ್ ಮಂಗಳೂರಿನಲ್ಲಿ ಫೇಮಸ್. ಗ್ರಾಹಕರ ಆರೋಪದ ಪ್ರಕಾರ, ಇಲ್ಲಿನ ಸಿಬಂದಿಯೇ ಸೇರಿ ಬಿಲ್ ನಲ್ಲಿ ಮೋಸ ಮಾಡುತ್ತಿದ್ದಾರಂತೆ. ಪಾಂಡುರಂಗ ನಾಯಕ್ ಮತ್ತು ಅವರ ಸ್ನೇಹಿತರು ತಿಂಗಳ ಹಿಂದೊಮ್ಮೆ ಪಬ್ ಗೆ ಬಂದಿದ್ದರು. ಆಗ 9800 ರೂ. ಬಿಲ್ ಆಗಿದ್ದು , ವೇಟರ್ ಗೆ ಹಣ ಎಣಿಸಿ 2 ಸಾವಿರದ ಐದು ನೋಟುಗಳನ್ನು ಕೊಟ್ಟಿದ್ದರು. ಹಣ ಪಡೆದು ಓಕೆ ಎಂದು ತೆರಳಿದ್ದ ವೈಟರ್ ಕೆಲಕ್ಷಣಗಳ ಬಳಿಕ ಮರಳಿದ್ದು ಇದರಲ್ಲಿ ಐದು ನೋಟುಗಳಿಲ್ಲ. ಒಂದು ನೋಟು ಕಡಿಮೆಯಿದೆ ಎಂದು ಹೇಳಿದ್ದ. ಏನೋ ಎಣಿಕೆಯಲ್ಲಿ ತಪ್ಪಾಗಿರಬೇಕು ಎಂದುಕೊಂಡು ಮತ್ತೊಂದು ಕೆಂಪು ನೋಟನ್ನು ಕೊಟ್ಟಿದ್ದರು.
ಆನಂತರ ಕಳೆದ ತಿಂಗಳು ಕೊನೆಯಲ್ಲಿ ಮತ್ತೊಮ್ಮೆ ಇದೇ ತಂಡ ಪಬ್ ಗೆ ಹೋಗಿತ್ತು. ಈ ಬಾರಿ ಬಿಲ್ 6000 ರೂ. ಆಗಿತ್ತು. ಎರಡು ಕೆಂಪು ನೋಟು ಮತ್ತು ನಾಲ್ಕು 500ರ ನೋಟನ್ನು ಬಿಲ್ ರೂಪದಲ್ಲಿ ಕೊಟ್ಟಿದ್ದರು. ಆದರೆ, ಹಿಂದಿನ ರೀತಿಯಲ್ಲೇ ಹಣ ಪಡೆದು ತೆರಳಿದ್ದ ವೈಟರ್ ಮತ್ತೆ ಹಿಂತಿರುಗಿ ಬಂದು ಎರಡು ಸಾವಿರದ ಕೆಂಪು ನೋಟು ಒಂದೇ ಇದ್ದುದಾಗಿ ಹೇಳಿದ್ದ. ಆದರೂ ಕುಡಿದ ಮತ್ತಿನಲ್ಲಿ ಗಾಬರಿಪಡುತ್ತಲೇ ಮತ್ತೆ ಎರಡು ಸಾವಿರದ ನೋಟನ್ನು ವೈಟರ್ ಕೈಗೆ ನೀಡಿದ್ದರು. ಅಷ್ಟೇ ಅಲ್ಲಾ ಈ ಬಗ್ಗೆ ಅಲ್ಲಿನ ಮ್ಯಾನೇಜರ್ ಚೇತನ್ ಶೆಟ್ಟಿಯ ಗಮನಕ್ಕೆ ತಂದಿದ್ದರು. ಆದರೆ, ಆತ ಗ್ರಾಹಕರ ವಿರುದ್ಧವೇ ಮಾತನಾಡಿದ್ದಲ್ಲದೆ ವೈಟರ್ ಗಳನ್ನು ಸಮರ್ಥನೆ ಮಾಡಿಕೊಂಡಿದ್ದನಂತೆ.
ಮತ್ತೆ ಇತ್ತೀಚೆಗೆ ಎ.4ರಂದು ಅದೇ ಪಬ್ ಗೆ ಪಾಂಡುರಂಗ ನಾಯಕ್ ಮತ್ತು ತಂಡ ತೆರಳಿತ್ತು. ಮೊದಲೆರಡು ಬಾರಿಯ ಮೋಸದ ಬಗ್ಗೆ ಅರಿವಿದ್ದ ತಂಡ ಈ ಬಾರಿ ಬಿಲ್ ನೀಡುವಾಗ ತುಂಬ ಎಚ್ಚರಿಕೆ ವಹಿಸಿದ್ದರು. 4600 ರೂ. ಬಿಲ್ ಬಂದಿದ್ದು 500ರ ಹತ್ತು ನೋಟುಗಳನ್ನು ನೀಡಿದ್ದರು. ಆದರೂ ವೈಟರ್ ಚಾಳಿ ಹಳೆಯದ್ದೇ ಆಗಿತ್ತು. 500ರ ಒಂದು ನೋಟು ಕಡಿಮೆ ಇದೆಯೆಂದು ಹೇಳಿ ಯಾಮಾರಿಸಿದ್ದ. ಕೊನೆಗೆ ಪಬ್ ತೆರಳಿದ್ದ ತಂಡ ವೈಟರ್ ಮತ್ತು ಅಲ್ಲಿನ ಮ್ಯಾನೇಜರ್ ಜೊತೆಗೆ ವಾಗ್ವಾದ ಮಾಡಿಯೇ ಹೊರಬಂದಿದ್ದರು. ಪಬ್ ಹೆಸರಲ್ಲಿ ಗ್ರಾಹಕರನ್ನು ದೋಚುತ್ತಿರುವ ಬಗ್ಗೆ ಖಚಿತಪಡಿಸಿಕೊಂಡ ಪಾಂಡುರಂಗ ನಾಯಕ್ ಮತ್ತು ಸ್ನೇಹಿತರು ತಮ್ಮ ಇತರೇ ಗೆಳೆಯರಲ್ಲಿ ಹೇಳಿಕೊಂಡರು. ಅಲ್ಲಿಗೆ ತೆರಳುತ್ತಿದ್ದ ಕೆಲವು ಗ್ರಾಹಕರು ತಮಗೆ ಕೂಡ ಇದೇ ರೀತಿಯ ಅನುಭವ ಆಗಿರುವುದಾಗಿ ಹೇಳಿಕೊಂಡಿದ್ದಾರೆ.
ಮಂಗಳೂರು ದೇಶದಲ್ಲೇ ಅತ್ಯಂತ ಬಿರುಸಿನಲ್ಲಿ ಬೆಳೆಯುತ್ತಿರುವ ನಗರ. ದೇಶ- ವಿದೇಶದ ಸಾವಿರಾರು ಮಂದಿ ಪ್ರತಿದಿನವೂ ಮಂಗಳೂರಿಗೆ ಬಂದು ಹೋಗುತ್ತಾರೆ. ಇಲ್ಲಿನ ಖಾದ್ಯ- ವೈವಿಧ್ಯಗಳನ್ನು ಸವಿಯುವ ನೆಪದಲ್ಲಿ ನಗರದಲ್ಲಿ ಗ್ರಾಂಡ್ ಆಗಿರುವ ಪಬ್ ಗಳಿಗೆ ಬೀರ್ ಹೀರಲೆಂದು ತೆರಳುವುದು ಸಾಮಾನ್ಯ. ಆದರೆ, ಹೆಲ್ತಿ ಸಿಟಿ, ಹೆರಿಟೇಜ್ ಸಿಟಿ ಎಂದು ಹೆಸರು ಗಳಿಸಿರುವ ಮಂಗಳೂರಿನಂಥ ನಗರದಲ್ಲಿ ಈ ರೀತಿ ಗ್ರಾಹಕರನ್ನು ಮೋಸ ಮಾಡುತ್ತಿರುವುದು ಎಷ್ಟು ಸರಿ ಎಂದು ಅಲ್ಲಿನ ಗ್ರಾಹಕ ಗೆಳೆಯರು ಪಬ್ ಬಗ್ಗೆ ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಪಾಂಡುರಂಗ ನಾಯಕ್ ಮೂಲಕ ನಗರದ ಸಹಾಯಕ ಪೊಲೀಸ್ ಆಯುಕ್ತರಿಗೆ ಮತ್ತು ಅಬಕಾರಿ ಇಲಾಖೆಗೆ ದೂರು ನೀಡಿ, ಪಬ್ ಹೆಸರಲ್ಲಿ ಗ್ರಾಹಕರನ್ನು ದೋಚುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಸ್ಪಿನ್ ಹೆಸರಿನ ಪಬ್ ಗ್ರಾಹಕರನ್ನೇ ಸ್ಪಿನ್ ಮಾಡುತ್ತಿರುವ ಬಗ್ಗೆ ಗೆಳೆಯರು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
A customer from Mangalore has filed a Cheating case on Spindrift bar and restaurant situated in Bharath Mall, Bejai of cheating people by looting excess money. A case has been also filed to the Excise department.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm