ಬ್ರೇಕಿಂಗ್ ನ್ಯೂಸ್
24-08-26 07:04 pm HK News Staffer ಕ್ರೈಂ
ಮಂಗಳೂರು, ಆ.24: ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಹೆಸರಲ್ಲಿ ಸಾವಿರಾರು ಕೋಟಿ ವಂಚನೆಗೈದು ಇಡಿ ಬಲೆಗೆ ಬಿದ್ದಿದ್ದ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಜೈಲು ಸೇರಿದ್ದಾನೆ. ಜಾರಿ ನಿರ್ದೇಶನಾಲಯದ ಮಂಗಳೂರು ವಿಭಾಗದ ಅಧಿಕಾರಿಗಳು ಆಗಸ್ಟ್ 13ರಂದು ನೀಲಣ್ಣವರ್ ನನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದರು. 12 ದಿನಗಳ ಕಸ್ಟಡಿ ಮುಗಿದು ಇಂದು ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಬೆಳಗಾವಿಯ ಶಿವಾನಂದ ನೀಲಣ್ಣವರ್ ಶಿವಂ ಅಸೋಸಿಯೇಟ್ಸ್ ಹೆಸರಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಹಣಕಾಸು ವಂಚನೆ ಮಾಡಿದ್ದ. ತಿಂಗಳಿಗೆ ಗರಿಷ್ಠ ಬಡ್ಡಿಯ ಆಸೆ ತೋರಿಸಿ ಜನಸಾಮಾನ್ಯರಲ್ಲಿ ಭಾರೀ ಹೂಡಿಕೆ ಮಾಡಿಸಿದ್ದು ಕೆಲವೇ ವರ್ಷಗಳಲ್ಲಿ ಹಣಕಾಸು ಸಾಮ್ರಾಜ್ಯ ಕಟ್ಟಿದ್ದ. 2019ರ ಬಳಿಕ ಈತನ ಕಂಪನಿ ನಷ್ಟದ ಹಾದಿ ಹಿಡಿದಿದ್ದು ತಿಂಗಳ ಬಡ್ಡಿ ಮೊತ್ತ ಹಿಂತಿರುಗಿಸಲಾಗದೆ ನೆಪಗಳನ್ನು ಹೇಳುತ್ತ ತಿರುಗಾಡಿದ್ದ. ಈತನ ವಂಚನೆಯ ಬಗ್ಗೆ ಎರಡು ತಿಂಗಳ ಹಿಂದೆ ಬೆಳಗಾವಿ ಜಿಲ್ಲೆಯ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಹಣಕಾಸು ವಂಚನೆಯ ಬಗ್ಗೆ ಇಡಿ, ಐಟಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಬೆಳಗಾವಿ ಪೊಲೀಸರ ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದಿದ್ದರೂ, ಆ.12ರಂದು ವಿಚಾರಣೆ ಸಲುವಾಗಿ ಇಡಿ ಅಧಿಕಾರಿಗಳು ಮಂಗಳೂರಿನ ಕಚೇರಿಗೆ ಕರೆಸಿಕೊಂಡಿದ್ದರು. ಅಂದು ಇಡೀ ದಿನದ ವಿಚಾರಣೆ ಬಳಿಕ ಮರುದಿನ ಕೋರ್ಟಿಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದರು.



ಇಡಿ ತನಿಖೆಯಲ್ಲಿ ನೀಲಣ್ಣವರ್ ಸಂಸ್ಥೆಯು 2110 ಕೋಟಿ ವಂಚನೆಗೈದಿರುವುದಾಗಿ ಕಂಡುಬಂದಿತ್ತು. 2002ರ ಹಣಕಾಸು ಅಕ್ರಮ ವರ್ಗಾವಣೆ ನಿಷೇಧ ಕಾಯ್ದೆ ಮತ್ತು 2019ರ ಅಕ್ರಮ ಹೂಡಿಕೆ ಯೋಜನೆಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಸಾವಿರಾರು ಜನರಿಂದ ಹೂಡಿಕೆ ಮಾಡಿಸಿ ಹಣವನ್ನು ಸಂಗ್ರಹಿಸಿದ್ದಲ್ಲದೆ, ಆ ಹಣದಲ್ಲಿ ಶಿವಾನಂದ ನೀಲಣ್ಣವರ್ ಐಷಾರಾಮಿ ಜೀವನ ಮಾಡಿಕೊಂಡಿದ್ದ. ಪ್ರಕರಣದಲ್ಲಿ ಆರೋಪಿ ನೀಲಣ್ಣವರ್ ನನ್ನು ಇಡಿ ಅಧಿಕಾರಿಗಳು 12 ದಿನಗಳ ಕಸ್ಟಡಿಗೆ ಪಡೆದ ಹಿನ್ನೆಲೆಯಲ್ಲಿ ಆತನ ಪರ ವಕೀಲರು ಮಂಗಳೂರಿನ ಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.
ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಇಂದು ಮಂಗಳೂರಿನ ಜೆಎಂಎಫ್ ಸಿ (ಪಿಎಂಎಲ್ಎ) ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನು ನೀಡಿದರೆ ಸಾಕ್ಷ್ಯ ನಾಶದ ಬಗ್ಗೆ ಭೀತಿ ವ್ಯಕ್ತಪಡಿಸಿದ್ದರು. ಹೀಗಾಗಿ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆಮೂಲಕ ಅಂದಾಜು ನಾಲ್ಕು ಸಾವಿರ ಕೋಟಿ ಸಾಮ್ರಾಜ್ಯ ಕಟ್ಟಿದ್ದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಜೈಲು ಪಾಲಾಗಿದ್ದಾನೆ.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm