ಬ್ರೇಕಿಂಗ್ ನ್ಯೂಸ್
02-02-21 04:19 pm Mangalore Correspondent ಕ್ರೈಂ
ಮಂಗಳೂರು, ಫೆ.2: ಕೇಡಿ ರಾಜ್, ಕಾಸ್ಕುಮಾರ್, ಜಗದೇಕವೀರ ಇವೆಲ್ಲ ಹೆಸರು ಮಂಗಳೂರಿನ ಪೊಲೀಸರಿಗೆ ಚೆನ್ನಾಗಿ ಗೊತ್ತು. ಮಾಧ್ಯಮದ ಮಂದಿಗೂ ಗೊತ್ತು. ಇವರ ಕಳ್ಳಪೊಲೀಸ್ ಆಟದ ನಿಜಬಣ್ಣವೂ ಗೊತ್ತಿತ್ತು. ಆದರೆ, ಈಗ ಮಾತ್ರ ಈ ತ್ರಿವಳಿ ಜೋಡಿಗಳು ಮಾಡಿದ್ದ ಪಾಪದ ಕೃತ್ಯದ ಸ್ಯಾಂಪಲ್ ಒಂದು ಹೊರಬಿದ್ದಿದೆ. ರಿಯಲ್ ಎಸ್ಟೇಟ್ ಉದ್ಯಮಿಗೆ ಸೇರಿದ ಕೋಟಿ ಬೆಲೆಯ ಐಷಾರಾಮಿ ಕಾರುಗಳನ್ನು ಈ ಜೋಡಿ ಸೇರಿ ಮಾರಾಟ ಮಾಡಿರುವ ಇಂಟರೆಸ್ಟಿಂಗ್ ಸ್ಟೋರಿ ಇಲಾಖೆ ಒಳಗಿಂದಲೇ ರಟ್ಟಾಗಿದೆ.
ಕಳೆದ ಅಕ್ಟೋಬರ್ 16ರಂದು ಮಂಗಳೂರಿನ ಪಾಂಡೇಶ್ವರದ ಇಕನಾಮಿಕ್ ಅಂಡ್ ನಾರ್ಕೋಟಿಕ್ ಕ್ರೈಮ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಮಂಗಳೂರಿನ ಶಕ್ತಿನಗರದ ಮಹಿಳೆಯೊಬ್ಬರು ಎಲಿಯ ಕನ್ ಸ್ಟ್ರಕ್ಷನ್ಸ್ ಅಂಡ್ ಬಿಲ್ಡರ್ಸ್ ಪ್ರೈ. ಲಿ. ಹೆಸರಿನ ರಿಯಲ್ ಎಸ್ಟೇಟ್ ಕಂಪನಿ ವಿರುದ್ಧ ದೂರು ನೀಡಿದ್ದರು. ಮೂಲತಃ ಕೇರಳ ನಿವಾಸಿಗಳಾಗಿದ್ದು, ಕಂಪನಿ ನಿರ್ದೇಶಕರಾಗಿದ್ದ ಉಪ್ಪಿನಂಗಡಿಯ ಗುಂಡ್ಯದಲ್ಲಿ ವಾಸವಿದ್ದ ಟೋಮಿ ಮ್ಯಾಥ್ಯೂ ಮತ್ತು ಟಿ. ರಾಜನ್ ಎಂಬವರ ಮೇಲೆ ಕೇಸು ದಾಖಲಾಗಿತ್ತು. ಇವರು ಹಣ ದ್ವಿಗುಣಗೊಳಿಸುವುದಾಗಿ ಹೇಳಿ ಮತ್ತು ರಿಯಲ್ ಎಸ್ಟೇಟ್ ಹೆಸರಲ್ಲಿ ಜನರಿಂದ ಹಣ ಹೂಡಿಕೆ ಮಾಡಿಸುತ್ತಿದ್ದರು. ಮೊದಲು ಉಪ್ಪಿನಂಗಡಿಯಲ್ಲಿ ಕಚೇರಿ ಹೊಂದಿದ್ದು, ಬಳಿಕ ಮಂಗಳೂರಿನ ಬೆಂದೂರು ವೆಲ್ ನಲ್ಲಿ ಕಚೇರಿ ಮಾಡಿಕೊಂಡಿದ್ದರು. ಈ ಬಗ್ಗೆ ದೂರು ನೀಡಿದ್ದ ಮಹಿಳೆ ತನಗೆ 4.5 ಲಕ್ಷ ಮತ್ತು ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಂದ ಸುಮಾರು 30 ಕೋಟಿ ವಂಚನೆ ಎಸಗಿದ್ದಾಗಿ ದೂರಿಕೊಂಡಿದ್ದರು.
ಪ್ರಕರಣದ ಬೆಂಬತ್ತಿದ್ದ ಸಿಸಿಬಿ ಅಧಿಕಾರಿಗಳಿದ್ದ ಪೊಲೀಸರ ತಂಡ ರಾಜನ್ ಮತ್ತು ಟೋಮಿ ಮ್ಯಾಥ್ಯೂವನ್ನು ವಶಕ್ಕೆ ಪಡೆದು, ಮಂಗಳೂರಿನ ತಣ್ಣೀರುಬಾವಿಯ ಗೆಸ್ಟ್ ಹೌಸ್ ನಲ್ಲಿ ಕೂಡಿಹಾಕಿತ್ತು. ಅಷ್ಟೇ ಅಲ್ಲ, ಅವರಿಗೆ ಸೇರಿದ್ದ ಐಷಾರಾಮಿ ಕಾರುಗಳಾದ ಜಾಗ್ವಾರ್, ಪೋಶ್ ಮತ್ತು ಬಿಎಂಡಬ್ಲ್ಯು ಗಳನ್ನು ವಶಕ್ಕೆ ಪಡೆದು ತಮ್ಮಲ್ಲಿ ಇರಿಸಿಕೊಂಡಿದ್ದರು. ತಿಂಗಳ ಬಳಿಕ ಟೋಮಿ ಮತ್ತು ರಾಜನ್ ವಕೀಲರ ಮೂಲಕ ಜಾಮೀನು ಪಡೆದು ಪೊಲೀಸರ ಬಲೆಯಿಂದ ಹೊರಬಂದಿದ್ದರು. ಆನಂತರ ತಮ್ಮ ಕಾರುಗಳನ್ನು ಪಡೆಯಲು ಮುಂದಾಗಿದ್ದ ವೇಳೆ, ಸಿಸಿಬಿ ಪೊಲೀಸರ ಬಳಿ ಕಾರು ಇರಲಿಲ್ಲ. ಜಪ್ತಿಯಾಗಿದ್ದ ಐಷಾರಾಮಿ ಕಾರುಗಳೇ ಮಾಯವಾಗಿದ್ದವು !
ಈ ನಡುವೆ, ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದ ಮೇಲೆ ಹೇಳಿರುವ ಮೂವರ ಜೋಡಿ, ಉದ್ಯಮಿಗಳ ಜೊತೆಗೆ ಭಾರೀ ಡೀಲ್ ಮಾಡಲು ಮುಂದಾಗಿತ್ತು. ದೊಡ್ಡ ಮಟ್ಟದ ಡೀಲ್ ನಡೆದಿದ್ದು, ಬಳಿಕ ಮತ್ತಷ್ಟು ಹಣ ಕೇಳಿದ್ದಕ್ಕೆ ಕೊಡದೇ ಇದ್ದಾಗ ಕಾರುಗಳನ್ನೇ ಎತ್ತಾಕ್ಕೊಂಡು ಹೋಗಿದ್ದರು. ಬೇಸತ್ತ ಆರೋಪಿಗಳು, ನಮ್ಮಲ್ಲಿ ಹಣ ಇಲ್ಲ. ಬೇಕಿದ್ದರೆ ಕಾರನ್ನು ಮಾರಿಕೊಳ್ಳಿ ಎಂದಿದ್ದಕ್ಕೆ ಮೂರು ಐಷಾರಾಮಿ ಕಾರುಗಳನ್ನೇ ಮಾರಾಟ ಮಾಡಲು ತ್ರಿವಳಿ ಜೋಡಿ ಪ್ಲಾನ್ ಹಾಕಿತ್ತು. ಅದಕ್ಕಾಗಿ ಮಂಗಳೂರಿನ ಡೀಲ್ ರಾಜ ದಿವ್ಯದರ್ಶನ ಎನ್ನುವಾತನ ಮೂಲಕ ಪೂರ್ತಿ ಡೀಲ್ ಕುದುರಿಸಿದ್ದರು. ಇದಕ್ಕೆ ಸಾಥ್ ಕೊಟ್ಟಿದ್ದು ಇಬ್ಬರು ಮಾಧ್ಯಮದ ಮಂದಿ. ಒಬ್ಬ ಇತ್ತೀಚೆಗೆ ಮಾಧ್ಯಮಕ್ಕೆ ಬಂದಿದ್ದ ನಾಲ್ಕಕ್ಷರ ಬರೆಯಲು ಬಾರದಿದ್ದರೂ ಪೋಸು ಕೊಡುವ ಕುಳ್ಳ ಮತ್ತು ಹಿರಿಯ ಪತ್ರಕರ್ತನ ನೆಲೆಯಲ್ಲಿ ಪೋಸು ಕೊಡುವ ಮತ್ತೊಬ್ಬ.
ಆದರೆ, ಇತ್ತ ಜಾಮೀನಿನಲ್ಲಿ ಹೊರಬಂದು ತಮ್ಮ ಕಾರನ್ನು ಹುಡುಕುತ್ತಿರುವ ಹೊತ್ತಲ್ಲಿ ಖತರ್ನಾಕ್ ಜೋಡಿಯ ಪೈಕಿ ಇಬ್ಬರು ಅಧಿಕಾರಿಗಳು ಇಲ್ಲಿಂದ ವರ್ಗವಾಗಿದ್ದರು. ಇದೇ ವೇಳೆ, ಸಿಸಿಬಿಯ ಉಸ್ತುವಾರಿ ಹೊತ್ತಿದ್ದವರು ತಾನು ಮಾಡದ ತಪ್ಪಿಗೆ ವರ್ಗದ ಶಿಕ್ಷೆಯನ್ನೂ ಪಡೆದಿದ್ದರು. ಆ ಜಾಗಕ್ಕೆ ಮತ್ತೊಬ್ಬ ಅಧಿಕಾರಿ ಬಂದು ಕುಳಿತಿದ್ದರು. ಸದ್ಯಕ್ಕೆ ಎಸಿಪಿ ಹುದ್ದೆಯಲ್ಲಿರುವ ಡೀಲ್ ವೀರ ಜಗದೇಕ ಇಲ್ಲೇ ಉಳಿದುಕೊಂಡಿದ್ದರೆ, ಮತ್ತಿಬ್ಬರು ಎತ್ತಂಗಡಿಯಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಸಿಸಿಬಿಯಲ್ಲಿ ಝಂಡಾ ಊರಿದ್ದ ಎಸ್ಐ ಕೇಡಿ ರಾಜ್ ವರ್ಗ ಆಗಿದ್ದರೂ ಮತ್ತೆ ಅದೇ ಸ್ಥಾನಕ್ಕೆ ಬರಲು ಹೈಲೆವೆಲ್ ಲಾಬಿ ನಡೆಸುತ್ತಿದ್ದಾರೆ.
ಇಷ್ಟೆಲ್ಲ ಅವಾಂತರ ಆಗಿದ್ದರೂ, ಪೊಲೀಸರಿಂದಲೇ ಬೋಳಿಸಿಕೊಂಡು ಹೋಗಿದ್ದ ವಂಚಕ ಉದ್ಯಮಿಗಳು ಮಂಗಳೂರಿನಿಂದಲೇ ಕಾಲ್ಕಿತ್ತಿದ್ದಾರೆ. ಕಾರು ಮಿಸ್ಸಿಂಗ್ ಆಗಿರುವ ಬಗ್ಗೆ ಕನಿಷ್ಠ ಪ್ರಕರಣ ದಾಖಲಿಸುತ್ತಿದ್ದರೂ, ಹರಾಮಿ ಜೋಡಿಗಳ ಹೇತ್ಲಂಡಿ ಕೆಲಸ ಕಾನೂನಿಡಿಯೇ ಹೊರಬರುತ್ತಿತ್ತು. ಅಷ್ಟೇ ಅಲ್ಲ, ಕೋಳ ಹಾಕುತ್ತಿದ್ದವರೇ ತಗ್ಲಾಕ್ಕೊಂಡು ಕಂಬಿ ಎಣಿಸುವಂತೆ ಆಗ್ತಿತ್ತು. ಈಗಂತೂ, ಮೂವರು ಡೀಲ್ ರಾಜರ ಅಸಲಿಯತ್ತು ಹೊರಬಿದ್ದಿದೆ. ಈ ವಿಚಾರ ಮಂಗಳೂರು ಕಮಿಷನರ್ ಕಿವಿಗೆ ಬಿದ್ದು ಐಷಾರಾಮಿ ಕಾರುಗಳ ಬಗ್ಗೆ ವಿಚಾರಣೆಯನ್ನೂ ಮಾಡಿದ್ದಾರೆ. ಅದರಂತೆ, ಎಲ್ಲೋ ಅಡಗಿಸಿಟ್ಟಿದ್ದ ಎರಡು ಕಾರು ಮತ್ತೆ ಕಮಿಷನರ್ ಕಚೇರಿಯಲ್ಲಿ ಪ್ರತಕ್ಷ ಆಗಿದೆ. ಹಿಂದೆ ಸಿಸಿಬಿಯಲ್ಲಿದ್ದ ರಾಜ್ ಎನ್ನುವಾತ ಒಂದು ಕೋಟಿ ಬೆಲೆಯ ಪೋಷ್ ಕಾರನ್ನು ಕಮಿಷನರ್ ಕಚೇರಿ ಬಳಿ ತಂದಿಟ್ಟಿದ್ದರೆ, ಬಿಎಂಡಬ್ಲ್ಯು ಕಾರನ್ನು ಸಿಸಿಬಿ ಕಚೇರಿ ಬಳಿ ಇರಿಸಲಾಗಿದೆ. ಇನ್ನೊಂದು ಜಾಗ್ವಾರ್ ಕಾರನ್ನು ಮಾರಾಟ ಮಾಡಿದ್ದಾರೆ ಎನ್ನೋ ಮಾತು ಕೇಳಿಬರುತ್ತಿದೆ.
ಇವೆಲ್ಲ ಡೀಲಿಂಗ್, ಅಧಿಕಾರಿಗಳ ನಡುವೆ ಕೊಡುಕೊಳ್ಳುವಿಕೆ, ಅವರಿಗೆ ಹುಡುಗಿ ಸಪ್ಲೈ ಮಾಡುತ್ತಿದ್ದ ದಲ್ಲಾಳಿ ದಿವ್ಯದರ್ಶನ್ ಮೂಲಕವೇ ನಡೆದಿತ್ತು. ಮಂಗಳೂರಿನ ಖ್ಯಾತ ಫೈನಾನ್ಸರ್ ಒಬ್ಬನ ಫ್ಲ್ಯಾಟಲ್ಲಿ ಕುಳಿತೇ ಪೊಲೀಸ್ ಅಧಿಕಾರಿಗಳ ನಡುವೆ ಡೀಲ್ ಕುದುರಿಸುತ್ತಿದ್ದ ಆತನ ನಿಜಬಣ್ಣ ಹೊರಜಗತ್ತಿಗೆ ಹೆಚ್ಚು ತಿಳಿದಿಲ್ಲ. ಆತನ ದಿವ್ಯ ‘ದರ್ಶನ’ ಹೈಲೆವೆಲ್ ಮಂದಿಗಷ್ಟೇ ಆಗುವುದಂತೆ. ಇದೇನೇ ಇದ್ದರೂ, ವಂಚನೆಗೊಳಗಾಗಿ ದೂರು ನೀಡಿದ್ದ ಮಹಿಳೆಗೆ ಮಂಗಳೂರಿನ ಡೀಲ್ ಮಾಸ್ಟರ್ ಅಧಿಕಾರಿಗಳಿಂದಾಗಿ ಚೊಂಬೇ ಗತಿ ಎನ್ನುವಂತಾಗಿದೆ. 30 ಕೋಟಿಯಷ್ಟು ವಂಚನೆ ಆಗಿದೆ ಎಂದು ದೂರು ನೀಡಿದ್ದರೆ, ಇನ್ನೂ ಅದೆಷ್ಟು ಮಂದಿ ಈ ವಂಚಕ ಉದ್ಯಮ ಪತಿಗಳಿಂದ ಬೋಳಿಸಿಕೊಂಡಿದ್ದಾರೋ ಏನೋ..? ಈಗಂತೂ ವಂಚಕರನ್ನೇ ಪೊಲೀಸ್ ಅಧಿಕಾರಿಗಳು ಬೋಳಿಸಿದ್ದಲ್ಲದೆ, ಡೀಲ್ ಕುದುರಿಸಿಕೊಂಡು ಲಕ್ಷಾಂತರ ರೂಪಾಯಿ ಜೇಬಿಗಿಳಿಸಿ ಬೇಳೆ ಬೇಯಿಸಿಕೊಂಡಿದ್ದಾರೆ.
ಇನ್ನು ಈ ಎಲಿಯ ಕನ್ ಸ್ಟ್ರಕ್ಷನ್ ಬಗ್ಗೆ ಮಂಗಳೂರಿನಲ್ಲಿ ವಿಚಾರಿಸಿದರೆ, ಅಂಥ ರಿಯಲ್ ಎಸ್ಟೇಟ್ ಉದ್ಯಮವೇ ಇಲ್ವಂತೆ. ಕ್ರೆಡೈನಲ್ಲಿ ರಿಜಿಸ್ಟರ್ ಆಗಿಲ್ಲ ಎನ್ನುತ್ತಾರೆ, ಈ ಬಗ್ಗೆ ತಿಳಿದವರು. ಎಲಿಯ ಹೆಸರೇ ಫೇಕ್ ಎನ್ನುವ ಗುಮಾನಿ ಕೇಳಿಬರುತ್ತಿದ್ದು, ಒಟ್ಟು ಪ್ರಕರಣದ ಬಗ್ಗೆ ವಂಚಕರಿಂದ ಹಣ ಕಳಕೊಂಡವರು ಇನ್ನಷ್ಟು ದೂರು ನೀಡಿದರಷ್ಟೇ ಹೊರಬಂದೀತು.
A case of the costly car being sold by Police officers for settlement with the accused has been exposed in Mangalore. A news report by Headline Karnataka.
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 11:26 pm
Mangalore Correspondent
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm