ಬ್ರೇಕಿಂಗ್ ನ್ಯೂಸ್
05-03-21 10:37 am Mangalore Correspondent ಕ್ರೈಂ
ಮಂಗಳೂರು, ಮಾ.5: ಅದರ ಬಗ್ಗೆ ಪೊಲೀಸರಿಗೂ ಗೊತ್ತು. ಅಧಿಕಾರಿಗಳಿಗೂ ಗೊತ್ತು. ಅದರ ಹಿಂದಿರೋ ಕೈಗಳು ಯಾರದ್ದು ಮತ್ತು ಎಷ್ಟು ಪ್ರಭಾವಿಗಳಿವೆ ಅನ್ನೋದು ಕೂಡ ಗೊತ್ತು. ಹೌದು.. ನೀವು ನಂಬಲಿಕ್ಕಿಲ್ಲ.. ಅತ್ತ ಕೇಸು ದಾಖಲಾಗೋ ಮೊದಲೇ ಆ ಘಟನೆಯ ಸಿಸಿಟಿವಿ ವಿಡಿಯೋ ರಿಲೀಸ್ ಆಗಿತ್ತು. ಸ್ಕೂಟರಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಟ್ಟಾಡಿಸಿ, ಆತನ ಕೈಯಲ್ಲಿರುವ ಹಣದ ಬ್ಯಾಗನ್ನು ಕಿತ್ತುಕೊಳ್ಳುವ ದರೋಡೆ ಕೃತ್ಯದ ದೃಶ್ಯವದು. ಎರಡು ವಾರಗಳ ಹಿಂದಿನ ದರೋಡೆ ಘಟನೆಯ ಸಿಸಿಟಿವಿ ದೃಶ್ಯಗಳೇ ಅಲ್ಲಿನ ಕತೆ ಹೇಳುತ್ತವೆ ಕೇಳಿ.
ಪಾಂಡೇಶ್ವರ ಠಾಣೆಯಲ್ಲಿ ಮಾ.4ರಂದು ಪ್ರಕರಣವೊಂದು ದಾಖಲಾಗಿದೆ. ಅಬ್ದುಲ್ ಸಲಾಂ ಎಂಬಾತ ದೂರುದಾರ. ಬಜ್ಪೆ ಸಮೀಪದ ಸೂರಲ್ಪಾಡಿಯ ನಿವಾಸಿ. ವಿಷ್ಯ ಏನಂದ್ರೆ, ಕಳೆದ ಫೆ.22ರಂದು ನಡೆದಿರುವ ದರೋಡೆ ಘಟನೆಯ ಬಗೆಗಿನ ದೂರು. ತಂಗಿ ಮಗಳ ಮದುವೆಗೆಂದು ಸ್ನೇಹಿತರಿಂದ 16 ಲಕ್ಷ ಹಣ ಪಡೆದು ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಮೂವರು ಆಗಂತುಕರು ತಡೆದು ದರೋಡೆ ನಡೆಸಿದ್ದಾರೆ ಎಂಬುದು ದೂರಿನ ಸಾರಾಂಶ. ಆದರೆ, ಘಟನೆ ಬಗ್ಗೆ ಪೊಲೀಸರು ಮಾತ್ರ ಚೀಟಿಂಗ್ (ಐಪಿಸಿ 420 ಮತ್ತು 379) ಮತ್ತು ಕಳವು ಎಂಬುದನ್ನಷ್ಟೆ ದಾಖಲಿಸಿದ್ದಾರೆ. ದರೋಡೆ ಎಂದು ಪ್ರಕರಣ ದಾಖಲು ಮಾಡಿಲ್ಲ.
ಸಿಸಿಟಿವಿಯಲ್ಲಿರುವ ದೃಶ್ಯದಲ್ಲಿ ದಾಖಲಾದ ವಿಡಿಯೋ ಪ್ರಕಾರ, ದೂರುದಾರ ಸಲಾಂ ಮೇಲೆ ಆಗಂತುಕರು ಹಲ್ಲೆ ನಡೆಸಿದ್ದಾರೆ. ಸಲಾಂ ಚೂರಿ ಹಿಡಿದಿದ್ದು, ತನ್ನ ಸ್ಕೂಟರಿನಲ್ಲಿದ್ದ ಹಣದ ಬ್ಯಾಗನ್ನು ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಆದರೆ, ಮೂವರು ಯುವಕರು ಸಲಾಂನನ್ನು ದೂಡಿಹಾಕಿ, ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗುತ್ತಾರೆ. ಸಲಾಂ ನೀಡಿರುವ ದೂರಿನಲ್ಲಿ ಈ ಘಟನೆ ಪಾಂಡೇಶ್ವರ ಬಳಿಯ ಓಲ್ಡ್ ಕೆಂಟ್ ರೋಡಿನಲ್ಲಿ ನಡೆದಿದ್ಯಂತೆ. ದೂರು ನೀಡಲು ಇಷ್ಟು ತಡ ಮಾಡಿದ್ಯಾಕೆ ಎಂಬ ಪೊಲೀಸರ ಪ್ರಶ್ನೆಗೆ, ಹಣ ಕಳೆದುಕೊಂಡ ಬಳಿಕ ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಿದೆ. ಅವರು ಸೂಚಿಸಿದ ಬಳಿಕ ದೂರು ನೀಡಲು ಬಂದಿದ್ದೇನೆ ಎಂದಿದ್ದಾನಂತೆ. ಆತ ಹೇಳಿದಂತೆ, ಪೊಲೀಸರು ಕೂಡ ದೂರು ತಡವಾಗಿ ದಾಖಲಾದ ಬಗ್ಗೆ ಎಫ್ಐಆರ್ ನಲ್ಲಿ ಷರಾ ಬರೆದುಕೊಂಡಿದ್ದಾರೆ.
ಬರೋಬ್ಬರಿ 16 ಲಕ್ಷ ರೂ. ಹಣ ಕಳೆದುಕೊಂಡ ಎರಡು ವಾರಗಳ ಬಳಿಕ ದೂರು ನೀಡಿದ್ದೇ ಸೋಜಿಗ. ದೂರಿನ ಬಗ್ಗೆ ಮೇಲ್ನೋಟಕ್ಕೇ ಸಂಶಯ ಬರುತ್ತದೆ. ಯಾವುದೇ ಸಾಮಾನ್ಯ ವ್ಯಕ್ತಿಯೇ ಆದರೂ, ದರೋಡೆ ನಡೆದಿದ್ದೇ ಆಗಿದ್ದಲ್ಲಿ ಕೂಡಲೇ ದೂರು ನೀಡುತ್ತಾನೆ. ಹಲ್ಲೆ ನಡೆಸಿ, ಹಣ ಕಿತ್ತುಕೊಂಡ ಬಗ್ಗೆ ಪೊಲೀಸರಿಗೆ ತಿಳಿಸಿ, ಆರೋಪಿಗಳನ್ನು ಪತ್ತೆ ಮಾಡಿ ಹಣ ಮರಳಿಸುವಂತೆ ಕೋರಿಕೊಳ್ಳುತ್ತಾನೆ. ಆದರೆ, ಇಲ್ಲಿ ದೂರು ನೀಡಿರುವಾತ ಸಾಮಾನ್ಯ ವ್ಯಕ್ತಿಯೇ ಆಗಿದ್ದರೂ, 16 ಲಕ್ಷ ಹಣ ಕಳಕೊಂಡ ಬಗ್ಗೆ ಪೊಲೀಸರಿಗೆ ಹೇಳಲು 12 ದಿನಗಳ ವರೆಗೆ ಕಾದಿದ್ದಾನೆ ಅಂದ್ರೆ, ಇದರ ಹಿಂದೆ ನಡೆದಿದ್ದೇ ಬೇರೆಯೆಂಬ ಸಂಶಯಿಸಲು ಪೊಲೀಸರೇ ಆಗಬೇಕಾಗಿಲ್ಲ.
ದರೋಡೆ ಹಿಂದಿದ್ಯಾ ಹವಾಲಾ ವಹಿವಾಟು ?
ಮಂಗಳೂರಿನಲ್ಲಿ ಹವಾಲಾ ಹಣದ ವಹಿವಾಟು ನಡೆಯುತ್ತಿರುವುದು ಹೊಸತಲ್ಲ. ಮಂಗಳೂರಿನ ಜುವೆಲ್ಲರಿ ಇನ್ನಿತರ ಕ್ಷೇತ್ರಗಳಲ್ಲಿ ಬ್ಲಾಕ್ ಮನಿ ರೂಪದಲ್ಲಿ ಶೇಖರವಾಗುವ ಹಣವನ್ನು ಬೇರೆಡೆಗೆ ಒಯ್ದು ವೈಟ್ ಮಾಡೋ ಜಾಲವೂ ಹೊಸತಲ್ಲ. ಎರಡು ವರ್ಷಗಳ ಹಿಂದೆ ಮಂಗಳೂರಿನ ಕಾರ್ ಸ್ಟ್ರೀಟ್ ಬಳಿಯ ಜುವೆಲ್ಲರಿ ಮಾಲಕನ ಹಣ ದರೋಡೆ ಆಗಿತ್ತು. ಮುಂಬೈನಿಂದ ಬರುತ್ತಿದ್ದ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿ, 40 ಲಕ್ಷ ಹಣ ಕಿತ್ತುಕೊಂಡಿದ್ದ ಬಗೆಗಿನ ದೂರು. ಪೊಲೀಸರು ತನಿಖೆ ನಡೆಸಿದ ಬಳಿಕ ಜುವೆಲ್ಲರಿ ಮಾಲಕನೇ ಕತೆ ಕಟ್ಟಿದ್ದು, ಹವಾಲಾ ವಹಿವಾಟು ನಡೆಸುತ್ತಿದ್ದ ವಿಚಾರವೂ ಬಯಲಾಗಿತ್ತು. ಅಂದಿನ ಸಿಸಿಬಿ ಪೊಲೀಸರು ಅದನ್ನು ಅರ್ಧಕ್ಕೆ ಪತ್ತೆ ಮಾಡಿ, ಇನ್ನರ್ಧವನ್ನು ಎಲ್ಲಿ ಬಿಟ್ಟರು ಅನ್ನೋದು ಗೊತ್ತಾಗಿರಲಿಲ್ಲ
ಈ ರೀತಿಯ ಹವಾಲಾ ಹಣದ ವಹಿವಾಟು ಮುಂಬೈ ಟು ಮಂಗಳೂರು ಮಧ್ಯೆ ನಡೆಯುತ್ತಿರುವುದು, ಅದರಲ್ಲಿ ಮಂಗಳೂರಿನ ಕೆಲವು ಜುವೆಲ್ಲರಿಯವರು ಇರೋದು, ಅದರ ಹಿಂದಿನ ಜಾಲ ಗಾಢವಾಗಿರೋದು ಮಂಗಳೂರಿನ ಪೊಲೀಸರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಮೊನ್ನೆ ನಡೆದಿರುವ ದರೋಡೆ ನಾಟಕದಲ್ಲಿ ಹವಾಲಾ ಹಣದ ವಹಿವಾಟಿನಲ್ಲಿದ್ದವರೇ ಇರುವ ಬಗ್ಗೆ ಶಂಕೆ ಮೂಡುತ್ತಿದೆ. ಅಷ್ಟೇ ಅಲ್ಲದೆ, ಹವಾಲಾ ಹಣ ಸಾಗಾಟ ಜಾಲದ ಒಳಗಿದ್ದವರೇ ದರೋಡೆಯ ನಾಟಕ ಆಡಿದ್ದಾರೆಯೇ ಎಂಬ ಸಂಶಯ ಮೂಡಿದೆ. ಅದಕ್ಕಾಗಿ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿರುವಂತೆ ಬಿಂಬಿಸಿದ್ದಲ್ಲದೆ, ಪೊಲೀಸ್ ದೂರು ದಾಖಲಾಗುವ ಮೊದಲೇ ಅಲ್ಲಿನ ಸಿಸಿಟಿವಿಯ ವಿಡಿಯೋ ಸಂಗ್ರಹಿಸಲಾಗಿತ್ತು ಮತ್ತು ಅದನ್ನು ಲೀಕ್ ಮಾಡಲಾಗಿತ್ತೇ ಅನ್ನೋದು ಸಂಶಯಕ್ಕೆ ಕಾರಣವಾಗಿದೆ. ಕೆಲವರ ಪ್ರಕಾರ, ಆವತ್ತು ದರೋಡೆ ಆಗಿದ್ದು 16 ಲಕ್ಷ ಅಲ್ಲ. ಬರೋಬ್ಬರಿ ಒಂದೂವರೆ ಕೋಟಿ ಅನ್ನುವ ಮಾತೂ ಕೇಳಿಬರುತ್ತಿದೆ. ಯಾಕಂದ್ರೆ, ಹವಾಲಾ ಹಣದ ಸಾಗಣೆ ಸಂದರ್ಭದಲ್ಲಿ ಯಾವತ್ತೂ ಲಕ್ಷದ ವಹಿವಾಟು ನಡೆಯಲ್ಲ. ಕೋಟಿಗಿಂತ ಮೇಲಿನ ಮೊತ್ತವನ್ನೇ ಹೀಗೆ ಬ್ಯಾಗಲ್ಲಿ ಸಾಗಿಸಿ, ಜುವೆಲ್ಲರಿ ಇನ್ನಿತರ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗುತ್ತದೆ ಅನ್ನೋದು ಇದರ ಬಗ್ಗೆ ತಿಳಿದವರ ಮಾತು.
ಕಾರು ಮಾರಾಟ ಪ್ರಕರಣವನ್ನು ಪತ್ತೆ ಮಾಡಿ, ಸಿಸಿಬಿ ಪೊಲೀಸರ ವಹಿವಾಟನ್ನು ಬಯಲು ಮಾಡಿದ್ದ ಮಂಗಳೂರಿನ ಪೊಲೀಸ್ ಕಮಿಷನರ್ ಮತ್ತು ತಂಡದ ಬಗ್ಗೆ ಮಂಗಳೂರಿನ ಜನರಿಗೆ ಭಾರೀ ನಿರೀಕ್ಷೆಯಿದೆ. ಈಗ ದಾಖಲಾಗಿರುವ 16 ಲಕ್ಷದ ಪ್ರಕರಣದ ಬೆನ್ನು ಬಿದ್ದರೆ, ಹವಾಲಾ ಹಣದ ವಹಿವಾಟು ಹೊರತರುವುದು ಕಷ್ಟದ ಕೆಲಸವೇನಲ್ಲ. ದರೋಡೆ ಹಿಂದಿನ ನಾಟಕಕಾರರು ಯಾರು ಮತ್ತು ಅದರಲ್ಲಿ ಎಷ್ಟು ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಎನ್ನುವ ಬಗ್ಗೆಯೂ ಲೆಕ್ಕ ತೆಗೀಬಹುದು. ಆಡಳಿತ ಪಕ್ಷದ ಪ್ರಭಾವಿಗಳ ಕೈವಾಡ ಇದೆಯೇ ಎನ್ನುವ ಬಗ್ಗೆಯೂ ತಲಾಶೆ ಮಾಡಬಹುದು.
Live Video CCTV Footage:
Hawala has been suspected in Mangalore. A man who was carrying 16 lakhs of cash suspected to be as Hawala was attacked by a gang and has been robbed in daylight. The incident took place on 22nd Feb but the case was kept as a mystery due to the influence of top persons involved. The Case is now registered at the Pandeshwar Police station in Mangalore.
18-03-25 02:30 pm
Bangalore Correspondent
Tumkur Wedding News, Water: ನೀರಿನ ವಿಚಾರದಲ್ಲಿ...
18-03-25 01:08 pm
ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಸದ್ಯದಲ್ಲೇ...
17-03-25 11:54 am
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
18-03-25 08:53 pm
Mangalore Correspondent
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
18-03-25 06:31 pm
Mangalore Correspondent
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am