ಮಾಡೂರು ಇಸುಬು ಹತ್ಯೆ ಪ್ರಕರಣ ; ನಾಲ್ವರು ಆರೋಪಿಗಳು ದೋಷಿಗಳೆಂದು ಮಂಗಳೂರು ಕೋರ್ಟ್ ಘೋಷಣೆ, ಆರು ಮಂದಿ ಖುಲಾಸೆ

28-09-26 11:03 pm       Mangaluru Staffer   ಕ್ರೈಂ

ಮಂಗಳೂರು ಜೈಲಿನಲ್ಲಿ 2015ರಲ್ಲಿ ನಡೆದ ಮಾಡೂರು ಇಸುಬು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳು ದೋಷಿಗಳೆಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಮಂಗಳೂರು, ಸೆ.28: ಮಂಗಳೂರು ಜೈಲಿನಲ್ಲಿ 2015ರಲ್ಲಿ ನಡೆದ ಮಾಡೂರು ಇಸುಬು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳು ದೋಷಿಗಳೆಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 

02-11-2015 ರಂದು ನಡೆದ ಘಟನೆ ಬಗ್ಗೆ ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಾದ ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್, ಉಮೇಶ್ ಕೊಂಬಾರ್, ಶರಣ್ ಪೂಜಾರಿ, ಮಹೇಶ್ ಕುಮಾರ್, ಕಮಲಾಕ್ಷ ಪೂಜಾರಿ, ಸತೀಶ್ ಪೂಜಾರಿ, ಲತೀಶ್ ಎಂಬವರ ವಿರುದ್ಧ ಪ್ರಕರಣದ ತನಿಖಾಧಿಕಾರಿ ಎಸಿಪಿ ತಿಲಕಚಂದ್ರ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುತ್ತಾರೆ. 

ವಿಚಾರಣೆ ನಡೆದ ಬಳಿಕ ಸೆ.28ರಂದು ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್, ಉಮೇಶ್ ಕೊಂಬಾರ್ ಎಂಬವರ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಘೋಷಿಸಲಾಗಿದ್ದು, ಉಳಿದ ಆರೋಪಿಗಳಾದ ಶರಣ್ ಪೂಜಾರಿ, ಮಹೇಶ್ ಕುಮಾರ್, ಕಮಲಾಕ್ಷ ಪೂಜಾರಿ, ಸತೀಶ್ ಪೂಜಾರಿ (ಪ್ರಸ್ತುತ ಮರಣ ಹೊಂದಿರುತ್ತಾರೆ) ಮತ್ತು ಲತೀಶ್ ಎಂಬವರನ್ನು ಆರೋಪದಿಂದ ಖುಲಾಸೆಗೊಳಿಸಲಾಗಿದೆ. ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ಬಾಕಿ ಇರುತ್ತದೆ.

ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮೋಹನ್ ವಾದ ಮಂಡಿಸಿರುತ್ತಾರೆ.